• Slide
    Slide
    Slide
    previous arrow
    next arrow
  • ಯಲ್ಲಾಪುರದ ವಿವಿಧ ಗ್ರಾಮ ಪಂಚಾಯತದಲ್ಲಿ ಹೆಬ್ಬಾರ್ ಬೆಂಬಲಿಗರ ಮೇಲುಗೈ

    300x250 AD

    ಯಲ್ಲಾಪುರ: ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯು ಬುಧವಾರ ನಡೆದಿದ್ದು, ತಾಲೂಕಿನ ಕುಂದರಗಿ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳನ್ನು ಶಾಸಕ ಹೆಬ್ಬಾರ್ ಬಳಗದವರ ಪಾಲಾಗಿದೆ. ಅಧ್ಯಕ್ಷರಾಗಿ ಯಮುನಾ ಸಿದ್ದಿ ಹಾಗೂ ಉಪಾಧ್ಯಕ್ಷರಾಗಿ ಸೌಮ್ಯ ನಾಯ್ಕ್ ಆಯ್ಕೆಗೊಂಡಿದ್ದಾರೆ.

    ಆನಗೋಡ ಗ್ರಾಮ ಪಂಚಾಯತದಲ್ಲೂ ಶಾಸಕ ಹೆಬ್ಬಾರ್ ಬಳಗವು ಮೇಲುಗೈ ಸಾಧಿಸಿದ್ದು, ಅಧ್ಯಕ್ಷೆಯಾಗಿ ಮೀನಾಕ್ಷಿ ಭಟ್ ಹಾಗೂ ಉಪಾಧ್ಯಕ್ಷೆಯಾಗಿ ಕುಸುಮಾ ಸಿದ್ದಿ ಅವಿರೋಧವಾಗಿ ಆಯ್ಕೆಗೊಂಡಿದ್ದು, ಚಂದಗುಳಿ ಗ್ರಾಮ ಪಂಚಾಯತದಲ್ಲೂ ಹೆಬ್ಬಾರ್ ಬೆಂಬಲಿತ ಶಿಲ್ಪ ರವಿ ನಾಯ್ಕ ಅಧ್ಯಕ್ಷೆಯಾಗಿ, ಶಾರದಾ ನರಸಿಂಹ ಭಾಗವತ್ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.

    300x250 AD

    ಹಾಗೆಯೇ ಕಿರವತ್ತಿ ಗ್ರಾ.ಪಂ. ಅಧ್ಯಕ್ಷೆಯಾಗಿ ಸಂಗೀತಾ ಕೊಕರೆ, ಉಪಾಧ್ಯಕ್ಷೆಯಾಗಿ ಹನುಮವ್ವ ಭಜಂತ್ರಿ ಆಯ್ಕೆಯಾಗಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top