• Slide
    Slide
    Slide
    previous arrow
    next arrow
  • ಕ್ಯಾನ್ಸರ್ ಪೀಡಿತರು ವ್ಯತಿರಿಕ್ತ ಚಿಂತನೆಗೊಳಗಾಗದೇ ಮಾನಸಿಕ ಧೈರ್ಯ, ಸ್ಥೈರ್ಯದಿಂದ ಎದುರಿಸಿ: ಕೃಷ್ಣಿ ಶಿರೂರ

    300x250 AD

    ಶಿರಸಿ: ಕ್ಯಾನ್ಸರ್ ಪೀಡಿತರು ವ್ಯತಿರಿಕ್ತವಾದ ಚಿಂತನೆಗೆ ಅವಕಾಶ ನೀಡದೇ, ಮಾನಸಿಕ ಧೈರ್ಯದಿಂದ ಕ್ಯಾನ್ಸರ್ ವಿರುದ್ಧ ಹೋರಾಡುವ ಮನೋಪ್ರವೃತ್ತಿ ಬೆಳೆಸಿಕೊಳ್ಳಬೇಕು. ಆತ್ಮಸ್ಥೆರ್ಯ, ಆತ್ಮವಿಶ್ವಾಸ ವೃದ್ಧಿಸಿಕೊಳ್ಳುವುದು ಅಗತ್ಯ.  ಅಲ್ಲದೇ ಕ್ಯಾನ್ಸರನ್ನು ಸಕರಾತ್ಮಕ ಮನೋಭಾವನೆಯಿಂದ ಎದುರಿಸುವ ಪ್ರವೃತ್ತಿಯ ಮನೋಭಾವನೆ ಹೊಂದುವಂತವರಾಗಬೇಕೆಂದು ಹಿರಿಯ ಪತ್ರಕರ್ತೆ, ಕ್ಯಾನ್ಸರ್ ರೋಗಿಗಳ ಆಪ್ತಸಮಾಲೋಚಕಿ, ಕೃಷ್ಣಿ ಶಿರೂರ ಹೇಳಿದರು.

     ಅವರು ಸ್ಪಂದನಾ ಗ್ರಾಮಿಣಾಭಿವೃದ್ಧಿ ವೇದಿಕೆ ಹಾಗೂ ಸಿಟಿ ಯೂನಿಯನ್ ಕ್ರೇಡಿಟ್ ಸೌಹಾರ್ದ ಕೋ. ಆಪರೇಟಿವ್ ಸೋಸೈಟಿ ಲಿ. ಸಂಯುಕ್ತ ಆಶ್ರಯದಲ್ಲಿ, ಜಸ್ಟಿಸ್ ಕೆ.ಎಸ್ ಹೆಗ್ಗಡೆ, ಚಾರಿಟೇಬಲ್ ಹಾಸ್ಪಿಟಲ್, ಮಂಗಳೂರು ಇವರ ಸಹಯೋಗದೊಂದಿಗೆ ಶಿರಸಿಯ, ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡ ಕ್ಯಾನ್ಯರ್- ವೈದ್ಯಕೀಯ ಜಾಗೃತ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮೇಲಿನಂತೆ ಮಾತನಾಡಿದರು.

    ಕ್ಯಾನ್ಸರ್ ರೋಗದ ಕುರಿತು ಸಾಮಾಜಿಕ ಧೋರಣೆ ಬದಲಾಗುವುದೊಂದಿಗೆ, ಮಾನಸಿಕ ಖಿನ್ನತೆಗೆ ಒಳಗಾದಲ್ಲಿ ಚಿಕಿತ್ಸೆ ಕೂಡ ರೋಗಿಗೆ ಸ್ಪಂದಿಸುವುದು ಕಷ್ಟ. ಯೋಗ, ಪ್ರಾಣಾಯಾಮ, ಧ್ಯಾನ, ಮುದ್ರೆಗಳು ರೋಗಿ ಗುಣಮುಖವಾಗಲು ಸಹಾಯವಾಗುವುದೆಂದು ಅವರು ಹೇಳಿದರು.

     ಭಾರತದಲ್ಲಿ ಕಡಿಮೆ ವಯಸ್ಸಿನ ಯುವಕರಲ್ಲಿ ಕ್ಯಾನ್ಸರ್ ಪ್ರಮಾಣ ಹೆಚ್ಚುತ್ತಿರುವುದು ವಿಷಾದಕರ. ಅಜ್ಞಾನ ಮತ್ತು ತಿಳುವಳಿಕೆಯ ಕೊರತೆಯಿಂದ ನಮ್ಮಲ್ಲಿ ರೋಗ ಉಲ್ಬಣಗೊಳ್ಳುವವರೆಗೂ ಕ್ಯಾನ್ಸರ್ ರೋಗ ಗುರುತಿಸಿಕೊಳ್ಳದಿರುವುದು ವಿಷಾದಕರ. ನೂರರಲ್ಲಿ ಮೂವತ್ತೈದು ಕ್ಯಾನ್ಸರ್ ರೋಗಗಳು ತಂಬಾಕಿನ ಸೇವನೆಯಿಂದ ಬರುತ್ತಿದೆ. ಅತಿಯಾದ ಮದ್ಯ ಸೇವನೆ, ತಂಬಾಕು ಸೇವನೆಯಿಂದ ಮುಕ್ತಿಗೊಂಡಲ್ಲಿ ಹಾಗೂ ಆಹಾರ ಪದ್ದತಿಯನ್ನ ನಿಯಂತ್ರಿಸುವಿಕೆಯಿಂದ ಕ್ಯಾನ್ಸರ್ ನಿಯಂತ್ರಿಸಲು ಸಾಧ್ಯ ಎಂದು ಖ್ಯಾತ ಕ್ಯಾನ್ಸರ್ ತಜ್ಞರಾದ ಡಾ. ವಿನಯ್ ಕುಮಾರ್ ಜೆ. ರಾಜೇಂದ್ರ, ಮಂಗಳೂರು ಶಿಬಿರದ ತಮ್ಮ ವಿಶೇಷ ಉಪನ್ಯಾಸದಲ್ಲಿ ಹೇಳಿದರು.

    300x250 AD

    ಚಿಕಿತ್ಸೆ ಮತ್ತು ಸಂವಾದ:
     ಜಿಲ್ಲಾದ್ಯಂತ ಆಗಮಿಸಿದ ಶಿಬಿರಾರ್ಥಿಗಳಿಂದ ಕ್ಯಾನ್ಸರ್‌ಗೆ ಸಂಬಂಧಿಸಿದ ವೈದ್ಯಕೀಯ ಸಮಸ್ಯೆಗಳ ಕುರಿತು ತಜ್ಞ ವೈದ್ಯರೊದಿಗೆ ಸಂವಾದ ಏರ್ಪಟ್ಟವು. ತದನಂತರ ನೂರಾರು ಶಿಬಿರಾರ್ಥಿಗಳು ಚಿಕಿತ್ಸೆಗೆ ಒಳಪಟ್ಟಿದ್ದು ವಿಶೇಷವಾಗಿತ್ತು.

     ಶಿಬಿರದ ಅಧ್ಯಕ್ಷತೆಯನ್ನು ಸ್ಫಂದನಾ ಗ್ರಾಮೀಣಾಭಿವೃದ್ಧಿ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಸುರೇಶ್ ದೇಶಭಂಡಾರಿ, ಶೋಭಾ ನಾಯ್ಕ, ಶ್ರೀಕಲಾ ನಾಯ್ಕ, ಸಂದ್ಯಾ ನಾಯಕ, ನೇಹರೂ ಬಿಳೂರು, ಅನಸೂಯಾ ಸುರೇಶ್ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. ಸಿಟಿ ಯೂನಿಯನ್ ಕ್ರೇಡಿಟ್ ಸೌಹಾರ್ದ ಕೋ. ಆಪರೇಟಿವ್ ಸೋಸೈಟಿ ಲಿ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ ಭಂಡಾರಿ ವಂದನಾರ್ಪಣೆ ಮಾಡಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top