ಶಿರಸಿ : ಇಲ್ಲಿನ ಈಶ್ವರೀಯ ರಸ್ತೆಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸದ್ಭಾವನ ಸಭಾಭವನದಲ್ಲಿ ಆ.30 ರಂದು ಬುಧವಾರ ಸಂಜೆ 5.30 ಗಂಟೆಗೆ ಸಕಾರಾತ್ಮಕ ಫಲವರ್ತನಾ ವರ್ಷ ಹಾಗೂ ರಕ್ಷಾಬಂಧನ ಸಪ್ತಾಹದ ಶುಭಾರಂಭ ನಡೆಯಲಿದೆ.
ಉದ್ಘಾಟನೆಯನ್ನು ಶಿರಸಿ-ಸಿದ್ದಾಪುರ ಕ್ಷೇತ್ರ ಶಾಸಕ ಭೀಮಣ್ಣ ನಾಯ್ಕ ನೆರವೇರಿಸಲಿದ್ದು, ಈಶ್ವರೀಯ ಸಂದೇಶವನ್ನು ರಾಜಯೋಗಿನಿ ಬಿ.ಕೆ. ವೀಣಾಜಿ ನೀಡುವರು. ವಿಶೇಷ ಅತಿಥಿಗಳಾಗಿ ಪ್ರಮುಖ ಸಂಘ ಸಂಸ್ಥೆಗಳ ಅಧ್ಯಕ್ಷರು, ಹಾಗೂ ನಗರದ ಪ್ರಮುಖರು ಮತ್ತು ಗಣ್ಯರು ಸಕಾರಾತ್ಮಕ ಪರಿವರ್ತನಾ ವರ್ಷದ ಕಾರ್ಯಕ್ರಮಗಳಿಗೆ ಚಾಲನೆ ನೀಡುವರು ಎಂದು ತಿಳಿಸಲಾಗಿದೆ.
ಆ.30ಕ್ಕೆ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ರಕ್ಷಾಬಂಧನ ಸಪ್ತಾಹದ ಶುಭಾರಂಭ
