• Slide
    Slide
    Slide
    previous arrow
    next arrow
  • ಗೋದಾವರಿ ಕ್ರೆಡಿಟ್ ಸೌಹಾರ್ದ ಸಹಕಾರಿಗೆ ರಾಜ್ಯ ಶ್ರೇಷ್ಠ ಸಹಕಾರಿ ಪ್ರಶಸ್ತಿ

    300x250 AD

    ಅಂಕೋಲಾ: ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನೀಡುವ ಶ್ರೇಷ್ಠ ಸಹಕಾರಿ ಪ್ರಶಸ್ತಿಯು ಗೋದಾವರಿ ಕ್ರೆಡಿಟ್ ಸೌಹಾರ್ದ ಸಹಕಾರಿಗೆ ದೊರೆತಿದೆ.

    ಈ ಪ್ರಶಸ್ತಿಯನ್ನು ರಾಘವೇಂದ್ರ ನಾಯಕ ದೇವರಬಾವಿಯವರು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಸ್ವೀಕರಿಸಿದರು. ಈ ಪ್ರಶಸ್ತಿಯನ್ನು ರಾಜ್ಯ ಸೌಹಾರ್ದ ಸಹಕಾರಿಗಳ ಪರವಾಗಿ, ಸಂಯುಕ್ತ ಸಹಕಾರಿಯ ಆಡಳಿತ ಮಂಡಳಿಯು ಆಯ್ಕೆ ಮಾಡಿ ನೀಡಿದೆ. ಗೋದಾವರಿ ಕ್ರೆಡಿಟ್ ಸೌಹಾರ್ದ ಸಹಕಾರಿ ಜಿಲ್ಲೆಯಲ್ಲಿ ಪ್ರಧಾನ ಕಛೇರಿ ಮತ್ತು 7 ಶಾಖೆಗಳನ್ನು ಹೊಂದಿದೆ. ಪ್ರತಿ ಶಾಖೆಯಲ್ಲಿಯು ಸುಸಜ್ಜಿತ ಸೌಕರ್ಯ, ಗ್ರಾಹಕರೊಡನೆ ಅತ್ಯಂತ ಗೌರವದಿಂದ ನಡೆದುಕೊಳ್ಳುವ ರೀತಿ, ಕೈಗೊಂಡ ಹಲವಾರು ಸಮಾಜಮುಖಿ ಕಾರ್ಯಗಳು ಈ ಪ್ರಶಸ್ತಿ ದೊರೆಯಲು ಕಾರಣವಾಗಿದೆ.

    300x250 AD

    ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂಯುಕ್ತ ಸಹಕಾರಿಯ ರಾಜ್ಯಾಧ್ಯಕ್ಷ ಜಿ.ನಂಜನಗೌಡ, ಉಪಾಧ್ಯಕ್ಷ ಎ.ಆರ್.ಪ್ರಸನ್ನಕುಮಾರ, ಉತ್ತರ ಕನ್ನಡ ಜಿಲ್ಲೆಯ ನಿರ್ದೇಶಕ ಮೋಹನದಾಸ ಜೆ.ನಾಯಕ ಮತ್ತು 21 ನಿರ್ದೇಶಕರುಗಳು, 4000ಕ್ಕಿಂತಲೂ ಹೆಚ್ಚಿನ ಸೌಹಾರ್ದ ಸಹಕಾರಿಗಳ ಪ್ರತಿನಿಧಿಗಳು ರಾಘವೇಂದ್ರ ನಾಯಕರವರ ಪತ್ನಿ ನೂತನ ನಾಯಕ, ಸಹೋದರ ಅಭಿಜಿತ ನಾಯಕ, ರವಿ ನಾಯಕ ಅಂಕೋಲಾ ಸೇರಿದಂತೆ ಇತರರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top