Slide
Slide
Slide
previous arrow
next arrow

ಸಾಹಿತ್ಯದ ಶಾಸ್ತ್ರೀಯ ಓದಿನಿಂದ ಮಾತ್ರ ಹಳೆಗನ್ನಡದ ಆಸಕ್ತಿ ಮೂಡಲು ಸಾಧ್ಯ: ಭವ್ಯಾ ಹಳೆಯೂರು

300x250 AD

ಶಿರಸಿ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಶಿರಸಿ ಜಿಲ್ಲೆ ಹಾಗೂ ನೆಮ್ಮದಿ ಮಾಸದ ಮಾತು ಸಂಯುಕ್ತಾಶ್ರಯದಲ್ಲಿ ನಡೆದ ಹಳಗನ್ನಡದ ಕವಿ ರನ್ನನ ಕೃತಿ ‘ಸಾಹಸ ಭೀಮ ವಿಜಯ’ ಕುರಿತಾದ ಉಪನ್ಯಾಸವನ್ನು ಉಪನ್ಯಾಸಕಿ ಭವ್ಯಾ ಹಳೆಯೂರು ನಡೆಸಿಕೊಟ್ಟರು.

ಸಾಹಿತ್ಯದ ಶಾಸ್ತ್ರೀಯ ಓದು ಪ್ರಾರಂಭವಾದಾಗ ಮಾತ್ರ ಯುವಕರಲ್ಲಿಯೂ ಹಳೆಗನ್ನಡದ ಆಸಕ್ತಿ ಮೂಡಲು ಸಾಧ್ಯ. ಹೊಸ ಕನ್ನಡಕ್ಕಿಂತ ಹಳೆಗನ್ನಡ ಕಷ್ಟಕರವಲ್ಲ, ಆಸಕ್ತಿದಾಯಕವಾಗಿದೆ. ರನ್ನನ ಗದಾಯುದ್ಧ ಎಂದು ಪ್ರಚಲಿತವಾಗಿರುವ ಸಾಹಾಸಭೀಮ ವಿಜಯದಲ್ಲಿ ಮಹಾಭಾರತದ 18ನೇ ದಿನದ ದುರ್ಯೋಧನನ ಮನಸ್ಥಿತಿಯ ಕುರಿತು ಕವಿಯ ವರ್ಣನೆ ಮೆಚ್ಚದವರು ಯಾರೂ ಇಲ್ಲ. ಮಹಾಭಾರತದ ಕಥೆಯ ಸಿಂಹಾವಲೋಕನವನ್ನು ಮಾಡುತ್ತಿದ್ದೇನೆ, ಸರಸ್ವತಿಯ ಭಂಡಾರವನ್ನು ಒಡೆದು ಬಿಟ್ಟಿದ್ದೇನೆ, ತಾನೊಬ್ಬ ಕವಿರತ್ನ, ತನ್ನ ಈ ಕೃತಿ ವಿಮರ್ಶೆ ಮಾಡುವವರಿಗೆ ಎಂಟೆದೆ ಇರಬೇಕು ಎಂಬ ಸಾಲುಗಳು ರತ್ನತ್ರಯರಲ್ಲೊಬ್ಬನಾದ ರನ್ನನ ಆತ್ಮವಿಶ್ವಾಸದ ಪ್ರತೀಕವಾಗಿದೆ. ಪ್ರತಿಯೊಂದು ಪಾತ್ರದ ಹಿನ್ನೆಲೆಯನ್ನು ವರ್ಣಿಸುತ್ತಾ ನವರಸಗಳನ್ನು ಬರವಣಿಗೆಯಲ್ಲಿ ವ್ಯಕ್ತಪಡಿಸಿರುವುದು ಕವಿಯ ವಿಶೇಷತೆ. ಯದ್ಧಭೂಮಿಯ ದೃಶ್ಯವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ ಕವಿಯ ಈ ಕೃತಿ ಸಾಹಿತ್ಯ ಲೋಕದಲ್ಲಿ ಮತ್ತೊಂದಿಲ್ಲವೆoದು ಅಭಿನಯ ಸ್ಪರ್ಶದೊಂದಿಗಿನ ತಮ್ಮ ಉಪನ್ಯಾಸದಲ್ಲಿ ನುಡಿದರು.
ಹಳೆಗನ್ನಡದ ಕುರಿತು ಆಕರ್ಷಣೆ ಹೆಚ್ಚಿಸಲಿಕ್ಕೆ ಇಂಥ ಉಪನ್ಯಾಸಗಳು ಆಗಾಗ ಜರುಗುತ್ತಿರಬೇಕು. ಹಳೆಗನ್ನಡದ ಬಗೆಗೆ ಒಲವು ಹೆಚ್ಚಿಸಿಕೊಂಡರೆ ಕನ್ನಡ ಉಳಿಸಿದಂತೆ ಆಗುತ್ತದೆ ಎಂದು ಅಧ್ಯಕ್ಷತೆಯನ್ನು ವಹಿಸಿದ್ದ ಪ್ರೊ ಡಿ.ಜಿ.ಹೆಗಡೆಯವರು ನುಡಿದರು.
ಕಾರ್ಯಕ್ರಮವು ಕವಯತ್ರಿ ವಿಮಲಾ ಭಾಗ್ವತರ ಶಾರದಾ ಸ್ತುತಿ ಹಾಗೂ ಗಾಯನದೊಂದಿಗೆ ಆರಂಭವಾಯಿತು. ಚಿಂತಕ ಗಣಪತಿ ಭಟ್ ವರ್ಗಾಸರ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಅಭಾಸಾಪ ರಾಜ್ಯ ಸಮಿತಿ ಸದಸ್ಯ ಜಗದೀಶ ಭಂಡಾರಿ ವಂದಿಸಿದರು. ಅಭಾಸಾಪ ಜಿಲ್ಲಾ ಕಾರ್ಯದರ್ಶಿ ಕೃಷ್ಣ ಪದಕಿ ಕಾರ್ಯಕ್ರಮ ನಿರ್ವಹಿಸಿ ನಿರೂಪಿಸಿದರು.

300x250 AD
Share This
300x250 AD
300x250 AD
300x250 AD
Back to top