• Slide
    Slide
    Slide
    previous arrow
    next arrow
  • ಸುಕ್ರಿ ಗೌಡರ ತಂಡಕ್ಕೆ ಗೌರವ ಸಮರ್ಪಿಸಿದ ನೌಕಾಧಿಕಾರಿ

    300x250 AD

    ಅಂಕೋಲಾ: ನೌಕಾಪಡೆಯ ವಜ್ರಕೋಶದ ಕಮಾಂಡಿ0ಗ್ ಆಫೀಸರ್ ಆರ್.ಕೆ.ಸಿಂಗ್ ಅವರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸುಕ್ರಿ ಗೌಡರ ಜೊತೆಗೆ ದನಿಗೂಡಿಸುವ ಸಹ ಕಲಾವಿದರಿಗೆ ಸಾಂಪ್ರದಾಯಿಕ ಸೀರೆ ನೀಡಿ ಗೌರವಿಸಿದರು.

    ಇತ್ತೀಚೆಗಷ್ಟೇ ಅವರು ಪದ್ಮಶ್ರೀ ಸುಕ್ರಿ ಗೌಡರ ಮನೆಗೆ ಭೇಟಿ ನೀಡಿ ಸನ್ಮಾನಿಸಿ ಗೌರವಿಸಿದ್ದರು. ಈ ಸಂದರ್ಭದಲ್ಲಿ ಸುಕ್ರಿ ಗೌಡರ ಜೊತೆಗೆ ಇತರ ಸಹ ಕಲಾವಿದರು ಸಹ ಜಾನಪದ ಗಾಯನ ಮಾಡಿ ಎಲ್ಲರ ವನಸೂರೆಗೊಳಿಸಿದ್ದರು. ಪದ್ಮಾವತಿ ಗೌಡ, ಕುಸಲಿ ಗೌಡ, ಸಣ್ಣು ಗೌಡ, ಲಲಿತಾ ಗೌಡ ಇವರು ತಮ್ಮ ಜಾನಪದ ಗಾಯನ ಕಲೆಯನ್ನು ಅತ್ಯಂತ ಸುಂದರವಾಗಿ ಹಾಡಿ ಪ್ರಸ್ತುತಪಡಿಸಿದ್ದರು. ಹಾಗಾಗಿ ಅವರಿಗೂ ಸಹ ಸಾಂಪ್ರದಾಯಿಕ ಸೀರೆ ನೀಡುವುದರ ಮೂಲಕ ಗೌರವಿಸಲಾಗಿದೆ.

    300x250 AD

    ಸುಕ್ರಿ ಗೌಡರ ಮನೆಯಲ್ಲಿ ಫ್ಯಾನ್‌ಗಳು ಇಲ್ಲದ್ದನ್ನು ಗಮನಿಸಿದ ಇವರು 2 ಫ್ಯಾನ್‌ಗಳನ್ನು ಉಡುಗೊರೆಯಾಗಿ ನೀಡಿ ತಮ್ಮ ಮಾನವೀಯ ಕಳಕಳಿ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಜನಶಕ್ತಿ ವೇದಿಕೆಯ ಸದಸ್ಯ ನಿತ್ಯಾನಂದ ನಾಯ್ಕ, ರವೀಶ್ ನಾಯ್ಕ ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top