• Slide
  Slide
  Slide
  previous arrow
  next arrow
 • ಮುಂದಿನ ಪೀಳಿಗೆಗೆ ಸ್ವಾತಂತ್ರ್ಯದ ಸವಿರುಚಿ ಹಂಚೋಣ: ಆರ್.ಎನ್.ಭಟ್ಟ ಸುಗಾವಿ

  300x250 AD

  ಶಿರಸಿ: ಶಾಲ್ಮಲಾ ನದೀ ತೀರದಲ್ಲಿರುವ ಐತಿಹಾಸಿಕ ಹಿನ್ನೆಲೆಯ ಸೋಂದಾ ಕೋಟೆ ಹಿಂದೆ ಸೋಂದಾ ಅರಸರ ರಾಜಧಾನಿ ಸ್ಥಳವಾಗಿ ಉಚ್ಛಾಯ ಸ್ಥಿತಿಯಲ್ಲಿದ್ದು, ಅರಸರ ಕಾಲಾನಂತರ ಅವನತಿ ಹೊಂದಿತ್ತು. ಇದನ್ನು ಬ್ರಿಟಿಷ್ ಸರಕಾರ ತನ್ನ ಅಧೀನಕ್ಕೊಳಪಡಿಸಿಕೊಂಡಿತ್ತು. ಭಾರತ ಸ್ವತಂತ್ರವಾದ ನಂತರ ಕೇಂದ್ರ ಸರಕಾರ ತನ್ನ ವ್ಯಾಪ್ತಿಗೆ ಸೇರಿಸಿಕೊಂಡು, ಉಸ್ತುವಾರಿಗೆ ಕೇಂದ್ರ ಪ್ರಾಚ್ಯವಸ್ತು ಇಲಾಖೆಗೆ ನೀಡಿ ಸಂರಕ್ಷಣೆ ಮಾಡುತ್ತಿದೆ.

  ಇಂತಹ ಪವಿತ್ರ ಸ್ಥಳದಲ್ಲಿ ಆ.15ರ ಮುಂಜಾನೆ 9 ಘಂಟೆಗೆ ಹುಲೇಕಲ್ ನಾಡಕಛೇರಿಯ ಕಂದಾಯ ನಿರೀಕ್ಷಕ ರವಿ ಚಲುವಾದಿಯವರು ಧ್ವಜಾರೋಹಣ ಗೈದು, ಇಂದು ಸ್ವತಂತ್ರ ಭಾರತದಲ್ಲಿ ನಾವಿದ್ದು, ನಮಗೆ ಸಿಕ್ಕ ಸ್ವಾತಂತ್ರ್ಯವನ್ನು ಸರಿಯಾಗಿ ಬಳಸುವದರೊಂದಿಗೆ ಅಭಿವೃದ್ಧಿ ಪಥದಲ್ಲಿ ಸಾಗೋಣ ಎಂದರು.

  ಕಳೆದ 75 ವರ್ಷಗಳಿಂದ ಇಲ್ಲಿಯ ಧ್ವಜಾರೋಹಣ ಕಾರ್ಯದಲ್ಲಿ ಕಂದಾಯ ಇಲಾಖೆ-ಸ್ಥಳೀಯ ಹಿರಿಯರು ಹಾಗೂ ತಮ್ಮ ಮುತ್ತಜ್ಜ-ಅಜ್ಜ-ತಂದೆಯವರ ಕಾಲದಿಂದ ನಮ್ಮ ಕುಟುಂಬ ಸದಸ್ಯರು ತಪ್ಪದೇ ಪಾಲ್ಗೊಳ್ಳುತ್ತಿದ್ದೇವೆ. ಇದು ನನಗೆ ಹಾಗೂ ನಮ್ಮ ಕುಟುಂಬಕ್ಕೆ ಹೆಮ್ಮೆ ತಂದಿದೆ ಎಂದು ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನದ ಅಧ್ಯಕ್ಷ ಆರ್.ಎನ್. ಹೆಗಡೆ ಉಳ್ಳೀಕೊಪ್ಪ ಹೇಳಿದರು. ಅರಸಪ್ಪ ನಾಯಕರ ಕಾಲಘಟ್ಟದಲ್ಲಿ ಇದ್ದಂತೆ ಮತ್ತೊಮ್ಮೆ ಉಚ್ಛಾಯ ಸ್ಥಿತಿಗೆ ಈ ಸ್ಥಳ ಬರಲಿ ಎಂದು ಬೈರುಂಭೆ ಮಾಜಿ ಗ್ರಾ,ಪಂ.ಸದಸ್ಯ ಸುರೇಶ ಹುಳಗೋಳ ಹಾರೈಸಿದರು.

  ಸ್ವಾತಂತ್ರ್ಯ ಬಂತೆಂದರೆ ಸಾಲದು ಅದನ್ನು ಎಲ್ಲರೂ ಒಂದಾಗಿ ಉಳಿಸಿಕೊಂಡು ಹೋಗಬೇಕು ಅನೇಕ ಮಹನೀಯರ-ಹಿರಿಯರ-ತ್ಯಾಗ-ಬಲಿದಾನದಿಂದ ಸಿಕ್ಕ ಸ್ವಾತಂತ್ರ್ಯದ ಮಹತ್ವ ಅರಿತು ಸನ್ಮಾರ್ಗದಲ್ಲಿ ನಡೆಯೋಣ, ನಾವೆಲ್ಲ ದೇಶ ಪ್ರೇಮ ಬೆಳೆಸಿಕೊಂಡು ಮುಂದಿನ ಪೀಳಿಗೆಗೆ ಸ್ವಾತಂತ್ರ್ಯದ ಸವಿರುಚಿ ಹಂಚೋಣ ಎಂದು ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಪ್ರಧಾನ ವ್ಯವಸ್ಥಾಪಕ ಹಾಗೂ ಮಾಜೀ ವೀರ ಯೋಧ ಆರ್.ಎನ್.ಭಟ್ಟ ಸುಗಾವಿಯವರು ಕರೆ ಇತ್ತರು.

  ಇತಿಹಾಸದ ಪುಟಗಳಲ್ಲಿ ಕಳೆದು ಹೋದ ಸೋಂದಾ ಕೋಟೆಯ ಗತ ವೈಭವವನ್ನು ಮತ್ತೆ ಸ್ಥಾಪಿಸಲು ಶ್ರೀಮದ್ ಜಗದ್ಗುರು ಶಂಕರಾಚಾರ್ಯ-ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮಿಗಳು ಶ್ರೀ ಸೋಂದಾ ಸ್ವರ್ಣವಲ್ಲೀ ಇವರ ಧೃಢ ಸಂಕಲ್ಪ ಸಾಕಾರಗೊಳಿಸಲು ಸೋಂದಾ ಜಾಗೃತ ವೇದಿಕೆ ಕಾರ್ಯ ಪ್ರವರ್ತವಾಗಿದ್ದು, ಇದಕ್ಕೆ ಗ್ರಾ.ಪಂ. ಬೈರುಂಬೆ ಹಾಗೂ ಗ್ರಾ.ಪಂ. ಸೊಂದಾ ಕೈ ಜೋಡಿಸುತ್ತಿವೆ. ಇಲ್ಲಿ ಊರ ನಾಗರೀಕರು ಸ್ವಖುಷಿಯಿಂದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವದು ಸಂತಸ ತಂದಿದೆ ಎಂದು ಸೋಂದಾ ಜಾಗೃತ ವೇದಿಕೆಯ ಕಾರ್ಯಾಧ್ಯಕ್ಷ ರತ್ನಾಕರ ಹೆಗಡೆ ಬಾಡಲಕೊಪ್ಪ ಹೇಳಿದರು.

  300x250 AD

  ಈ ವೇಳೆ ವೇದಿಕೆಯ ಸದಸ್ಯ ಗಂಗಾಧರ ಪರಾಂಜಪೆ ಗ್ರಾ.ಪಂ. ಸದಸ್ಯ ನಾಗಪ್ಪ ಪಟಗಾರ ಹಾಗೂ ಗ್ರಾಮ ಆಡಳಿತಾಧಿಕಾರಿ ಕು| ಗೌರಿ ನಾಗಮ್ಮನವರ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

  ವೇದಿಕೆಯ ಕಾರ್ಯದರ್ಶಿ ಶ್ರೀಧರ ಹೆಗಡೆ ಗುಡ್ಡೇಮನೆ ಸದಸ್ಯರಾದ ಬಾಲಚಂದ್ರ ಭಟ್ಟ ಬಸವನಕೊಪ್ಪ, ಮಹಾಬಲೇಶ್ವರ ಹೆಗಡೆ ಬಂಧೀಸರ, ರಮೇಶ ಶಾಸ್ತ್ರೀ ಸ್ವರ್ಣವಲ್ಲೀ, ಊರ ಗಣ್ಯರಾದ ಪ್ರಕಾಶ ಹೆಗಡೆ ವಾಜಗದ್ದೆ, ಅಕ್ಷಯ ಹೆಗಡೆ ಉಳ್ಳೀಕೊಪ್ಪ ಕು. ನಿರ್ಮಿತಾ ಭಟ್ಟ ಬಸವನಕೊಪ್ಪ, ದಿವಸ್ಪತಿ ಭಟ್ಟ ಸ್ವರ್ಣವಲ್ಲೀ, ಬೈರುಂಬೆ ಪಿಡಿಓ ಗಣೇಶ ಬಂಟ್, ಶಿವಾನಂದ ಹೆಗಡೆ ಗುಂಡಿಗದ್ದೆ ಹಾಗೂ ಸುಬ್ರಾಯ ಜೋಶಿ ಸಂಪೇಸರ ಉಪಸ್ಥಿತರಿದ್ದರು.

  ಪ್ರಾರಂಭದಲ್ಲಿ ಎಚ್.ಎಲ್. ವಾಸುದೇವ ಭಟ್ಟ ಸ್ವಾಗತಿಸಿದರು. ಭಾಸ್ಕರ ಹೆಗಡೆ ಉಳ್ಳೀಕೊಪ್ಪ ವಂದಿಸಿದರು. ಗಣಪತಿ ಉಳ್ಳೀಕೊಪ್ಪ ಕಾರ್ಯಕ್ರಮ ನಿರ್ವಹಿಸಿದರು. ಗ್ರಾಮ ಸಹಾಯಕರಾದ ಇನಾಮುಲ್ಲಾ ಖಾನ್ ಹಾಗೂ ಅಲ್ಲೀಖಾನ್ ಸೋದೆ ಪೇಟೆ ಸಹಕರಿಸಿದರು.

     ವಂದನೆಗಳೊAದಿಗೆ,
              ಮಾಹಿತಿ : ರತ್ನಾಕರ
  Share This
  300x250 AD
  300x250 AD
  300x250 AD
  Leaderboard Ad
  Back to top