ಅಂಕೋಲಾ: ತಾಲೂಕಿನ ಅಲಗೇರಿ ಗ್ರಾಮ ಪಂಚಾಯತ್ ನ ಎರಡನೇ ಹಂತದ ಚುನಾವಣೆ ನಡೆದಿದ್ದು ಅಧ್ಯಕ್ಷರಾಗಿ ಕಾಂಗ್ರೆಸ್‌ನ ಸಂತೋಷ್ ನಾಯ್ಕ ಹಾಗೂ ಅವಿರೋಧವಾಗಿ ಶೋಭಾ ಆಗೇರ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಹುದ್ದೆಗೆ ಇವರ ವಿರುದ್ಧ ಬಿಜೆಪಿಯ ಕಿಶೋರ ತಮ್ಮಾಣಿ ನಾಯ್ಕ ಸ್ಪರ್ಧಿಸಿದ್ದು ಒಟ್ಟು 9 ಮತಗಳ ಪೈಕಿ ಸಂತೋಷ ನಾಯ್ಕ ಅವರು 7/2 ಮತಗಳನ್ನು ಪಡೆಯುವ ಮೂಲಕ ಬೃಹತ್ ಅಂತರದಲ್ಲಿ ಗೆಲುವು ಸಾಧಿಸಿ ದಾಖಲೆ ಬರೆದಿದ್ದಾರೆ. ಕಳೆದ ಹಲವು ದಿನಗಳಿಂದ ಭಾರಿ ಕುತೂಹಲ ಮೂಡಿಸಿದ್ದ ಪಂಚಾಯತ್ ಚುನಾವಣೆ ಬೆಳಿಗ್ಗೆಯಿಂದಲೇ ಊರಿನಲ್ಲಿ ವಿನೂತನ ಬೆಳವಣಿಗೆಗಳಿಗೆ ಕಾರಣವಾಗಿತ್ತು. ಮಧ್ಯಾಹ್ನ 1.30ರ ಸುಮಾರಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆ ಮಾಡುವ ಮೂಲಕ ಎಲ್ಲಾ ಕುತೂಹಲಗಳಿಗೆ ತೆರೆ ಬಿದ್ದಿದೆ.
ಆಯ್ಕೆಯಾದ ಇಬ್ಬರು ಅಭ್ಯರ್ಥಿಗಳು ಸಹ ಉತ್ತಮ ಜನಬೆಂಬಲ ಹೊಂದಿದ್ದು ಹೆಚ್ಚಿನದಾಗಿ ಜನ ಸೇವೆ ಹಾಗೂ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡವರಾಗಿದ್ದಾರೆ. ಇನ್ನುಳಿದಂತೆ ನಾಗರಾಜ ನಾಯ್ಕ, ಮಾಜಿ ಅಧ್ಯಕ್ಷೆ ದೀಪಾ ನಂದಾ ನಾಯ್ಕ, ಮಾಜಿ ಉಪಾಧ್ಯಕ್ಷ ಕಿಶೋರ ನಾಯ್ಕ, ಜೀವಿತಾ ಗಾಂವ್ಕರ್, ಮಾದೇವಿ ಆಗೇರ, ನಾಗೇಶ ಆಗೇರ, ದಿವ್ಯಾ ಗೌಡ ಸದಸ್ಯರಾಗಿ ಮುಂದುವರಿಯಲಿದ್ದಾರೆ.
ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮಾತನಾಡಿದ ಸಂತೋಷ್ ನಾಯ್ಕ, ಜನಸೇವೆಯೇ ನನ್ನ ಮೊದಲ ಆದ್ಯತೆಯಾಗಿರುವುದರಿಂದ ದಕ್ಷ ಹಾಗೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಗ್ರಾಮದ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸಿ ಮಾದರಿ ಗ್ರಾಮವನ್ನಾಗಿ ಮಾಡಲು ಪ್ರಯತ್ನಿಸುತ್ತೇನೆ ನನ್ನನ್ನು ಅಧ್ಯಕ್ಷರಾಗಿ ಆಯ್ಕೆಯಾಗಲು ಶ್ರಮಿಸಿದ ಪಂಚಾಯತ್ ಸದಸ್ಯರಿಗೆ, ಪಕ್ಷದ ಪ್ರಮುಖ ನಾಯಕರಿಗೆ, ಹಿತೈಷಿಗಳಿಗೆ ಹಾಗೂ ಊರ ನಾಗರಿಕರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.
ಕಾ0ಗ್ರೆಸ್ ಪ್ರಮುಖರಾದ ಸುರೇಶ್ ಆರ್. ನಾಯಕ, ವಿನೋದ ಆರ್. ಗಾಂವಕರ ಹಾಗೂ ಮೋನಪ್ಪ ನಾಯ್ಕ ಭಾವಿಕೇರಿ ಮತ್ತಿತರರು ಗೆದ್ದ ಅಭ್ಯರ್ಥಿಗಳಿಗೆ ಹಾರ ಹಾಕಿ ಸನ್ಮಾನಿಸಿದರು. ಶ್ರೀಕಾಂತ್ ಆರ್. ನಾಯ್ಕ, ವಿನೋದ ಆರ್. ನಾಯಕ, ಮಾಜಿ ಅಧ್ಯಕ್ಷ ಮಂಜುನಾಥ್ ನಾಯ್ಕ, ಶಿವಾನಂದ ಗೌಡ, ಗೋವಿಂದ ಗೌಡ, ವಿಜಯ ಎಸ್. ನಾಯಕ, ಲಕ್ಷ್ಮಣ್ ನಾಯಕ ಹಾಗೂ ಇನ್ನಿತರರು ಹಾಜರಿದ್ದು ವಿಜಯೋತ್ಸವ ಆಚರಿಸಿದರು. ಇವರ ಗೆಲುವಿಗೆ ಕಾರವಾರ ಅಂಕೋಲಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ತಕ್ಷಣ ದೂರವಾಣಿ ಕರೆ ಮಾಡಿ ಶುಭ ಹಾರೈಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರಾದ ತುಕಾರಾಮ ಎನ್. ನಾಯ್ಕ, ಶಿವಾನಂದ ನಾಯ್ಕ, ರವಿ ಜಿ.ನಾಯ್ಕ, ರವಿ ನಾಯ್ಕ ಕೇಣಿ, ವಿಕ್ರಂ ಪಂತ್, ನಾರಾಯಣ ಗಾಂವ್ಕರ್, ದಿನೇಶ್ ಡಿ.ನಾಯ್ಕ, ಕಾರ್ತಿಕ್ ನಾಯ್ಕ, ಪ್ರೀತೇಶ್ ನಾಯ್ಕ, ಅಶೋಕ್ ಆರ್.ನಾಯ್ಕ, ನಾಗರಾಜ ನಾಯ್ಕ, ನಾಗರಾಜ ಪಿ.ನಾಯ್ಕ, ಊರ ನಾಗರಿಕರಾದ ಗಜು ಶೆಟ್ಟಿ, ಗಣೇಶ್ ಸಿ ನಾಯ್ಕ, ದಿನಕರ ನಾಯ್ಕ ಮುಂತಾದವರು ಶುಭಾಶಯ ಕೋರಿದರು.