Slide
Slide
Slide
previous arrow
next arrow

ಅಡಿಕೆ ಬೆಳೆಯಲ್ಲಿ ಎಲೆಚುಕ್ಕೆ ರೋಗ; ರೈತರಿಗೆ ಸಲಹೆ

300x250 AD

ಕಾರವಾರ: ಅಡಿಕೆ ಬೆಳೆಯು ಮುಖ್ಯವಾಗಿ ಮಲೆನಾಡು, ಕರಾವಳಿ ಹಾಗೂ ಮೈದಾನ ಪ್ರಾಂತ್ಯದ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಕಳೆದ ವರ್ಷದಿಂದ ಅಡಿಕೆ ಬೆಳೆಗೆ ಎಲೆ ಚುಕ್ಕೆ ರೋಗವು ಮಲೆನಾಡು ಮತ್ತು ಕರಾವಳಿಯ ಕೆಲ ಪ್ರದೇಶಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವುದರಿಂದ ಬೆಳೆಗಾರರು ಆಂತಕಕ್ಕೆ ಒಳಗಾಗಿದ್ದಾರೆ. ರೋಗದಿಂದಾಗಿ ಅಡಿಕೆಯಲ್ಲಿ ಇಳುವರಿ ಕುಂಠಿತವಾಗುತ್ತಿದ್ದು, ನಿರ್ದಿಷ್ಟ ಅವಧಿಯಲ್ಲಿ ಸರಿಯಾದ ನಿರ್ವಹಣಾ ಕ್ರಮಗಳನ್ನು ಅಳವಡಿಸಿಕೊಂಡಿದ್ದೇ ಆದಲ್ಲಿ ರೋಗದ ಬಾಧೆ ಹಾಗೂ ಹರಡುವಿಕೆಯನ್ನು ಸಂಪೂರ್ಣವಾಗಿ ತಡೆಗಟ್ಟಬಹುದು.
ನಿರ್ವಹಣೆ ಕ್ರಮಗಳು: ರೋಗ ಬಾಧಿತ ಒಣಗಿದ ಗರಿಗಳನ್ನು ತೆಗೆದು ಕತ್ತರಿಸಿ ನಾಶಪಡಿಸುವುದರಿಂದ ರೋಗಾಣುವಿನ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಯಬಹುದು. ಬಿಸಿಲು ಬೀಳುವಂತೆ ಮಾಡಲು ಅಂತರ ಬೆಳೆಗಳ ಅಥವಾ ಕಾಡು ಮರಗಳ ಹೆಚ್ಚುವರಿ ರೆಂಬೆಗಳನ್ನು ಕತ್ತರಿಸಿ ತೆಗೆಯಬೇಕು. ಮರಗಳ ಉತ್ತಮ ಬೆಳವಣಿಗೆಗೆ ಕೊಟ್ಟಿಗೆ ಗೊಬ್ಬರದ ಜೊತೆಗೆ ಶಿಫಾರಿತ ಪೋಷಕಾಂಶ ಸಾರಜನಕ, ರಂಜಕ, ಫೊಟ್ಯಾಶಿಯಂ 100 ಗ್ರಾಂ, 40 ಗ್ರಾಂ, 140 ಗ್ರಾಂ ಪ್ರತಿ ಮರಕ್ಕೆ ನೀಡಬೇಕು.
ಶಿಲೀಂಧ್ರ ನಾಶಕಗಳ ಬಳಕೆ: ಹೆಕ್ಸಕೋನಾಜೋಲ್ 5% ಎಸ್.ಸಿ./ಇ.ಸಿ. ಅಥವಾ ಪ್ರೊಪಿಕೋನಜೋಲ್ 25% ಇ.ಸಿ. ಅಂತರ ವ್ಯಾಪ್ತಿ ಶಿಲೀಂಧ್ರ ನಾಶಕಗಳನ್ನು 1 ಮಿ.ಲೀ. ಜೊತೆಗೆ ಅಂಟು ದ್ರಾವಣ 1ಮಿ.ಲೀ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ರೋಗದ ಬಾಧೆಯು ಅಂತರ ಬೆಳೆಯಾದ ಕಾಳುಮೆಣಸು ಬೆಳೆಗೂ ಸಹ ಹರಡುವುದರಿಂದ ಇವುಗಳಿಗೂ ಸಹ ಸಿಂಪಡಣೆ ಮಾಡಬೇಕು ಅಥವಾ 1% ಬೋರ್ಡೋ ದ್ರಾವಣ ಅಥವಾ 0.3%ರ ತಾಮ್ರದ ಆಕ್ಸಿಕ್ಲೋರೈಡ್ ಶಿಲೀಂಧ್ರ ನಾಶಕಗಳನ್ನು ಒಂದು ಲೀಟರ್ ನೀರಿನೊಂದಿಗೆ ಅಂಟು ದ್ರಾವಣ ಜೊತೆ ಬೆರೆಸಿ ಸಿಂಪಡಿಸುವುದು.
ರೋಗ ಲಕ್ಷಣದ ಪ್ರಾರಂಭದಲ್ಲಿ ಮುಂಜಾಗ್ರತಾ ಕ್ರಮವಾಗಿ ಮ್ಯಾಂಕೋಜೆಬ್ 63% ಮತ್ತು ಕಾರ್ಬೋಜಿಯಮ್ 12% 2 ಗ್ರಾಂ. ನ್ನು ಒಂದು ಲೀಟರ್ ನೀರಿನ ಜೊತೆಗೆ, ಅಂಟು ದ್ರಾವಣ 1ಮಿ.ಲೀ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಸಾವಯವ ಕೃಷಿಯಲ್ಲಿ 1% ಸುಡೊಮೋನಾಸ್ ಫ್ಯೂರೊಸನ್ಸ್ ಜೈವಿಕ ಶಿಲೀಂಧ್ರ ನಾಶಕವನ್ನು ಸಿಂಪಡಣೆ ಮಾಡಬೇಕು. ರೋಗ ಮತ್ತೆ ಕಾಣಿಸಿಕೊಂಡಲ್ಲಿ ಮೇಲೆ ತಿಳಿಸಿದ ಯಾವುದಾದರೊಂದು ಶಿಲೀಂಧ್ರ ನಾಶಕಗಳನ್ನು 20-25 ದಿನಗಳ ಅಂತರದಲ್ಲಿ ಸಿಂಪಡಣೆಯನ್ನು ಪುನರಾವರ್ತಿಸಬೇಕು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top