Slide
Slide
Slide
previous arrow
next arrow

ಆಧಾರ್ ಜೋಡಣೆ ಕಾರ್ಯಾಗಾರ

300x250 AD

ದಾಂಡೇಲಿ: ಅಂಚೆ ಉಳಿತಾಯ ಖಾತೆಗೆ ಆಧಾರ್ ಜೋಡಣೆ ಮಾಡುವ ಶಿಬಿರವನ್ನು ಇಲ್ಲಿನ ಮುಖ್ಯ ಅಂಚೆ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆಯೆಂದು ಅಂಚೆ ನಿರೀಕ್ಷಕ ಶಿವಾನಂದ ದೊಡ್ಡಮನಿಯವರು ತಿಳಿಸಿದ್ದಾರೆ.
ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆಯನ್ನು ಹೊಂದಿರುವ ಸಾಮಾಜಿಕ ಭದ್ರತಾ ಪಿಂಚಣಿಗಳಾದ ವೃದ್ಧಾಪ್ಯವೇತನ, ವಿಶೇಷ ಚೇತನರ ಪಿಂಚಣಿ, ವಿಧವಾ ಪಿಂಚಣಿ ಪಡೆಯುವ ದಾಂಡೇಲಿ ನಗರ ಹಾಗೂ ಗ್ರಾಮೀಣ ಪ್ರದೇಶದ ಫಲಾನುಭವಿಗಳು ಪಿಂಚಣಿ ಪಡೆಯಲು ಉಳಿತಾಯ ಖಾತೆಗೆ ಆಧಾರ್ ಜೋಡಣೆ ಕಡ್ಡಾಯವಾಗಿ ಮಾಡಬೇಕಾದ ಹಿನ್ನೆಲೆಯಲ್ಲಿ ಎರಡು ದಿನಗಳ ಈ ಆಧಾರ್ ಜೋಡಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಪಿಂಚಣಿ ಪಡೆಯುವ ಫಲಾನುಭವಿಗಳು ಈ ಕಾರ್ಯಾಗಾರದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಶಿವಾನಂದ ದೊಡ್ಡಮನಿಯವರು ವಿನಂತಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top