Slide
Slide
Slide
previous arrow
next arrow

ಶಿರಸಿ ಫೋಟೋಗ್ರಾಫರ್ ಸಂಘಕ್ಕೆ ರಾಜ್ಯದ ಅತ್ಯುತ್ತಮ ಸಂಘ ಪ್ರಶಸ್ತಿ

300x250 AD

ಶಿರಸಿ: ತಾಲೂಕಿನ ಛಾಯಾಚಿತ್ರ ಗ್ರಾಹಕರ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯು ಶನಿವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆಯಿತು.ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಫೋಟೋಗ್ರಾಫರ್ ಅಸೋಸಿಯೇಷನ್ ನೀಡುವ ರಾಜ್ಯ ಮಟ್ಟದ ಉತ್ತಮ ತಾಲೂಕಾ ಸಂಘ ಎಂದು ಪರಿಗಣಿಸಿ ರಾಜ್ಯ ಸಂಘದ ಜಂಟಿ‌ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಭಟ್ ತಾಲೂಕಾ ಸಂಘದ ಅಧ್ಯಕ್ಷ ರಾಜು ಕಾನಸೂರ ಅವರಿಗೆ ಪ್ರಶಸ್ತಿ ಹಸ್ತಾಂತರಿಸಿದರು.

ಕಳೆದ ಎರಡು ವರ್ಷಗಳ ಅವಧಿಯಲ್ಲಿ ರಾಜು ಕಾನಸೂರು ಅವರ ಅಧ್ಯಕ್ಷೀಯ ಅವಧಿಯಲ್ಲಿ ಅತ್ಯುತ್ತಮ ಸಂಘಟನೆಯ ಭಾಗವಾಗಿ ಈ ಪ್ರಶಸ್ತಿ ದೊರಕಿದೆ.
ಬೆಂಗಳೂರಿನಲ್ಲಿ ಸೆಪ್ಟೆಂಬರ್ 7, 8ಹಾಗೂ 9 ರಂದು ನಡೆಯಲಿರುವ ಡಿ.ಜಿ ಇಮೇಜ್ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ, ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಂತೆ ಸದಸ್ಯರಲ್ಲಿ ವಿನಂತಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಸಂತೋಷ ಸಿರ್ಸಿಕರ, ಕಾರ್ಯದರ್ಶಿ ಜಗದೀಶ ಜೈವಂತ, ಖಜಾಂಚಿ ಕಿರಣ ಹಣಜಿ , ಜಂಟಿ ಕಾರ್ಯದರ್ಶಿ ನವೀನ ಗಾಂವಕರ ಹಾಗೂ ಕಮಿಟಿ ಸದಸ್ಯರು ಉಪಸ್ಥಿತರಿದ್ದರು.

300x250 AD

Share This
300x250 AD
300x250 AD
300x250 AD
Back to top