ಶಿರಸಿ: ಕರ್ನಾಟಕ ರಾಜ್ಯ ಔಷಧ & ಮಾರಾಟ ಪ್ರತಿನಿಧಿಗಳ ಸಂಘ(ರಿ ), ಶಿರಸಿ ಘಟಕದ ವಾರ್ಷಿಕ ಸ್ನೇಹ ಸಮ್ಮೇಳನ-2023 ಆ.1ರಂದು ಶಿರಸಿಯ ರೈತಭವನದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಜ್ಯೋತಿ ಬೆಳಗುವ ಮೂಲಕ ಶಿರಸಿ – ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ಟಿ.ನಾಯ್ಕ್ ನೆರವೇರಿಸಿ ಔಷಧ ಉದ್ಯಮದ ಬೆಳವಣಿಗೆ ಬಗ್ಗೆ ಮಾತನಾಡಿ ಸಂಘಕ್ಕೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾದ Dr.ದಿನೇಶ್ ಹೆಗಡೆ, ಯಶಸ್ವಿ ಸಂಘಟನೆಗೆ ಶ್ರದ್ದೆಯಿಂದ ಕೆಲಸ ಮಾಡಿ ಔಷಧ ಮಾರಾಟ ಪ್ರತಿನಿಧಿಗಳ ಮತ್ತು ವೈದ್ಯರ ನಡುವಿನ ಸಂಬಂಧವನ್ನು ಸ್ಮರಿಸಿದರು. ಪ್ರಾಸ್ತಾವಿಕವಾಗಿ KSM & SRA ರಾಜ್ಯ ಉಪಾಧ್ಯಕ್ಷ ಸತ್ಯಪೂರ್ಣ ಮಾತನಾಡಿ ಸದಸ್ಯರ ಸಮಸ್ಯೆಗೆ ಕಾರ್ಮಿಕ ಇಲಾಖೆಯ ಕೆಲವು ಬಲಹೀನ ಕಾನೂನುಗಳೇ ಕಾರಣ. ಸರಕಾರದ ಮಟ್ಟದಲ್ಲಿ ನಮ್ಮ ಹೋರಾಟಕ್ಕೆ ಶಾಸಕರ ಸಹಕಾರ ಕೋರಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಸಾಮಾಜಿಕ ಮುಖಂಡ ದೀಪಕ್ ದೊಡ್ಡೂರ್, ಔಷದ ಪ್ರತಿನಿಧಿಗಳು ಅತ್ಯಂತ ಶಿಸ್ತು ಬದ್ದ ಉದ್ಯೋಗಿಗಳು ಎಂದು ಕೊಂಡಾಡಿದರು. ಅಧ್ಯಕ್ಷತೆಯನ್ನು ಸಂಘದ ಗೌರವ ಸದಸ್ಯರಾದ ಮಧುಕರ್ ಹಳಕಾರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿ ಪ್ರವೀಣ್ ಕುಮಾರ್, ಹಿರಿಯ ಸದಸ್ಯ ಜಿ. ಪಿ ಭಾಗ್ವತ್, ಶಿರಸಿ ಘಟಕದ ಅಧ್ಯಕ್ಷ ಪ್ರವೀಣ್ ಪುಲ್ಕರ್ ಇದ್ದರು. ವಿನಾಯಕ ನಾಯ್ಕ್ ಸ್ವಾಗತಿಸಿದರು. 60ವರ್ಷ ಮೇಲ್ಪಟ್ಟ ಹಿರಿಯ ಪ್ರತಿನಿಧಿಗಳನ್ನು ವೇದಿಕೆಯಲ್ಲಿ ಸನ್ಮಾನಿಸಿಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಪರವಾಗಿ ಶಾಸಕ ಭೀಮಣ್ಣ ನಾಯ್ಕ್ & ವೈದ್ಯ ದಿನೇಶ್ ಹೆಗಡೆ ಅವರಿಗೆ ಸನ್ಮಾನಿಸಲಾಯಿತು. ಕಿರಣ್ ನಾಯ್ಕ್, ಸಂತೋಷ್ ಸಹಕರಿಸಿದರು. ಕಾರ್ಯಕ್ರಮವನ್ನು ಶಿರಸಿ ಘಟಕದ ಪ್ರಧಾನ ಕಾರ್ಯದರ್ಶಿ ರಮೇಶ ನಾಯ್ಕ್ ನಡೆಸಿಕೊಟ್ಟರು.