Slide
Slide
Slide
previous arrow
next arrow

ಅನಧಿಕೃತ ಮರಳುಗಾರಿಕೆ ತಡೆಗೆ ಆಗ್ರಹ

300x250 AD

ಕಾರವಾರ: ಕಾಳಿ ನದಿ ಪಾತ್ರದಲ್ಲಿ ಬೃಹತ್ ಪ್ರಮಾಣದಲ್ಲಿ ಅನಧಿಕೃತವಾಗಿ ಮರಳುಗಾರಿಕೆ ನಡೆಯುತ್ತಿದ್ದು, ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಕಾಳಿ ನದಿ ಉಸುಕು ಗುತ್ತಿಗೆದಾರರ ಸಂಘ ಆಗ್ರಹಿಸಿದೆ.

ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿರುವ ಗುತ್ತಿಗೆದಾರರು, ಅಧಿಕೃತ ಮರಳು ಪರವಾನಿಗೆದಾರರು ಎನ್‌ಜಿಟಿ ಆದೇಶದಂತೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶನದಂತೆ ಅನಧಿಕೃತವಾಗಿ ಮರಳುಗಾರಿಕೆ ಮಾಡದೇ ಅಧಿಕೃತವಾಗಿ ಸರ್ಕಾರಕ್ಕೆ ಮರಳಿನ ರಾಜಧನ ತುಂಬಿ ಮರಳುಗಾರಿಕೆಯನ್ನು ಮಾಡುವ ಆಶಾಭಾವನೆಯನ್ನು ಇಟ್ಟುಕೊಂಡಿದ್ದೇವೆ. ಆದರೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯವರು ಮರಳು ಪರವಾನಿಗೆದಾರರಿಗೆ ಕಾನೂನು ಪ್ರಕಾರ ಮರಳುಗಾರಿಕೆಯನ್ನು ನಿಲ್ಲಿಸಿದ್ದು, ಅನಧಿಕೃತವಾಗಿ ಮರಳುಗಾರಿಕೆಯನ್ನು ಮಾಡುವವರಿಗೆ ಪ್ರೋತ್ಸಾಹಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಪೊಲೀಸ್ ಇಲಾಖೆಯವರು ಕೂಡ ಅಕ್ರಮ ಮರಳುಗಾರಿಕೆಗೆ ಪ್ರೋತ್ಸಾಹ ನೀಡಿದ್ದು, ಅನಧಿಕೃತ ಮರಳುಗಾರಿಕೆಯನ್ನು ತಡೆಗಟ್ಟಲು ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಆಯಾ ತಾಲೂಕಿನಲ್ಲಿ ಮರಳು ಟಾಸ್ಕ್ ಫೋರ್ಸ್ ಕಮಿಟಿ ಮಾಡಲಾಗಿದೆ. ಆದರೆ ಇದು ಕೂಡ ನಿಷ್ಕ್ರಿಯವಾಗಿದ್ದು, ಅಕ್ರಮ ಮರಳುಗಾರಿಕೆಗೆ ಅನುವು ಮಾಡಿಕೊಟ್ಟಂತಾಗಿದೆ. ಈ ಮೊದಲು ಸಂಬಂಧಪಟ್ಟ ಪೊಲೀಸ್ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಉಪವಿಭಾಗಾಧಿಕಾರಿಗೆ ಹಲವು ಬಾರಿ ಮನವಿ ನೀಡಿದರೂ ಪ್ರಯೋಜನವಾಗಲಿಲ್ಲ. ಆದ್ದರಿಂದ ಕಾಳಿ ನದಿ ಪಾತ್ರದ ಸದಾಶಿವಗಡ ಕಣಸಗೇರಿ, ಹೋಟೆಗಾಳಿ, ಹಣಕೋಣ ಜೂಗ ಬ್ರಿಜ್ ಹತ್ತಿರ, ಹಳಗಜೂಗ್, ಉಳಗಾ, ಬೈರೆ, ಬೋಳೆ, ಕೆರವಡಿ, ಕೆರವಡಿ ಕರ್ಕಲ್, ಸಿದ್ದರ ಐಟಿಐ ಕಾಲೇಜ್ ಹತ್ತಿರ, ನಂದನಗದ್ದಾ ಸುಂಕೇರಿಯ ಗಾಬೀತವಾಡಾ, ಶಿವಾಜಿವಾಡಾ, ಗಜ್ಗೇದೇವಿ ಟೆಂಪಲ್, ಜಗತ್ ಕಟ್ಟಾ ಹತ್ತಿರ ರಾಜಾರೋಷವಾಗಿ ಅಕ್ರಮ ಮರಳುಗಾರಿಕೆಯನ್ನು ಮಾಡಲಾಗುತ್ತಿದೆ. ತಕ್ಷಣವೇ ಈ ಜಾಗದಲ್ಲಿ ಅಕ್ರಮ ಮರಳುಗಾರಿಕೆಯನ್ನು ನಿಲ್ಲಿಸಬೇಕು, ಇಲ್ಲದಿದ್ದಲ್ಲಿ ನಮಗೂ ಅನಧಿಕೃತವಾಗಿ ಮರಳುಗಾರಿಕೆಗೆ ಅನುವು ಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top