ದಾಂಡೇಲಿ: ಉತ್ತರ ಕನ್ನಡವನ್ನು ಬರಗಾಲ ಪೀಡಿತ ಜಿಲ್ಲೆಯನ್ನಾಗಿ ಘೋಷಣೆ ಮಾಡಿ ಅಗತ್ಯ ಪರಿಹಾರದ ಜೊತೆಗೆ ಮೂಲಸೌಕರ್ಯವನ್ನು ಒದಗಿಸಿಕೊಡುವಂತೆ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತರಾಮ ನಾಯ್ಕ ಆಗ್ರಹಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಕ್ತ ಪ್ರಮಾಣದಲ್ಲಿ ಮಳೆಯಾಗದೇ ರೈತರು ಕಂಗಲಾಗಿದ್ದಾರೆ. ಕೃಷಿ ಚಟುವಟಿಕೆ ಅರ್ಧದಲ್ಲೆ ಸ್ಥಗಿತಗೊಂಡಿದೆ. ಅಡಿಕೆ, ತೆಂಗು ಮೊದಲಾದ ತೋಟಗಾರಿಕೆ ಬೆಳೆಗಳು ರೋಗಬಾಧೆಗೆ ತುತ್ತಾಗಿ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಜೂನು ತಿಂಗಳಲ್ಲಿ ಮಳೆ ಬಂದಿರಲಿಲ್ಲ. ಜುಲೈ ತಿಂಗಳಲ್ಲಿ ಮಳೆ ಬಂದಿದೆ. ಆದರೆ ಮತ್ತೇ ಆಗಸ್ಟ್ ತಿಂಗಳಲ್ಲಿಯೂ ಮಳೆ ಬಂದಿಲ್ಲ. ಹೀಗಿರುವಾಗ ಜಿಲ್ಲೆಯ ಭತ್ತದ ನಾಟಿ ಅರ್ಧದಲ್ಲೆ ನಿಂತಿರುವುದು ಒಂದೆಡೆಯಾದರೇ, ನಾಟಿ ಮಾಡಿದ ಭತ್ತ ನಾಟಿ ಅರ್ಧದಲ್ಲೆ ಒಣಗುವ ಸ್ಥಿತಿ ನಿರ್ಮಾಣವಾಗಿದೆ. ಒಟ್ಟಿನಲ್ಲಿ ಜಿಲ್ಲೆಯ ರೈತರು ಕಂಗಲಾಗಿದ್ದಾರೆ ಎಂದು ತಿಳಿಸಿದ್ದಾರೆ.