Slide
Slide
Slide
previous arrow
next arrow

ರೋಟರಿ ಕ್ಲಬ್‌ನಿಂದ ವಿದ್ಯಾರ್ಥಿಗಳ ದಂತ ತಪಾಸಣೆ ಶಿಬಿರ

300x250 AD

ಕಾರವಾರ: ಇಲ್ಲಿನ ರೋಟರಿ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ಉಪಯೋಗವಾಗಲೆಂದು ಕುವೆಂಪು ಪುನರ್ವಸತಿ ತೊಡೂರ ಶಾಲೆಯಲ್ಲಿ ದಂತ ತಪಾಸಣೆ ಶಿಬಿರ ಕಾರ್ಯಕ್ರಮ ಆಯೋಜಿಸಲಾಗಿತ್ತು. 

ರೋಟರಿ ಕ್ಲಬ್‌ನ ಅಧ್ಯಕ್ಷ ಡಾ.ಸಮೀರ ನಾಯಕ ವಿದ್ಯಾರ್ಥಿಗಳ ದಂತ ತಪಾಸಣೆ ಮಾಡಿ ಅವಶ್ಯಕ ಸಲಹೆ ಸೂಚನೆ ನೀಡಿದರು. ಎಲ್ಲ ಮಕ್ಕಳಿಗೂ ಟೂತ್ ಪೇಸ್ಟ್, ಟೂತ್ ಬ್ರಶ್ ಹಾಗೂ ನೋಟ್‌ಬುಕ್ ವಿತರಿಸಿದರು. ಈ ಸಂದರ್ಭದಲ್ಲಿ ಸಮುದಾಯ ಸೇವಾ ನಿರ್ದೇಶಕ ಗುರುದತ್ತ ಬಂಟ, ಪಿ.ಎಸ್.ನಾಯ್ಕ್, ವಿನೋದ್ ಕೊಟಾರ್ಕರ್, ಶಾಲೆಯ ಮುಖ್ಯೊಧ್ಯಾಪಕ ಅನಸೂಯಾ ಎನ್.ನಾಯಕ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top