Slide
Slide
Slide
previous arrow
next arrow

ಸ್ಕೌಟ್ಸ್- ಗೈಡ್ಸ್ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ: ಬಿಇಒ ಜಿ.ಐ.ನಾಯ್ಕ

300x250 AD

ಸಿದ್ದಾಪುರ: ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಪ್ರತಿ ಶಾಲಾ ಹಂತದಲ್ಲಿ ನೀಡುವಂತಾಗಬೇಕು. ತನ್ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ. ವಿದ್ಯಾರ್ಥಿಗಳಲ್ಲಿ ಶಿಸ್ತು ದೇಶ ಪ್ರೇಮ ಸಹಕಾರ ಮನೋಭಾವವನ್ನು ನಿರೂಪಿಸಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಐ.ನಾಯ್ಕ ಗೋಳಗೋಡ ಹೇಳಿದರು. ಅವರು ಸ್ಥಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ತಾಲೂಕಾ ಸಮಿತಿ ಆಶ್ರಯದಲ್ಲಿ ಸ್ಕೌಟ್ಸ್, ಗೈಡ್ಸ್ ಕ್ಯಾಪ್ಟನ್ಸಗಳಿಗೆ ಒಂದು ದಿನದ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆಯನ್ನು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ತಾಲೂಕಾ ಸಮಿತಿ ಅಧ್ಯಕ್ಷ ಜಿ.ಜಿ.ಹೆಗಡೆ ಬಾಳಗೋಡರವರು ವಹಿಸಿ ಮಾತನಾಡಿ ಚರಿತ್ರೆಗಿಂತ ಚಾರಿತ್ರ್ಯ ದೊಡ್ಡದು. ಮಕ್ಕಳಲ್ಲಿ ಚಾರಿತ್ರ್ಯವನ್ನು ರೂಪಿಸಬೇಕಾಗಿದೆ. ಅವರಲ್ಲಿ ಆದರ್ಶದ ಗುಣಗಳನ್ನು ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.

ಅತಿಥಿಗಳಾಗಿ ಜಿಲ್ಲಾ ಆಯುಕ್ತರಾದ ಎಂ.ಎ0.ಭಟ್ಟ, ವಿ.ಎಚ್.ಭಟ್ಕಳ, ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ವಿ.ನಾಯ್ಕ ಹೆಗ್ಗೇರಿ, ತಾಲೂಕಾ ಪ್ರಾ.ಶಾ.ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ಹೆಗಡೆ, ಜಿಲ್ಲಾ ಕಾರ್ಯದರ್ಶಿ ಪಿ.ಕೆ.ನಾಯ್ಕ ನಾಣಿಕಟ್ಟಾ, ಗೈಡ್ಸ್ ಜಿಲ್ಲಾ ಆಯುಕ್ತ ಶೋಭಾ ಡಿ.ಸಿ., ಮುಖ್ಯ ಶಿಕ್ಷಕ ಮಂಜುನಾಥ ಮಾತನಾಡಿದರು. ಅಂತರಾಷ್ಟ್ರೀಯ ಜಾಂಬೋರೆಟ್‌ದಲ್ಲಿ ಸಹಕರಿಸಿದ ಪ್ರತಿಭಾ ನಿಲೇಕಣಿ, ಮಂಜುನಾಥ ನಾಯ್ಕ, ಪ್ರೇಮಲತಾ, ವಾಸಂತಿ ಮೊಗೇರ್ ಅವರನ್ನು ಸನ್ಮಾನಿಸಲಾಯಿತು.
ತಾಲೂಕಾ ಸಮಿತಿ ಕಾರ್ಯದರ್ಶಿ ಜಿ.ಜಿ.ಹೆಗಡೆ ಮಕ್ಕಿಗದ್ದೆ ಸ್ವಾಗತಿಸಿದರು. ಗಣಪತಿ ನಾಯ್ಕ ವರದಿ ವಾಚನ ಗೈದರು. ವಿ.ಟಿ.ನಾಯ್ಕ ಗೋಳಗೋಡ ವಂದಿಸಿದರು. ಖಜಾಂಚಿ ಮಹೇಶ ಶೇಟ್ ನಿರೂಪಿಸಿದರು.

300x250 AD
Share This
300x250 AD
300x250 AD
300x250 AD
Back to top