ನವದೆಹಲಿ: ಕ್ಯಾಸಿನೊಗಳು ಮತ್ತು ಆನ್‌ಲೈನ್ ಗೇಮಿಂಗ್‌ಗಳ ಸಂಪೂರ್ಣ ಮುಖಬೆಲೆಯ ಮೇಲೆ 28 ಪ್ರತಿಶತ ಜಿಎಸ್‌ಟಿ ಫೇಸ್‌ವ್ಯಾಲ್ಯೂ ಮೇಲೆ ವಿಧಿಸಲಾಗುವುದು ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಹೊಸದಿಲ್ಲಿಯಲ್ಲಿ ನಡೆದ 51ನೇ ಜಿಎಸ್‌ಟಿ ಕೌನ್ಸಿಲ್ ಸಭೆಯ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಸೀತಾರಾಮನ್, ಆನ್‌ಲೈನ್ ಗೇಮಿಂಗ್ ಮತ್ತು ಕ್ಯಾಸಿನೊಗಳ ಮೇಲಿನ ಶೇಕಡಾ 28 ಜಿಎಸ್‌ಟಿ ಅಕ್ಟೋಬರ್ 1 ರಿಂದ ಜಾರಿಗೆ ಬರುವ ನಿರೀಕ್ಷೆಯಿದೆ. ಈ ವಿಷಯದಲ್ಲಿ ಸ್ಪಷ್ಟತೆ ನೀಡಲು ಕಾನೂನಿಗೆ ತಿದ್ದುಪಡಿ ತರಬಹುದು ಎಂದು ಜಿಎಸ್‌ಟಿ ಕೌನ್ಸಿಲ್ ತನ್ನ ಕೊನೆಯ ಸಭೆಯಲ್ಲಿ ಶಿಫಾರಸು ಮಾಡಿದೆ ಎಂದು ಸಚಿವರು ಹೇಳಿದರು.
ಕ್ಯಾಸಿನೋಗಳು, ಕುದುರೆ ರೇಸಿಂಗ್ ಮತ್ತು ಆನ್‌ಲೈನ್ ಗೇಮಿಂಗ್‌ಗಳಲ್ಲಿನ ಸರಬರಾಜುಗಳ ತೆರಿಗೆಯ ಮೇಲೆ ಸ್ಪಷ್ಟತೆಯನ್ನು ಒದಗಿಸಲು CGST ಕಾಯಿದೆ 2017 ಮತ್ತು IGST ಕಾಯಿದೆ 2017 ರಲ್ಲಿ ಕೆಲವು ತಿದ್ದುಪಡಿಗಳನ್ನು ಶಿಫಾರಸು ಮಾಡಿದೆ.
ಗೇಮಿಂಗ್ ಮತ್ತು ಜೂಜಿನ ಪ್ಲಾಟ್‌ಫಾರ್ಮ್‌ಗಳ ಮೇಲೆ ಏಕರೂಪದ ತೆರಿಗೆಯನ್ನು ಅನ್ವಯಿಸುವ ನಿರ್ಧಾರವು ಆನ್‌ಲೈನ್ ಗೇಮಿಂಗ್ ಉದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ವ್ಯಾಪಕ ಶ್ರೇಣಿಯ ಕಂಪನಿಗಳ ಮೇಲೆ ಪರಿಣಾಮ ಬೀರುತ್ತದೆ .