ಯಲ್ಲಾಪುರ: ಅತಿ ವೇಗ ಹಾಗೂ ನಿಷ್ಕಾಳಜಿಯಿಂದ ಸೆಂಟ್ರಿಂಗ್ ಸಾಮಗ್ರಿ ತುಂಬಿದ್ದ ಬೊಲೆರೋ ಪಿಕ್ ಅಪ್ ವಾಹನವನ್ನು ಚಾಲಾಯಿಸಿಕೊಂಡು ಹೋಗುತ್ತಿರುವಾಗ, ಚಾಲಕನ ನಿಯಂತ್ರಣ ತಪ್ಪಿದ ಬೊಲೆರೋ ವಾಹನವು ರಸ್ತೆಯ ಅಂಚಿನಲ್ಲಿರುವ ಮರಕ್ಕೆ ಡಿಕ್ಕಿಯಾಗಿ ಬೊಲೆರೋ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಹನುಮಂತ ಎಂಬಾತ ಮೃತಪಟ್ಟ ಘಟನೆ ಯಲ್ಲಾಪುರ ತಾಲೂಕಿನ ಮಳಲಗಾಂವ್-ಮಾಗೋಡ ರಸ್ತೆಯ ಚಂದಗುಳಿ ಕ್ರಾಸ್ ಸಮೀಪ ನಡೆದಿದೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮರಕ್ಕೆ ಡಿಕ್ಕಿಯಾದ ಬೊಲೆರೋ; ಓರ್ವನ ಸಾವು
