ಕಾರವಾರ: ಇಲ್ಲಿನ ಹಿಂದೂ ಪ್ರೌಢಶಾಲೆಯಲ್ಲಿ ಅಂಕೋಲಾ, ಕಾರವಾರದ ದಿನಕರ ಕಲಾನಿಕೇತನ ಸಂಗೀತ ವಿದ್ಯಾಲಯದಿಂದ ಆ.19ರಂದು ಗುರು ಪೂರ್ಣಿಮ ನಿಮಿತ್ತ ಸ್ವರ ನಮನ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಂದು ಮಧ್ಯಾಹ್ನ 2 ಗಂಟೆಯಿಂದ ಪ್ರಾರಂಭವಾಗಲಿದ್ದು, ಪದ್ಮಪುಷ್ಪ ವೇದ ವೇದಾಂತ ಗುರುಕುಲದ ಪ್ರಾಚಾರ್ಯ ಶಿವಮೂರ್ತಿ ಜೋಯಿಸ್, ಕೆನರಾ ವೆಲ್‌ಫೆರ್ ಟ್ರಸ್ಟ್, ಕಾರವಾರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ಎಸ್.ಪಿ.ಕಾಮತ ಉಪಸ್ಥಿತರಿರುವರು. ಬಳಿಕ ವಿದ್ಯಾರ್ಥಿಗಳಿಂದ ಗಾಯನ-ವಾದನ ಕಾರ್ಯಕ್ರಮ ನಡೆಯಲಿದೆ ಎಂದು ವಿದ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.