Slide
Slide
Slide
previous arrow
next arrow

ಕ್ರೀಡಾಕೂಟ: ಚಂದನ ವಿದ್ಯಾರ್ಥಿಗಳು ತಾಲೂಕಾ ಮಟ್ಟಕ್ಕೆ ಆಯ್ಕೆ

300x250 AD

ಶಿರಸಿ: ಇಲ್ಲಿನ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಭೈರುಂಭೆ ವಲಯ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾ ಕೂಟದಲ್ಲಿ ಮಿಯಾರ್ಡ್ಸ್ ಚಂದನ ಆಂಗ್ಲ ಮಾಧ್ಯಮ ಶಾಲೆ ನರೇಬೈಲ್‌ನ ವಿದ್ಯಾರ್ಥಿಗಳು ಸಾಧನೆ ಗೈದಿದ್ದಾರೆ.

7 ನೇ ತರಗತಿಯ ಸ್ಪಂದನಾ ಎಸ್ ನಾಯ್ಕ (ಉದ್ದ ಜಿಗಿತ ಪ್ರಥಮ, 200ಮೀ ಓಟ ಪ್ರಥಮ), ಅಕ್ಷರಾ ಟಿ. ನಾಯ್ಕ (100ಮೀ ಓಟ ಪ್ರಥಮ), ಸ್ತುತಿ ಪಿ. ಹೆಗಡೆ ( ಗುಂಡು ಎಸೆತ, ಚಕ್ರ ಎಸೆತ ಪ್ರಥಮ), ಗಾನವಿ (200ಮೀ ಓಟ ದ್ವಿತೀಯ, ಎತ್ತರ ಜಿಗಿತ ದ್ವಿತೀಯ) ,ಸಮರ್ಥ ಎಸ್. ಗೌಡ (ಎತ್ತರ ಜಿಗಿತ ಪ್ರಥಮ),ಆಯುಷ್ ನಾವಡಾ( 400 ಮೀ ಓಟ, ದ್ವಿತೀಯ),ವಾಗೀಷ ಹೆಗಡೆ (ಚಕ್ರ ಎಸೆತ ,ದ್ವಿತೀಯ) ,ಗಂಡು ಮಕ್ಕಳ ಥ್ರೋ ಬಾಲ್ ಮತ್ತು ಹೆಣ್ಣು ಮಕ್ಕಳ ವಾಲಿಬಾಲ್ (ಪ್ರಥಮ) ಸ್ಥಾನಗಳನ್ನು ಪಡೆದು ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. 7ನೇ ತರಗತಿಯ ಮಾನ್ವಿ ವಿ. ಜೈನ್ ( 400 ಮೀ ಓಟ ತೃತೀಯ),7ನೇ ವರ್ಗದ ಮಂಜುನಾಥ ಜಿ.ಹೆಗಡೆ ( 200 ಮೀ ಓಟ ತೃತೀಯ), ಗೌತಮ್ ಎಮ್. ನಾಯ್ಕ (ಗುಂಡು ಎಸೆತ ತೃತೀಯ) ಸ್ಥಾನ ಪಡೆದಿದ್ದಾರೆ.

300x250 AD

ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ,ಶಿಕ್ಷಕರು,ಪಾಲಕರು ಹರ್ಷವ್ಯಕ್ತಪಡಿಸಿ ಮುಂದಿನ ಹಂತಕ್ಕೆ ಶುಭ ಹಾರೈಸಿದ್ದಾರೆ.

Share This
300x250 AD
300x250 AD
300x250 AD
Back to top