Slide
Slide
Slide
previous arrow
next arrow

ರಾಮಕೃಷ್ಣ ಹೆಗಡೆ ಮಾನವೀಯ ಮೌಲ್ಯಗಳನ್ನು ಇಟ್ಟುಕೊಂಡಿದ್ದ ರಾಜಕಾರಣಿ: ಪ್ರಮೋದ ಹೆಗಡೆ

300x250 AD

ಸಿದ್ದಾಪುರ: ವ್ಯಕ್ತಿಗತವಾಗಿ ನೋಡುವದನ್ನು ಸಾಮಾಜಿಕವಾಗಿ ನೋಡುವ ದೃಷ್ಟಿಕೋನ ರಾಮಕೃಷ್ಣ ಹೆಗಡೆಯವರದ್ದಾಗಿತ್ತು. ಮೌಲ್ಯಾಧಾರಿತ, ಮಾನವೀಯ ಚಿಂತನೆಗಳು ಅವರದ್ದಾಗಿತ್ತು. ರಾಜಕೀಯ ಶಾಸ್ತ್ರದಲ್ಲಿ ಆಳವಾದ ಅರಿವಿದ್ದ ಹೆಗಡೆ ಮಾನವೀಯ ಮೌಲ್ಯಗಳನ್ನು ಇಟ್ಟುಕೊಂಡು ಹೊಸದಾರಿ ಹುಡುಕಿದವರು ಎಂದು ಯಲ್ಲಾಪುರದ ಪ್ರಮೋದ ಹೆಗಡೆ ಹೇಳಿದರು.

ಅವರು ರಾಮಕೃಷ್ಣ ಹೆಗಡೆ ಚಿರಂತನ, ಧನ್ವಂತರಿ ಆಯುರ್ವೇದ ಮಹಾವಿದ್ಯಾಲಯದ ಸಭಾಭವನದಲ್ಲಿ ರಾಷ್ಟ್ರನಾಯಕ, ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಜನ್ಮ ದಿನೋತ್ಸವದ ಅಂಗವಾಗಿ ಆಯೋಜಿಸಿದ್ದ ರಾಮಕೃಷ್ಣ ಹೆಗಡೆ ಮತ್ತು ಮಹಿಳಾ ಸಬಲೀಕರಣ ಎನ್ನುವ ರಾಷ್ಟ್ರೀಯ ಚಿಂತನೆ ಕಾರ್ಯಕ್ರಮದಲ್ಲಿ ದಿಕ್ಸೂಚಿ ಮಾತುಗಳನ್ನಾಡಿದರು.

300x250 AD

ತಾತ್ವಿಕವಾದ ಸಿದ್ಧಾಂತಗಳನ್ನು ಹೊಂದಿದ್ದ ಹೆಗಡೆ ತಮಗೆ ಕಂಡುಬ0ದ ಸಂದರ್ಭಗಳ ಹಿಂದಿನ ಕಾರಣಗಳನ್ನು ಗುರುತಿಸಿ,ಆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಯೋಚಿಸಿದ ಪರಿಣಾಮ ಮಹಿಳೆಯರಿಗೆ ಹೆರಿಗೆ ಭತ್ಯೆ, ವಿಧವಾ ಮಾಸಾಶನ,ತಾಳಿಭಾಗ್ಯ, ಪಂಚಾಯತರಾಜ್ ವ್ಯವಸ್ಥೆಯಲ್ಲಿ ಮಹಿಳಾ ಮೀಸಲಾತಿ ಮುಂತಾದ ಯೋಜನೆಗಳ ಮೂಲಕ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಪ್ರಾಧಾನ್ಯತೆ ದೊರಕಿತು. ವಿದ್ಯಾರ್ಥಿಗಳ ಬಸ್ ಪಾಸ್, ಉಚಿತ ಸಮವಸ್ತç ಕೂಡ ಜಾರಿಗೆ ತಂದರು ಎಂದರು.
ಅಭ್ಯಾಗತರಾಗಿದ್ದ ಜಿಪಂ ಮಾಜಿ ಸದಸ್ಯೆ ಸುದಾ ಗೌಡ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ರಾಮಕೃಷ್ಣ ಹೆಗಡೆ ಚಿರಂತನದ ಅಧ್ಯಕ್ಷ ಡಾ|ಶಶಿಭೂಷಣ ಹೆಗಡೆ ಸ್ವಾಗತಿಸಿದರು.ಈ ಸಂದರ್ಭದಲ್ಲಿ ರಾಮಕೃಷ್ಣ ಹೆಗಡೆಯವರ ಸ್ವಂತ ತಂಗಿ ಸಾವಿತ್ರಿ ಭಟ್ಟ ಬೆಂಗಳೂರು ದಂಪತಿಗಳನ್ನು ಸಮ್ಮಾನಿಸಲಾಯಿತು.
ಸನ್ಮಾನ: ಈ ಸಂದರ್ಭದಲ್ಲಿ ಸಾಧಕಿಯರಾದ ತಜ್ಞ ವೈದ್ಯೆ ಡಾ|ಸುಮಂಗಲಾ ವೈದ್ಯ, ಶಿಕ್ಷಣ ತಜ್ಞರಾದ ಲತಾ ಮಂಗಲದಾಸ ಕಾಮತ್ ಅವರ್ಸಾ, ಜಯಂತಿ ಶಾನಭಾಗ, ಪಾರಂಪರಿಕ ಪ್ರಸೂತಿ ತಜ್ಞೆ ಕೆರಿಯಮ್ಮ ನಾಯ್ಕ ಕವಂಚೂರು ಅವರನ್ನು ಸಂಮಾನಿಸಲಾಯಿತು. ಎಂಜಿಸಿ ಪಪೂ ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಆಯುರ್ವೇದ ಕಾಲೇಜಿನ ಪ್ರಾಚಾರ್ಯೆ ಡಾ.ರೂಪಾ ಭಟ್ಟ ವಂದಿಸಿದರು. ವಿನೋದ ಭಟ್ಟ, ರಜನಿ ಹೆಗಡೆ ನಿರೂಪಿಸಿದರು.

Share This
300x250 AD
300x250 AD
300x250 AD
Back to top