ದಾಂಡೇಲಿ: ನಗರದ ವೆಸ್ಟ್ಕೋಸ್ಟ್ ಕಾಗದ ಕಾರ್ಖಾನೆಯಲ್ಲಿ 77ನೇ ಸ್ವಾತಂತ್ರೋತ್ಸವವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ರಾಜೇಂದ್ರ ಜೈನ್ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡುತ್ತಾ, ಭವ್ಯ ಪರಂಪರೆಯನ್ನು ಹೊಂದಿರುವ ದೇಶ ಭಾರತ. ಬ್ರಿಟೀಷರ ಕಪಿಮುಷ್ಟಿಯಲ್ಲಿದ್ದ ದೇಶದ ಸ್ವಾತಂತ್ರ್ಯಕ್ಕಾಗಿ ನಿರಂತರ ಹೋರಾಟಗಳು ನಡೆದು, ಅದೆಷ್ಟೋ ತ್ಯಾಗ ಬಲಿದಾನಗಳು ನಡೆದಿದೆ. ಅಂದು ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೆ ಒತ್ತೆಯಿಟ್ಟು ಹೋರಾಟ ಮಾಡಿದ ಹೋರಾಟಗಾರರ ಕೆಚ್ಚೆದೆಯ ಹೋರಾಟದ ಫಲದಿಂದ ಸ್ವತಂತ್ರ ಭಾರತದ ಪ್ರಜೆಗಳಾಗಲು ಸಾಧ್ಯವಾಗಿದೆ. ಉತ್ತಮ ಸಂಸ್ಕಾರ, ನಡವಳಿಕೆಗಳನ್ನು ಮೈಗೂಡಿಸಿಕೊಂಡು, ದೇಶದ ಪ್ರಗತಿಗೆ ನಮ್ಮನ್ನು ನಾವು ತೊಡಗಿಸಿಕೊಂಡಾಗ ಮಾತ್ರ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯ, ಈ ನಿಟ್ಟಿನಲ್ಲಿ ಭವ್ಯ ರಾಷ್ಟ್ರ ನಿರ್ಮಾಣಕ್ಕೆ 77ನೇ ಸ್ವಾತಂತ್ರ್ಯೋತ್ಸವ ನಮಗೆಲ್ಲರಿಗೂ ಪ್ರೇರಣೆಯಾಗಲೆಂದು ಹೇಳಿ ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ಕೋರಿದರು.
ಈ ಸಂದರ್ಭದಲ್ಲಿ ಸಿಮಿ ರಾಜೇಂದ್ರ ಜೈನ್, ಕಾರ್ಖಾನೆಯ ಅಧಿಕಾರಿಗಳಾದ ಅಶೋಕ್ ಶರ್ಮಾ, ರವಿ ಗೌತಮ್, ವೇಲು, ವಿಜಯ ಮಹಾಂತೇಶ್, ರಾಘವೇಂದ್ರ ರಾವ್, ರಾಜೇಶ್ ತಿವಾರಿ, ಸಂಜಯ್ ಹುಕ್ಕೇರಿಕರ್, ಬ್ರಿಜ್ ಮೋಹನ್, ಅಣ್ಣ ಗೌಡ, ಕಾರ್ಖಾನೆಯ ಭದ್ರತಾ ಅಧಿಕಾರಿಗಳಾದ ಕುಶಾಲಪ್ಪ ಗೌಡ, ಸುರೇಶ್ ಪಾಟೀಲ್ ಸೇರಿದಂತೆ ಕಾಗದ ಕಾರ್ಖಾನೆಯ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಭದ್ರತಾ ಸಿಬ್ಬಂದಿಗಳು ಉಪಸ್ಥಿತರಿದ್ದರು. ವೆಸ್ಟ್ಕೋಸ್ಟ್ ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ್ ತಿವಾರಿಯವರು ಸ್ವಾಗತಿಸಿ, ವಂದಿಸಿದರು. ಕರ‍್ಯಕ್ರಮದ ಯಶಸ್ಸಿಗೆ ಕಾಗದ ಕಾರ್ಖಾನೆಯ ಸ್ಪೋಟ್ಸ್ & ವೆಲ್ಪೇರ್ ವಿಭಾಗದ ಸಿಬ್ಬಂದಿಗಳಾದ ಬಶೀರ್ ಅಹ್ಮದ್, ರಾಜು, ಮಹೇಶ್ ನಾಯ್ಕ, ಅಬ್ದುಲ್, ಸಂತೋಷ್ ಮೊದಲಾದವರು ಶ್ರಮಿಸಿದ್ದರು.