Slide
Slide
Slide
previous arrow
next arrow

ವಿದ್ಯಾವಿಷಯಕ ಪರಿಷತ್ ಸಭೆಗೆ ಸದಸ್ಯರಾಗಿ ಡಾ.ಚಂದ್ರಶೇಖರ ನಾಮನಿರ್ದೇಶನ

300x250 AD

ಹಳಿಯಾಳ: ಕರ್ನಾಟಕ ವಿಶ್ವವಿದ್ಯಾಲಯ ಸಂಯೋಜಿತ ಮಹಾವಿದ್ಯಾಲಯಗಳ ಪ್ರಾಚಾರ್ಯರನ್ನು ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ ಸಭೆಗೆ ಸದಸ್ಯರನ್ನಾಗಿ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಚಂದ್ರಶೇಖರ ಲಮಾಣಿಯವರನ್ನು ನಾಮನಿರ್ದೇಶನ ಮೂಲಕ ನೇಮಿಸಲಾಗಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಕಟಣೆ ಹೊರಡಿಸಲಾಗಿದೆ.

ಇವರ ಜೊತೆ ಕುಮಟಾ, ಹುಬ್ಬಳ್ಳಿ, ಅಣ್ಣಿಗೇರಿ ಕಾಲೇಜಿನ ಪ್ರಾಚಾರ್ಯರನ್ನೂ ನಾಮನಿರ್ದೇಶನ ಮಾಡಲಾಗಿದೆ. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಡಿ ಸರಿಸುಮಾರು 220 ಮಹಾವಿದ್ಯಾಲಯಗಳಿದ್ದು, ಅವುಗಳಲ್ಲಿಯೇ ನಾಲ್ಕು ಮಹಾವಿದ್ಯಾಲಯಗಳ ಪ್ರಾಚಾರ್ಯರುಗಳು ನಾಮನಿರ್ದೇಶನಗೊಂಡಿದ್ದು, ಅದರಲ್ಲಿಯೂ ಹಳಿಯಾಳ ಪ್ರಥಮ ದರ್ಜೆ ಮಹಾವಿದ್ಯಾಲಯಕ್ಕೆ ಗೌರವ ದೊರಕಿದೆ. ಮಹಾವಿದ್ಯಾಲಯದ ಶೈಕ್ಷಣಿಕ ಚಟುವಟಿಕೆ ಗುಣಮಟ್ಟದ್ದಾಗಿರುವುದು ಕೂಡ ಸಾಬೀತಾಗುತ್ತದೆ ಎಂದು ಪ್ರಾಚಾರ್ಯರಾದ ಡಾ.ಚಂದ್ರಶೇಖರ ಲಮಾಣಿ ತಮ್ಮ ಅನಿಸಿಕೆ ಹಂಚಿಕೊ0ಡರು. ಉತ್ತರ ಕರ್ನಾಟಕದಲ್ಲಿಯೇ ಅತ್ಯಂತ ಪ್ರತಿಷ್ಠಿತ ವಿಶ್ವವಿದ್ಯಾಲಯ ದ ಗೌರವಕ್ಕೆ ಪಾತ್ರರಾಗುವುದು ಸುಲಭ ಸಾಧ್ಯವಲ್ಲವಾಗಿದ್ದು ಈ ಗೌರವವನ್ನು ಯಾವತ್ತೂ ಕಾಪಾಡಿಕೊಂಡು ಮುಂದುವರಿಯಲು ಹಾರೈಸಿ ಶಾಸಕ ಆರ್ ವ್ಹಿ ದೇಶಪಾಂಡೆ ಮತ್ತು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರುಗಳು ಅಭಿನಂದಿಸಿದ್ದಾರೆ.

300x250 AD

ಮಾಜಿ ಶಾಸಕ ಸುನೀಲ ಹೆಗಡೆ ಕೂಡ ಪ್ರಾಚಾರ್ಯರನ್ನು ಅಭಿನಂದಿಸಿ ನೂರಾರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪದವಿ ಹಂತದ ವಿದ್ಯಾಭ್ಯಾಸಕ್ಕಾಗಿ ಹಳಿಯಾಳದ ಕಾಲೇಜನ್ನೇ ಹೆಚ್ಚಾಗಿ ಆಶ್ರಯಿಸಿದ್ದು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಕಾಳಜಿಯಿಂದಾಗಿ ಮಹಾವಿದ್ಯಾಲಯವು ಇಂದು ವಿಶ್ವವಿದ್ಯಾಲಯದ ಗೌರವಕ್ಕೆ ಪಾತ್ರವಾಗಿದ್ದು ಯಾವತ್ತೂ ಈ ಗೌರವವು ಮುಂದುವರಿಯಲಿ ಎಂದು ಹಾರೈಸಿದರು. ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿ ವೃಂದವು ಪ್ರಾಚಾರ್ಯರನ್ನು ಅಭಿನಂದಿಸಿದ್ದಾರೆ.

Share This
300x250 AD
300x250 AD
300x250 AD
Back to top