Slide
Slide
Slide
previous arrow
next arrow

ಜ್ಞಾನಾಮೃತ ದಾಸೋಹ ಕಾರ್ಯಕ್ರಮಕ್ಕೆ ಅಣಿಯಾದ ಶ್ರೀಮೃತ್ಯುಂಜಯ ಮಠ

300x250 AD

ದಾಂಡೇಲಿ: ಕಳೆದ ಅನೇಕ ವರ್ಷಗಳಿಂದ ಶ್ರಾವಣ ಮಾಸದಲ್ಲಿ ಒಂದು ತಿಂಗಳು ನಿರಂತರ ಶಿವ ಶರಣರ ಜ್ಞಾನಮೃತ ದಾಸೋಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿರುವ ನಗರದ ಸಮೀಪದಲ್ಲಿರುವ ಕೋಗಿಲಬನದ ಶ್ರೀಮೃತ್ಯುಂಜಯ ಮಠದಲ್ಲಿ ಗುರುವಾರದಿಂದ ಶ್ರಾವಣ ಮಾಸದ ನಿಮಿತ್ತ ನಿರಂತರ ಒಂದು ತಿಂಗಳು ಶಿವ ಶರಣರ ಜ್ಞಾನಮೃತ ದಾಸೋಹ ಕಾರ‍್ಯಕ್ರಮವನ್ನು ಏರ್ಪಡಿಸಲಾಗಿದೆ.

ನಗರದ ಶ್ರೀವೀರಶೈವ ಸೇವಾ ಸಂಘ ಕಮೀಟಿಯ ಆಶ್ರಯದಲ್ಲಿ ಈ ಕಾರ‍್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬರಲಾಗುತ್ತಿದೆ. ಗದಗ ಜಿಲ್ಲೆಯ ನವಲಗುಂದ ತಾಲ್ಲೂಕಿನ ವೇದಮೂರ್ತಿ ಶ್ರೀವೀರಯ್ಯಾ ಶಾಸ್ತ್ರಿಗಳವರಿಂದ ಪ್ರತಿದಿನ ಪ್ರವಚನ ಕಾರ‍್ಯಕ್ರಮ ನಡೆಯಲಿದೆ. ಪ್ರವಚನ ಮತ್ತು ಅನ್ನದಾಸೋಹ ಕಾರ‍್ಯಕ್ರಮದ ನಿಮಿತ್ತವಾಗಿ ಸ್ವಚ್ಛತಾ ಶ್ರಮದಾನ ಹಾಗೂ ಇನ್ನಿತರ ಪೂರ್ವ ತಯಾರಿ ಕಾರ‍್ಯಗಳು ಭರದಿಂದ ನಡೆದಿದ್ದು, ಶ್ರೀವೀರಶೈವ ಸೇವಾ ಸಮಿತಿಯ ಕಾರ‍್ಯದರ್ಶಿ ಚಂದ್ರು ಮಾಳಿ ಹಾಗೂ ಸೇವಾ ದಳದ ನಾಗರಾಜ ಅನಂತಪುರ, ಲಿಂಗಯ್ಯಾ ಪೂಜಾರ್, ಬಾಳಪ್ಪಾ.ಎಲ್.ಕೆ, ಪ್ರಕಾಶ್ ಪಾಟೀಲ್, ಮಹಾಲಿಂಗ ಅಸೋದೆ, ಮಹದೇವಪ್ಪಾ, ಮಂಜು ಪೂಜಾರಿ ಮೊದಲಾದವರು ಸ್ವಚ್ಛತಾ ಕರ‍್ಯದಲ್ಲಿ ಭಾಗಿಯಾಗಿದ್ದರು. ಶಿವ ಶರಣರ ಜ್ಞಾನಮೃತ ದಾಸೋಹ ಕರ‍್ಯಕ್ರಮದ ಯಶಸ್ಸಿಗೆ ಬಸವರಾಜ ಕಲಶೆಟ್ಟಿಯವರ ಅಧ್ಯಕ್ಷತೆಯ ವೀರಶೈವ ಸೇವಾ ಸಂಘವು ಅವಿಶ್ರಾಂತ ಶ್ರಮಿಸುತ್ತಿದೆ.

300x250 AD
Share This
300x250 AD
300x250 AD
300x250 AD
Back to top