ಕಾರವಾರ : ತಾಲೂಕಿನ ಸಿದ್ದರದಲ್ಲಿಸಾನಿಧ್ಯ ಎಂಬ 8 ತಿಂಗಳ ಹಸುಗೂಸೊಂದು ಪ್ಲಗ್’ಗೆ ಹಾಕಿದ್ದ ಮೊಬೈಲ್ ಚಾರ್ಜರ್ ಅನ್ನು ಬಾಯಿಗೆ ಇಟ್ಟುಕೊಂಡ ಪರಿಣಾಮ ಶಾಕ್ ಹೊಡೆದು ಸಾವು ಕಂಡ ದುರ್ಘಟನೆ ನಡೆದಿದೆ. ಸಂತೋಷ್ ಕಲ್ಲುಟ್ಕರ್ ಹಾಗೂ ಸಂಜನಾ ಎಂಬುವವರ ಮಗಳು ಸಾನಿಧ್ಯ ಮನೆಯಲ್ಲಿ ಆಟವಾಡುತ್ತಾ ಮೊಬೈಲ್ ಚಾರ್ಜರ್’ನ್ನು ಬಾಯಲ್ಲಿ ಹಾಕಿದ ಸಂದರ್ಭದಲ್ಲಿ ಸ್ವಿಚ್ ಆನ್ ಇದ್ದ ಕಾರಣ ವಿದ್ಯುತ್ ಪ್ರವಹಿಸಿ ಮಗು ಸಾವನ್ನಪ್ಪಿದೆ. ಪಾಲಕರ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣವಾಗಿದ್ದು ಕಾರವಾರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾಲಕರ ನಿರ್ಲಕ್ಷ್ಯ: ಸ್ವಿಚ್ ಆನ್ ಇದ್ದ ಮೊಬೈಲ್ ಚಾರ್ಜರ್ ಬಾಯಿಗಿಟ್ಟ ಹಸುಗೂಸು ಸಾವು
