ಕಾರವಾರ: ಶಿರಸಿ ಸಿಪಿ ಬಜಾರ್‌ನ ಇರ್ಶಾದ್ ಅಹಮ್ಮೀದ್ ಎ.ಮಿಸ್ಗಾರ ವಿರುದ್ಧ ಅರಣ್ಯ ಗುನ್ನೆ ದಾಖಲಿಸಿದಂತೆ ಶಿರಸಿ ಉಪ ಅರಣ್ಯ ಸಂರಕ್ಷಣಾಧಿಕಾರಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಕರ್ನಾಟಕ ಅರಣ್ಯ ಕಾಯ್ದೆ ಸೆಕ್ಷನ್ 71 ಎ ಮೇರೆಗೆ ವಿಚಾರಣೆಗೆ ಹಾಜರಾಗಲು ನೋಟಿಸನ್ನು ಅಂಚೆ ಮೂಲಕ ಅನೇಕ ಭಾರಿ ರವಾನಿಸಲಾಗಿದ್ದು, ಆದರೆ ಯಾರು ಹಾಜರಾಗದೇ ಇರುವ ಕಾರಣ ಇಲಾಖೆಯು ವಶಪಡಿಸಿಕೊಂಡಿರುವ ವಾಹನದ ವಿಚಾರಣೆಗೆ ಹಾಜರಾಗುವಂತಹ ಯಾರಾದರೂ ಕಾನೂನು ಬದ್ಧ ವಾರಸುದಾರರಿದ್ದಲ್ಲಿ ಅಧಿಕೃತ ದಾಖಲೆಗಳೊಂದಿಗೆ ಹಾಗೂ ನ್ಯಾಯಾಲಯದ ಪ್ರಮಾಣ ಪತ್ರದೊಂದಿಗೆ ತಮ್ಮ ವಕೀಲರ ಮೂಲಕ ಮೊಕದ್ದಮೆಗೆ 30 ದಿನಗಳ ಒಳಗೆ ಹಾಜರಾಗಬೇಕು. ಯಾರು ಹಾಜರಾಗದೇ ಇದ್ದಲ್ಲಿ ನಿಯಮಾನುಸಾರ ಪ್ರಕರಣವನ್ನು ವಿಲೆಗೊಳಿಸಲಾಗುವುದು ಎಂದು ಶಿರಸಿ ವಿಭಾಗದ ಅಧಿಕಾರಯುತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.