ಕುಮಟಾ : ಇತ್ತೀಚೆಗೆ ಗಂಗಾವತಿಯಲ್ಲಿ ನಡೆದ ಓಪನ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಅಪರೂಪದ ಪಠ್ಯೇತರ ಚಟುವಟುಕೆಯ ಕಲಿಕೆ ಕಠಾ(ಯುದ್ಧ ನೃತ್ಯಕಲೆ)ದಲ್ಲಿ 12 ವರ್ಷದೊಳಗಿನ ಬಾಲಕರ ವೈಯಕ್ತಿಕ ವಿಭಾಗದಲ್ಲಿ ತಾಲೂಕಿನ ಕಡ್ಲೆಯ ಅಮಿತ್ ಆರ್.ಭಟ್ಟ ಉತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕಗಳಿಸಿದ್ದಾನೆ. ಹಾಗೂ ಕುಮಿಟೆ ಫೈಟ್ಸ ವಿಭಾಗದಲ್ಲಿ ಪ್ರದರ್ಶನ ನೀಡಿ 2 ನೇ ಸ್ಥಾನ ಪಡೆದು ಬೆಳ್ಳಿ ಪದಕ ಗಳಿಸಿ, ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ್ದಾನೆ.
ಈ ಓಪನ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ 8 ರಾಜ್ಯಗಳಿಂದ ತಂಡಗಳು ಭಾಗವಹಿಸಿದ್ದು, 850 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ಅರವಿಂದ ಪಟಗಾರ ಕುಮಟಾ ತರಬೇತಿಯಲ್ಲಿ ಅಭ್ಯಾಸ ಮಾಡುತ್ತಿರುವ ಅಮಿತ್ ಆರ್.ಭಟ್ಟ, ಕಡ್ಲೆಯ ರಘುರಾಮ ಭಟ್ ಹಾಗೂ ಕಮಲಾಕ್ಷಿ ಆರ್.ಭಟ್ಟ ದಂಪತಿಗಳ ಪುತ್ರನಾಗಿದ್ದಾನೆ. ಕುಮಟಾ ತಾಲೂಕಿನ ಮಿರ್ಜಾನ್‌ನಲ್ಲಿರುವ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.