Slide
Slide
Slide
previous arrow
next arrow

‘ಸ್ವರ್ಣ ಕನ್ನಡತಿ’ ರಾಜ್ಯ ಪ್ರಶಸ್ತಿ ಪಡೆದ ಉಷಾ ನಾಯ್ಕ್

300x250 AD

ಸಿದ್ದಾಪುರ; ಅಕ್ಷರ ದೀಪ ಫೌಂಡೇಶನ್,ರಿ. ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕಲಾ ವೇದಿಕೆ, ಧಾರವಾಡ -ಬೆಳಗಾವಿ, ಇವರು  ರಾಜ್ಯ ಮಟ್ಟದ ಕವಿ ಕಾವ್ಯ ಸಂಗಮ  ಕಾರ್ಯಕ್ರಮದಲ್ಲಿ  ಸ್ಥಳೀಯ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಛೇರಿಯ ಉಷಾ ಪ್ರಶಾಂತ ನಾಯ್ಕ ರವರಿಗೆ ಸ್ವರ್ಣ ಕನ್ನಡತಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲಿ ತನ್ನ ಅಭೂತಪೂರ್ವ ಸಾಧನೆಯಿಂದ ಸ್ವರ್ಣ ಕನ್ನಡತಿ ರಾಜ್ಯ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಉಷಾ ಪ್ರಶಾಂತ ನಾಯ್ಕ ತಾಲೂಕಿನ ವಾಜಗೋಡ ಪಂಚಾಯತ್ ಅಳವಳ್ಳಿ – ಕಾನಳ್ಳಿಯವರು. ಇವರು ಪ್ರಸ್ತುತ ಸಿದ್ದಾಪುರ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ, ಸಿದ್ದಾಪುರದಲ್ಲಿ ಭೂಮಾಪಕರಾಗಿದ್ದು ,ಹಾಲಿ ಪ್ರಭಾರ ಪರ್ಯಾವೇಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಾ ಇಲಾಖೆಗೂ ಕೀರ್ತಿ ತಂದಿರುತ್ತಾರೆ. ಇವರು ವಿನಾಯಕ ಸೌಹಾರ್ದ ಕ್ರೆಡಿಟ್ ಕೋ ಆಪ್ ಲಿಮಿಟೆಡ್,ಸಿದ್ದಾಪುರದ ವಿಭಾಗೀಯ ವ್ಯವಸ್ಥಾಪಕ ಪ್ರಶಾಂತ್ ವಿ. ನಾಯ್ಕ,  ಇವರ ಧರ್ಮಪತ್ನಿ ಆಗಿರುತ್ತಾರೆ.ಇವರ ಈ ಸಾಧನೆಗೆ ಅನೇಕರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top