ಕಾರವಾರ: ತಾಲೂಕಿನ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಲ್ಲಿ ಬಿಜೆಪಿ ಅಭೂತಪೂರ್ವ ಜಯಗಳಿಸಿದೆ. ಒಟ್ಟೂ 18 ಗ್ರಾಪಂಗಳಲ್ಲಿ ಬಿಜೆಪಿ ಬೆಂಬಲಿತರು 11 ಗ್ರಾಪಂಗಳಲ್ಲಿ ಅಧಿಕಾರಕ್ಕೇರಿದ್ದರೆ, 2 ಗ್ರಾಪಂಗಳಲ್ಲಿ ಉಪಾಧ್ಯಕ್ಷ ಸ್ಥಾನಕ್ಕೇರಿದ್ದಾರೆ.
ಮಾಜಾಳಿ, ಅಸ್ನೋಟಿ, ಹಣಕೋಣ, ಗೊಟೆಗಾಳಿ, ದೇವಳಮಕ್ಕಿ, ಶಿರವಾಡ, ತೋಡುರ,ಚೆಂಡಿಯಾ, ಕೆರವಡಿ, ಘಾಡಸಾಯಿ, ಮುಡಗೇರಿ ಗ್ರಾಪಂಗಳು ಬಿಜೆಪಿ ತೆಕ್ಕೆಗೆ ಬಂದಿದೆ. ಅಮದಳ್ಳಿ ಹಾಗೂ ಚಿತ್ತಾಕುಲ ಗ್ರಾಪಂಗಳಲ್ಲಿ ಬಿಜೆಪಿ ಉಪಾಧ್ಯಕ್ಷರು ಆಯ್ಕೆಯಾಗಿದ್ದಾರೆ. ಆಗಸ್ಟ್ 9 ರಂದು 9 ಗ್ರಾಪಂಗಳ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಾಜಾಳಿ, ಶಿರವಾಡ, ಹಣಕೋಣ, ದೇವಳಮಕ್ಕಿ, ಗೋಟೆಗಾಳಿ ಹಾಗೂ ಅಸ್ನೋಟಿ ಹೀಗೆ 6 ಗ್ರಾಪಂಗಳಲ್ಲಿ ಬಿಜೆಪಿ ಬೆಂಬಲಿತರು ಅಧಿಕಾರಕ್ಕೇರಿದ್ದರು. ಅಮದಳ್ಳಿಯಲ್ಲಿ ಉಪಾಧ್ಯಕ್ಷ ಸ್ಥಾನ ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ದೊರಕಿದೆ.
ಶುಕ್ರವಾರ 9 ಗ್ರಾಪಂಗಳ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 5 ಗ್ರಾಪಂಗಳಲ್ಲಿ ಬಿಜೆಪಿ ಬೆಂಬಲಿತರು ಅಧಿಕಾರಕ್ಕೇರಿದ್ದಾರೆ. ಚಿತ್ತಾಕುಲ ಗ್ರಾಪಂನಲ್ಲಿ ಉಪಾಧ್ಯಕ್ಷ ಸ್ಥಾನಕ್ಕೇರಿದ್ದಾರೆ. ಕೇರವಡಿ ಗ್ರಾಪಂ ಅಧ್ಯಕ್ಷರಾಗಿ ರಾಮಚಂದ್ರ ಯಶ್ವಂತ ನಾಯ್ಕ, ಉಪಾಧ್ಯಕ್ಷರಾಗಿ ದೀಪಾ ದೇವಿದಾಸ ನಾಯ್ಕ ಆಯ್ಕೆಯಾಗಿದ್ದಾರೆ. ಚೆಂಡಿಯಾ ಗ್ರಾಪಂ ಅಧ್ಯಕ್ಷರಾರಗಿ ಪೂಜಾ ಪ್ರಕಾಶ ನಾಯ್ಕ, ಉಪಾಧ್ಯಕ್ಷರಾಗಿ ಜೋಗಿ ನಾರಾಯಣ ಗುನಗಿ ಆಯ್ಕೆಯಾದರು. ತೋಡುರ ಗ್ರಾಪಂ ಅಧ್ಯಕ್ಷರಾಗಿ ಕರುಣಾ ಕಮಲಾಕರ ನಾಯ್ಕ, ಉಪಾಧ್ಯಕ್ಷರಾಗಿ ರಾಘವೇಂದ್ರ ತೋಡುರಕರ ಆಯ್ಕೆಯಾಗಿದ್ದಾರೆ.
ಘಾಡಸಾಯಿ ಗ್ರಾಪಂ ಅಧ್ಯಕ್ಷರಾಗಿ ಸುವರ್ಣ ಮಾರುತಿ ಮಾಜಾಳಿಕರ, ಉಪಾಧ್ಯಕ್ಷರಾಗಿ ಚೇತನ ಗೋಕುಲದಾಸ ಬಾಂದೇಕರ ಆಯ್ಕೆಯಾಗಿದ್ದಾರೆ. ಮುಡಗೇರಿ ಗ್ರಾಪಂ ಅಧ್ಯಕ್ಷರಾಗಿ ಸುರೇಂದ್ರ ಗಾಂವಕರ, ಉಪಾಧ್ಯಕ್ಷರಾಗಿ ಜ್ಯೋತಿ ಚೋಳಾರ ಆಯ್ಕೆಯಾದರು. ಚಿತ್ತಾಕುಲ ಗ್ರಾಪಂ ಉಪಾಧ್ಯಕ್ಷರಾಗಿ ಸೂರಜ ದೇಸಾಯಿ ಆಯ್ಕೆಯಾಗಿದ್ದಾರೆ.