• Slide
  Slide
  Slide
  previous arrow
  next arrow
 • ಜಿ.ಪಂ, ತಾ.ಪಂ ಚುನಾವಣೆಗೂ ಶಕ್ತಿಮೀರಿ ಕೆಲಸ ಮಾಡಲು ಭೀಮಣ್ಣ ನಾಯ್ಕ ಕರೆ

  300x250 AD

  ಸಿದ್ದಾಪುರ: ವಿಧಾನಸಭಾ ಚುನಾವಣೆಯಲ್ಲಿ ಶಕ್ತಿಮೀರಿ ಕೆಲಸ ಮಾಡಿ ನಿಮ್ಮ ಶಾಸಕರನ್ನು ಗೆಲ್ಲಿಸಿದಂತೆ ಮುಂಬರುವ ತಾಲೂಕಾ ಹಾಗೂ ಜಿಲ್ಲಾ ಪಂಚಾಯತ ಚುನಾವಣೆಯಲ್ಲೂ ಹುಮ್ಮಸ್ಸಿನಿಂದ ಕೆಲಸ ಮಾಡುವಂತೆ ಶಾಸಕ ಭೀಮಣ್ಣ ನಾಯ್ಕ ಕರೆ ನೀಡಿದರು.

  ತಾಲೂಕಿನ ಕಾನಗೋಡು ಕಾಂಗ್ರೆಸ್ ಘಟಕದ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಸಾವಿರಾರು ಕಾರ್ಯಕರ್ತರ ಬಿಡುವಿಲ್ಲದ ಪರಿಶ್ರಮದಿಂದಾಗಿ ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಕ್ಷೇತ್ರದ ಜನ ನನ್ನ ಮೇಲೆ ಇಟ್ಟ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ. ಜನರ ನಿರೀಕ್ಷೆ ತುಂಬಾ ಇದೆ. ಹಂತ ಹಂತವಾಗಿ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತೇನೆ. ಕಾಂಗ್ರೆಸ್ ನೊಂದ ವರ್ಗಗಳಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ಚುನಾವಣೆಯ ಸಂದರ್ಭದಲ್ಲಿ ನೀಡಿದ ಆಶ್ವಾಸನೆಯಂತೆ ನಿಸ್ವಾರ್ಥವಾಗಿ ಜನಗಳ ಸೇವೆ ಮಾಡುತ್ತೇನೆ. ಹಾರ ತುರಾಯಿ ಹಾಕಬೇಡಿ. ನಿಮ್ಮ ಸಮಸ್ಯೆಯ ಅರ್ಜಿ ಕೊಡಿ ಶಕ್ತಿಮೀರಿ ಪ್ರಯತ್ನಿಸುತ್ತೇನೆ.

  ವಿಧಾನಸಭಾ ಚುನಾವಣೆಯಲ್ಲಿ ತೋರಿದ ಉತ್ಸಾಹ ತಾಲೂಕಾ ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲೂ ಇರಲಿ ಎಂದ ಅವರು, ಕಾನಗೋಡ ಗ್ರಾಮಸ್ಥರ ಬೇಡಿಕೆಗಳನ್ನು ಒಂದೊoದಾಗಿ ಬಗೆಹರಿಸಲಾಗುವುದು ಎಂದರು. ಕಾನಗೋಡ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಕೇಶವ ದೊಡ್ಮನೆ ಪ್ರಾಸ್ತಾವಿಕ ಮಾತನಾಡಿ, ಎಷ್ಟೋ ದಶಕಗಳ ನಂತರ ಶಿರಸಿ-ಸಿದ್ದಾಪುರ ಕ್ಷೇತ್ರ ಹಿಂದುಳಿದ ವರ್ಗದ ಶಾಸಕರನ್ನು ಕಂಡಿದೆ. ಬಂಗಾರಪ್ಪ ಗರಡಿಯಲ್ಲಿ ಪಳಗಿದ ಭೀಮಣ್ಣ ನಾಯ್ಕ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಹಾಗೂ ನೊಂದವರ ಪರವಾಗಿ ನಿಲ್ಲುತ್ತಾರೆ ಎಂದರು.

  300x250 AD

  ಈ ವೇಳೆ ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ದೇವಸ್ಥಾನ ಸಮಿತಿ ಅಧ್ಯಕ್ಷ ಗಣಪತಿ ನಾಯ್ಕ, ಕಾನಗೋಡ ಗ್ರಾಮ ಪಂಚಾಯ್ತಿ ಅಧ್ಯಕ್ಷ ಶಿವರಾಜ ಕೊತ್ವಾಲ್, ಸದಸ್ಯರಾದ ಎಚ್.ಕೆ.ಶಿವಾನಂದ, ವೀಣಾ ನಾಯ್ಕ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಜಿ. ನಾಗರಾಜ, ಕಾನಗೋಡ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಿ.ಐ.ನಾಯ್ಕ, ಜಿಪಂ ಮಾಜಿ ಸದಸ್ಯೆ ಇಂದಿರಾ ನಾಯ್ಕ, ವಿ.ಎನ್. ನಾಯ್ಕ ಬೇಡ್ಕಣಿ, ಬಾಲಕೃಷ್ಣ ನಾಯ್ಕ ಕೋಲಶಿರ್ಸಿ ಮತ್ತಿತರರು ಉಪಸ್ಥಿತರಿದ್ದರು. ಶಂಕರ ನಾಯ್ಕ ನಿರೂಪಿಸಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top