Slide
Slide
Slide
previous arrow
next arrow

ಐಆರ್‌ಬಿಯ ಮೇಲೆ ಜಿಲ್ಲಾಧಿಕಾರಿ ಹಿಡಿತ ಸಾಧಿಸಬೇಕು: ಭಾಸ್ಕರ್ ಪಟಗಾರ

300x250 AD

ಕಾರವಾರ: ಜಿಲ್ಲೆಯ ಚತುಷ್ಪಥ ಕಾಮಗಾರಿ ಹತ್ತು ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಆದರೆ ಯಾವುದೇ ಜಿಲ್ಲಾಧಿಕಾರಿಗೂ ಗುತ್ತಿಗೆ ಕಂಪನಿ ಐಆರ್‌ಬಿಯನ್ನು ಹಿಡಿತದಲ್ಲಿಟ್ಟುಕೊಳ್ಳಲು ಆಗಿಲ್ಲ. ಪ್ರಸ್ತುತ ಗಂಗೂಬಾಯಿ ಮಾನಕರ್ ಅವರು ದಿಟ್ಟ ಜಿಲ್ಲಾಧಿಕಾರಿ ಎಂದು ಕೇಳಿದ್ದು, ಅವರ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಹೇಳಿದರು.

ಜಿಲ್ಲಾಧಿಕಾರಿಗೆ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನಿನ ತೊಡಕಿದ್ದರೂ ಟೋಲ್ ವಸೂಲಿ ನಡೆಯುತ್ತಿದೆ. ಹಳೆ ಜಿಲ್ಲಾಧಿಕಾರಿ ಅಧಿಕಾರಿಗಳೊಂದಿಗೆ ಭಟ್ಕಳದಿಂದ ಕಾರವಾರದವರೆಗೆ ಹೆದ್ದಾರಿಯಲ್ಲಿ ಬಸ್‌ನಲ್ಲಿ ಪ್ರಯಾಣಿಸಿ ಕಾಮಗಾರಿ ಕುರಿತು ವರದಿ ಕೊಡುತ್ತೇವೆ ಎಂದಿದ್ದರು. ಆದರೆ ಈವರೆಗೆ ವರದಿ ಬಂದಿಲ್ಲ. ರಸ್ತೆ ಕಾಮಗಾರಿ ಪೂರ್ಣಗೊಳ್ಳುವವರೆಗೆ ಐರ್‌ಆಬಿ ಯಾವುದೇ ವಾಹನಗಳಿಂದ ಟೋಲ್ ವಸೂಲಿ ಮಾಡಬಾರದು ಎಂದು ಹೇಳಿದರು.

ಈ ಹಿಂದೆ ಜಿಲ್ಲಾಧಿಕಾರಿಗಳು ಸಾರ್ವಜನಿಕರಿಗೆ ಸಿಗುತ್ತಿರಲಿಲ್ಲ. ಆದರೆ ಈಗಿನ ಜಿಲ್ಲಾಧಿಕಾರಿಗಳು ಪ್ರತಿ ಸೋಮವಾರ ಕಚೇರಿಯಲ್ಲಿ ಸಾರ್ವಜನಿಕ ಭೇಟಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಈ ಆದೇಶವನ್ನ ತಾಲೂಕು ಮಟ್ಟದಲ್ಲಿ ತಹಶೀಲ್ದಾರ, ಉಪವಿಭಾಗಾಧಿಕಾರಿಗಳೂ ಅನ್ವಯಿಸುವಂತೆ ಮಾಡಲು ಅವರನ್ನು ಕೋರಿಕೊಂಡಿದ್ದೇವೆ. ಅಲ್ಲದೇ ತಾಲೂಕು ಕೇಂದ್ರದಲ್ಲಿ ಒಂದು ದಿನ ಜಿಲ್ಲಾಧಿಕಾರಿಗಳು ಸಾರ್ವಜನಿಕರ ಭೇಟಿಗೆ ಲಭ್ಯರಿರುವಂತೆ ಮಾಡಲು ಕೂಡ ಕೋರಿಕೊಂಡಿದ್ದೇವೆ ಎಂದರು. ಆಯುಷ್ಮಾನ್ ಭಾರತ್‌ನಲ್ಲಿ ಆಸ್ಪತ್ರೆಗಳಿಗೆ ಅನುದಾನ ಬರುತ್ತಿದ್ದರೂ ರಕ್ತ ತಪಾಸಣೆ, ಎಕ್ಸ್- ರೇಗೆ ಶುಲ್ಕ ಪಡೆಯುತ್ತಿದ್ದಾರೆ. ವೈದ್ಯರುಗಳು ಕೂಡ ಸಾರ್ವಜನಿಕರಿಗೆ ಸರಿಯಾದ ಸಮಯಕ್ಕೆ ಲಭ್ಯರಿರುವುದಿಲ್ಲ. ಆಸ್ಪತ್ರೆಗಳಿಗೆ ಜಿಲ್ಲಾಧಿಕಾರಿ ಹಠಾತ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಮಸ್ಯೆಗಳನ್ನು ಪರಿಹರಿಸಬೇಕೆಂದು ಆಗ್ರಹಿಸಿದರು.

ಅಂಗನವಾಡಿಗೆ ಸಮರ್ಪಕವಾಗಿ ಮೊಟ್ಟೆ ಪೂರೈಕೆಯಾಗತ್ತಿಲ್ಲ. ಕೊಳೆತ ಮೊಟ್ಟೆಗಳನ್ನು ವಿತರಣೆ ಮಾಡಲಾಗುತ್ತಿದೆ. ಕಳಪೆ ಆಹಾರಗಳನ್ನು ಪೂರೈಸುವ ಗುತ್ತಿಗೆದಾರನನ್ನು ತೆಗೆದುಹಾಕಬೇಕು ಎಂದು ಆಗ್ರಹಿಸಿದ ಅವರು, ಕಾರವಾರದಲ್ಲಿ ಕೈಗಾ, ಸೀಬರ್ಡ್ ಇದ್ದರೂ ಯುವಜನರಿಗೆ ಯಾವುದೇ ಉದ್ಯೋಗ ಸಿಗುತ್ತಿಲ್ಲ. ಗಡಿಭಾಗದಲ್ಲಿ ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು. ಅಲ್ಲದೇ ಇಲ್ಲಿ ಶೇ 100ರಷ್ಟು ಕನ್ನಡ ನಾಮಫಲಕ ಅಳವಡಿಸುವ ಆದೇಶ ಜಾರಿಗೊಳಿಸಬೇಕು. ಕೆಲವು ಅಧಿಕಾರಿಗಳ ಕಾರ್ಯನಿರ್ವಹಣೆಯ ಬಗ್ಗೆ ದೂರು ನೀಡಿದರೂ ಕ್ರಮವಾಗಿಲ್ಲ. ಈ ಬಗ್ಗೆಯೂ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಕೋರಿದ್ದೇವೆ ಎಂದರು.

300x250 AD

ಕುಮಟಾ ಉಪವಿಭಾಗಾಧಿಕಾರಿಯಾಗಿ ಡಿಸಿಯವರು ಈ ಹಿಂದೆ ಉತ್ತಮ ಕೆಲಸ ಮಾಡಿದ್ದರು. ಕಾರವಾರ ಕರ್ನಾಟಕದ ಗಡಿ ಭಾಗ, ಕನ್ನಡದ ವಿಚಾರ ಬಂದಾಗ ಇಲ್ಲಿ ಗಟ್ಟಿ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ. ಎಲ್ಲಾ ಭಾಷಿಕರು ಇದ್ದರೂ ಕೂಡ ಕನ್ನಡಕ್ಕೆ ಪ್ರಾಧಾನ್ಯತೆ ನೀಡಿ ಕಾಪಾಡುವ ಕೆಲಸ ಅಧಿಕಾರಿಗಳಿಂದ ಆಗಬೇಕು. ಉದ್ಯಮ ತರಲು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಬೇಕು. ಗೋವಾದಲ್ಲಿ ಕನ್ನಡಿಗರಿಗೆ ತೊಂದರೆಯಾಗುತ್ತಿದ್ದು, ಅಲ್ಲಿನ ಜಿಲ್ಲಾಡಳಿತದೊಂದಿಗೆ ಸಂಪರ್ಕ ಸಾಧಿಸಿ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದರು.

ಹೊನ್ನಾವರ ತಾಲೂಕು ಅಧ್ಯಕ್ಷ ಮಂಜುನಾಥ ಗೌಡ, ಕಾರವಾರದ ನರೇಂದ್ರ ತಳೇಕರ, ದಾಂಡೇಲಿಯ ಸಾದಿಕ್ ಮುಲ್ಲಾ, ಕುಮಟಾದ ತಿಮ್ಮಪ್ಪ ನಾಯ್ಕ, ಕಾರ್ಮಿಕ ಮುಖಂಡ ಮಂಜುನಾಥ ನಾಯ್ಕ, ಬುಧವಂತ, ಗಣಪತಿ ನಾಯ್ಕ, ಗೋಕರ್ಣ, ರೋಹಿದಾಸ ತಂಡೇಲ, ನಾಗು ಹಳ್ಳೇರ ಇದ್ದರು.

Share This
300x250 AD
300x250 AD
300x250 AD
Back to top