ಯಲ್ಲಾಪುರ: ಮೆಸೇಜ್ ಲಿಂಕ್ ಒತ್ತಿ ವ್ಯಕ್ತಿಯೋರ್ವ ಹಣ ಕಳೆದುಕೊಂಡ ಪ್ರಕರಣ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ತಾಲೂಕಿನ ಜಿಗಳಿಹೊಂಡದ ಸಂತೋಷ ಶ್ರೀಪತಿ ಹೆಗಡೆ (39) ಆನ್ಲೈನ್ ವಂಚಕರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದಾನೆ.
ಅಪರಿಚಿತ ವ್ಯಕ್ತಿಯಿಂದ ಸಂತೋಷ್ ಗೆ ಮೆಸೆಜ್ ಬಂದಿದ್ದು, ಮೆಸೇಜ್ ನಲ್ಲಿ ಬ್ಯಾಂಕಿನ ಲೋಗೋ ಇದ್ದಿದ್ದರಿಂದ ಅದನ್ನ ಒತ್ತಿದ್ದಾನೆ. ಇನ್ನು ಮೆಸೇಜ್ ಒಪನ್ ಆಗುತ್ತಿದ್ದಂತೆ ಆತನ ಕ್ರೆಡಿಟ್ ಕಾರ್ಡಿನಿಂದ ಎರಡು ಬಾರಿ ಸುಮಾರು 95,557ರೂ ಹಣ ಕಟ್ ಆಗುವ ಮೂಲಕ ವಂಚನೆಗೊಳಗಾಗಿದ್ದಾನೆ.
ಇನ್ನು ಹಣ ಕಟ್ ಆಗುತ್ತಿದ್ದಂತೆ ಸಂಶಯಗೊಂಡು ಬ್ಯಾಂಕಿಗೆ ಕರೆಮಾಡಿ ಕ್ರೆಡಿಟ್ ಕಾರ್ಡನ್ನು ಸ್ಥಗಿತಗೊಳಿಸಿದ್ದು, ಈ ಸಂಭಂದ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿದ್ದಾನೆ.