Slide
Slide
Slide
previous arrow
next arrow

ಸಿದ್ದಾಪುರ ಟಿಎಂಎಸ್‌ಗೆ ರೂ.7.78 ಕೋಟಿ ನಿಕ್ಕಿ ಲಾಭ: ಆರ್.ಎಮ್.ಹೆಗಡೆ ಬಾಳೇಸರ

300x250 AD

ಸಿದ್ದಾಪುರ: ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘವು ಸಹಕಾರಿತತ್ವದ ಮೂಲಕ ಅಡಿಕೆ ಬೆಳೆಗಾರರಿಗೆ, ಸದಸ್ಯರಿಗೆ ಬಹುಮುಖಿಯಾಗಿ ನೆರವಾಗುತ್ತಿದ್ದು, 2022-23ನೇ ಸಾಲಿನಲ್ಲಿ ರೂ.10.83 ಕೋಟಿ ನಿವ್ವಳ ಲಾಭ ಗಳಿಸಿದ್ದು, ನಿಧಿಗಳನ್ನು ತೆಗೆದಿರಿಸಿದ ನಂತರದಲ್ಲಿ ರೂ. 7.78 ಕೋಟಿಯಷ್ಟು ನಿಕ್ಕಿ ಲಾಭ ಗಳಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಂಘದ ನಿಷ್ಠಾವಂತ ಹಾಗೂ ಅಭಿಮಾನಿ ಸದಸ್ಯರ ಸಂಪೂರ್ಣ ಸಹಕಾರ, ಅನುಭವಿ ಆಡಳಿತ ಮಂಡಳಿಯ ಸದಸ್ಯರ ಮಾರ್ಗದರ್ಶನ ಹಾಗೂ ಸೇವಾ ಮನೋಭಾವ ಹಾಗೂ ಕರ್ತವ್ಯನಿಷ್ಠೆಯ ಸಿಬ್ಬಂದಿಗಳ ಕಾಯಕದಿಂದ ಮತ್ತು ವ್ಯವಹಾರದಲ್ಲಿನ ಅಚ್ಚುಕಟ್ಟುತನ, ಶಿಸ್ತು, ಪ್ರಮಾಣಿಕತೆಯಿಂದ ಆರ್ಥಿಕವಾಗಿ ಸಂಘದ ಇತಿಹಾಸದಲ್ಲಿಯೇ ದಾಖಲೆಯ ಲಾಭವಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದರು.

300x250 AD

ಪ್ರಸ್ತುತ ಸಂಘದಲ್ಲಿ 3519 ಶೇರುದಾರ ಸದಸ್ಯರಿದ್ದು, 1.64 ಕೋಟಿ ಶೇರು ಬಂಡವಾಳ ಹೊಂದಿರುತ್ತದೆ. ಸುಮಾರು 4800 ನಾಮಮಾತ್ರ ಸದಸ್ಯರಿದ್ದು, 2022-23ನೇ ಸಾಲಿನಲ್ಲಿರೂ 246 ಕೋಟಿ ವಹಿವಾಟು ನಡೆಸಲಾಗಿದೆ. ಸಂಚಿತ ನಿಧಿಗಳ ಮೊತ್ತರೂ. 52.20 ಕೋಟಿಯಷ್ಟಿದೆ. ರೂ. 98.04 ಕೋಟಿ ಠೇವುಗಳನ್ನು ಸಂಗ್ರಹಿದ್ದು, ದುಡಿಯುವ ಬಂಡವಾಳವು ರೂ 202.01 ಕೋಟಿ ತಲುಪಿರುತ್ತದೆ. ವಿಕ್ರಿಯಿಸಿದ ಮಹಸೂಲು ರೂ.226.82 ಕೋಟಿಯಾಗಿದ್ದು, ವರದಿಯ ವರ್ಷದಲ್ಲಿ ಕೇಂದ್ರ ಕಚೇರಿಯಲ್ಲಿರೂ. 5.32 ಕೋಟಿ, ಕಾನಸೂರ ಶಾಖೆಯಲ್ಲಿ 1.75 ಕೋಟಿ, ಮಾರಾಟ ಮಳಿಗೆ ಶಿರಸಿಯಲ್ಲಿ ರೂ. 1.24 ಕೋಟಿ, ಕೃಷಿ ವಿಭಾಗದಲ್ಲಿರೂ. 5.99 ಲಕ್ಷ, ದವಸಧಾನ್ಯ ವಿಭಾಗದಲ್ಲಿ ರೂ.17.45 ಲಕ್ಷ, ನಿಯಂತ್ರಣ ವಿಭಾಗದಲ್ಲಿ ರೂ.7.12 ಲಕ್ಷ,ಲಾಭಗಳಿಸಿದ್ದು, ಔಷಧಿ ವಿಭಾಗದಲ್ಲಿ ರೂ.4.08 ಲಕ್ಷ, ಅಡಿಕೆ ಖರೀದಿ ವಿಭಾಗದಲ್ಲಿ ರೂ.71.94 ಲಕ್ಷ ದವಸಧಾನ್ಯ ಎಪಿಎಮ್‌ಸಿ ವಿಭಾಗದಲ್ಲಿ ರೂ.1.27ಲಕ್ಷ, ಅಕ್ಕಿ ಗಿರಣಿ ವಿಭಾಗದಲ್ಲಿ ರೂ.5.72 ಲಕ್ಷ ಹಾಗೂ ಕಟ್ಟಡ ಸಾಮಾಗ್ರಿ ವಿಭಾಗದಲ್ಲಿ ರೂ.1.23 ಲಕ್ಷ ಹಾನಿ ಅನುಭವಿಸಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಎಂ.ಜಿ.ನಾಯ್ಕ ಹಾದ್ರಿಮನೆ, ವ್ಯವಸ್ಥಾಪಕ ಸತೀಶ ಎಸ್.ಹೆಗಡೆ ಹೆಗ್ಗಾರಕೈ, ನಿರ್ದೇಶಕರುಗಳಾದ ಕೆ.ಕೆ.ನಾಯ್ಕ ಸುಂಕತ್ತಿ, ಎಂ.ಎನ್.ಹೆಗಡೆ ತಲೆಕೇರಿ, ಜಿ.ಎಂ.ಭಟ್ಟ ಕಾಜಿನಮನೆ, ರಮೇಶ ಹೆಗಡೆ ಕೊಡ್ತಗಣಿ, ಜಿ.ಆರ್.ಹೆಗಡೆ ಹಳದೋಟ, ಸುಧೀಋ ಗೌಡರ್ ಬಾಳೆಕುಳಿ, ನಾರಾಯಣ ಡಿ.ನಾಯ್ಕ ಕೋಲಶಿರ್ಸಿ, ಪರಶುರಾಮ ನಾಯ್ಕ ಮೂಗದೂರು, ಸಿ.ಎನ್.ಹೆಗಡೆ ತೆಂಗಾರಮನೆ, ಗಣಪತಿ ಹಸ್ಲರ್ ಕುಡಗುಂದ, ಸುಬ್ರಾಯ ಹೆಗಡೆ ಸಾಯಿಮನೆ, ಇಂದಿರಾ ಭಟ್ಟ ಗುಡ್ಡೆಕೊಪ್ಪ ಲಕ್ಷ್ಮಿನಾರಾಯಣ ಹೆಗಡೆ ಬಾಳೆಕುಳಿ ಉಪಸ್ಥಿತರಿದ್ದರು.

ವಾರ್ಷಿಕ ಸಾಧಾರಣ ಸಭೆ
ಆ.21ರ ಮಧ್ಯಾಹ್ನ 5 ಗಂಟೆಗೆ ಕಾನಸೂರ ಶಾಖೆಯಲ್ಲಿ, 22ರಂದು ಶಿರಸಿ ಮಾರಾಟ ಮಳಿಗೆಯಲ್ಲಿ ಸಹಕಾರಿ ಸಭೆಯನ್ನು ಕರೆಯಲಾಗಿದೆ. 23ರ ಮಧ್ಯಾಹ್ನ 3 ಘಂಟೆಗೆ ಸಂಘದ ವ್ಯಾಪಾರಾಂಗಣದಲ್ಲಿ ವಾರ್ಷಿಕ ಸಾಧಾರಣ ಸಭೆಯನ್ನು ಕರೆಯಲಾಗಿದೆ. ಸಂಘದ ಯಾವತ್ತೂ ಸದಸ್ಯರು ಸಭೆಗೆ ಆಗಮಿಸಬೇಕಾಗಿ ಕೋರಿದೆ.
ಸಭೆಯ ಕಾರ್ಯಕಲಾಪಗಳು ಮುಗಿದ ನಂತರದಲ್ಲಿ ಸಮಯಮಿತಿ ಪೌರಾಣಿಕ ಯಕ್ಷಗಾನ ತಾಳಮದ್ದಲೆ ಕಾರ‍್ಯಕ್ರಮವಿರುತ್ತದೆ. ಹಿಮ್ಮೆಳದಲ್ಲಿ ಸರ್ವಶ್ರೀ ಕೇಶವ ಹೆಗಡೆ ಕೊಳಗಿ. ಶಂಕರ ಭಾಗವತ್‌ಯಲ್ಲಾಪುರ, ವಿಘ್ನೇಶ್ವರ ಕೆಸರಕೊಪ್ಪ, ಮುಮ್ಮೇಳದಲ್ಲಿ ಸರ್ವಶ್ರೀ ಜಬ್ಬರ ಸುಮೋ, ಗ.ನಾ ಭಟ್ ಮೈಸೂರು, ಗಣರಾಜ ಕುಂಬ್ಳೆ, ಗಣಪತಿ ಹೆಗಡೆ ಗುಂಜಗೋಡ ಇವರುಗಳು ಆಗಮಿಸಲಿದ್ದಾರೆ.

Share This
300x250 AD
300x250 AD
300x250 AD
Back to top