ಶಿರಸಿ : ಇಲ್ಲಿನ ಟಿಎಸ್‌ಎಸ್ ಸಮರ್ಪಣಾ ಪಶು ವೈದ್ಯ ಡಾ. ಪಿ.ಎಸ್.ಹೆಗಡೆ ಕಳೆದ ೮ ತಿಂಗಳಿಂದ ಯೋನಿಯ ಕ್ಯಾನ್ಸರ್‌ನಿಂದ ಬಳಲಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಕುಮಟಾ ವಾಲ್ಗಳ್ಳಿಯ ಗಣಪತಿ ಮಡಿವಾಳ ಇವರ ೧೦ವರ್ಷದ ಡಾಲ್ ಮೆಶನ್ ನಾಯಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಮರುಜನ್ಮ ನೀಡಿದ್ದಾರೆ.
ಯೋನಿಯಿಂದ ಗರ್ಭಕೋಶದ ಕಂಠದವರೆಗೆ ಹರಡಿದ್ದ ೧೮ ಗಡ್ಡೆಗಳನ್ನು ಒಂದೂವರೆ ಗಂಟೆಯ ಶಸ್ತ್ರಚಿಕಿತ್ಸೆ ನಡೆಸಿ ಹೊರ ತೆಗೆಯಲಾಯಿತು.
ಟಿವಿಟಿ(ಟ್ರಾನ್ಸ್ಮಿಸ್ಸಿಬಲ್ ವೆನೆರಿಯಲ್ ಟ್ಯೂಮರ್) ಎನ್ನುವ ಲೈಂಗಿಕ ರೋಗ ಹೆಣ್ಣು ಶ್ವಾನಗಳಲ್ಲಿ ಸಾಮಾನ್ಯವಾಗಿದ್ದು ಈ ಶ್ವಾನದಲ್ಲಿ ಫ್ಯಾಟಿನ್ ನೆಕ್ರೋಸಿಸ್ ರೀತಿಯ ಗಡ್ಡೆ ಇಷ್ಟೊಂದು ಪ್ರಮಾಣದಲ್ಲಿ ಹರಡಿದ್ದು ಮಾತ್ರ ವಿಶೇಷವೇ ಸರಿ, ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಅತ್ಯಂತ ಜಾಗರೂಕವಾಗಿ ರಕ್ತಸ್ರಾವವಿಲ್ಲದೆ ನಡೆದ ಈ ಶಸ್ತ್ರಚಿಕಿತ್ಸೆಗೆ ನಾಗಶ್ರೀ, ಪ್ರದೀಪ ಹೆಗಡೆ ಮತ್ತು ಶ್ರೀನಿಧಿ ಹೆಗಡೆ ಸಹಕರಿಸಿದ್ದರು.