ಶಿರಸಿ: ತಾಲೂಕಿನಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಶಿರಸಿ ನಗರದ ಎಲ್ಲಾ ಪ್ರದೇಶಗಳಲ್ಲಿ ಹಾಗೂ 110/11 ಕೆ.ವಿ ಉಪಕೇಂದ್ರದಿಂದ ಹೊರಡುವ ಗ್ರಾಮೀಣ ಮಾರ್ಗಗಳಾದ ಬನವಾಸಿ, ಸುಗಾವಿ, ದೇವನಳ್ಳಿ, ಚಿಪಗಿ, ಮಾರಿಗದ್ದೆ, ಕೆಂಗ್ರೆ, ವಾನಳ್ಳಿ, ಹುಲೇಕಲ್, ಸಾಲ್ಕಣಿ, ಸಂಪಖಂಡ, ತಾರಗೋಡ, 11 ಕೆ.ವಿ ಮಾರ್ಗದಲ್ಲಿ ಆ.9, ಬುಧವಾರ, ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 5 ಘಂಟೆವರೆಗೆ ವಿದ್ಯುತ್ ಸರಬರಾಜು ವ್ಯತ್ಯಯವಾಗಲಿದೆ. ಕಾರಣ ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ), ಕೆ.ಪಿ.ಟಿ.ಸಿ.ಎಲ್ ಶಿರಸಿರವರು ತಿಳಿಸಿದ್ದಾರೆ.