Slide
Slide
Slide
previous arrow
next arrow

ಅಂಕೋಲಾ ಸಿಟಿ ಲಯನ್ಸ್ ಕ್ಲಬ್ ವೃಕ್ಷಾರೋಪಣ, ಪರಿಸರ ಜಾಗೃತಿ ಕಾರ್ಯಕ್ರಮ

300x250 AD

ಅಂಕೋಲಾ : ಅಂಕೋಲಾ ಸಿಟಿ ಲಯನ್ಸ್ ಕ್ಲಬ್, ಪೂರ್ಣ ಪ್ರಜ್ಞಾ ಸಮೂಹ ವಿದ್ಯಾಸಂಸ್ಥೆ ಮತ್ತು ಪತಂಜಲಿ ಯೋಗ ಸಮಿತಿ ಸಂಯುಕ್ತ ಆಶ್ರಯದಲ್ಲಿ ಪರಿಸರ ಜಾಗೃತಿ ಮೂಡಿಸುವ ಕಾರ್ಯ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿದ ವಲಯ ಅರಣ್ಯಾಧಿಕಾರಿ ಗಣಪತಿ ವ್ಹಿ. ನಾಯಕ ಮಾತನಾಡಿ, ಪರಿಸರ ನಮ್ಮ ಆಸ್ತಿ. ಅದನ್ನು ಉಳಿಸುವ ಕಾರ್ಯ ಮತ್ತು ಪರೋಕ್ಷವಾಗಿ ಜೀವಿಗಳನ್ನು ಉಳಿಸುವ ಕಾರ್ಯ ನಮ್ಮಿಂದಾಗಬೇಕು. ಅದು ಜನಾಂದೋಲನವಾಗಬೇಕು ಎಂದು ಆಶಿಸಿದರು.
ಪೂರ್ಣ ಪ್ರಜ್ಞಾ ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಟ್ರಸ್ಟಿ ಪ್ರಶಾಂತ ನಾಯಕ ಮಾತನಾಡಿ, ಪ್ಲಾಸ್ಟಿಕ್ ಮುಕ್ತ ಪರಿಸರ ನಮ್ಮದಾಗಬೇಕು. ಪ್ರತಿಯೊಬ್ಬರು ಪ್ರತಿ ಮನೆಯಿಂದಲೂ ಈ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದರು.
ಲಯನ್ಸ್ ಅಂಕೋಲಾ ಸಿಟಿಯ ಅಧ್ಯಕ್ಷರಾದ ಲಾ. ಡಾ. ವಿಜಯದೀಪ ಮಾತನಾಡಿ, ಸದೃಢ ಸಮಾಜ ಮತ್ತು ಆರೋಗ್ಯಕ್ಕಾಗಿ ಆಮ್ಲಜನಕದ ಮಹತ್ವ ತಿಳಿಸಿ, ಪ್ರಕೃತಿದತ್ತವಾದ ಆಲದ ಮರಗಳು, ತುಳಸಿ, ಬೇವಿನ ಗಿಡಗಳು ನಮ್ಮ ಆರೋಗ್ಯ ರಕ್ಷಣೆಗಾಗಿ ನೀಡುವ ಕೊಡುಗೆ ಅಪಾರವಾದದ್ದು. ಗಿಡಗಳನ್ನು ನೆಟ್ಟು ಪೋಷಿಸಿ, ಪ್ರಕೃತಿ ಉಳಿಸಿ ಜೀವ ರಕ್ಷಿಸುವ ಪ್ರಯತ್ನಕ್ಕೆ ಕೈ ಜೋಡಿಸೋಣ ಎಂದರು.
ಈ ಸಮಾರಂಭದಲ್ಲಿ ಔಷಧಿ ಉಪಯುಕ್ತ ವೃಕ್ಷಾರೋಹಣ ಜೊತೆಗೆ ವಿನೂತನವಾಗಿ ಪರಿಸರ ಸ್ನೇಹಿ “ಸೀಡ್‌ಪೆನ್ಸಿಲ್” ಸೀಡ್ ಪೆನ್ನು ಮತ್ತು “ಸೀಡ್‌ಬಾಲ್” ಶಾಲಾ/ಕಾಲೇಜು/ನರ್ಸರಿ ಮಕ್ಕಳಿಗೆ ವಿತರಿಸುವ ಮೂಲಕ ವಿನೂತನ ಜಾಗೃತಿ ಮೂಡಿಸಲಾಯಿತು. ನೆರೆದ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು. ನರ್ಸರಿ ಮಕ್ಕಳಿಗಾಗಿ ಏರ್ಪಡಿಸಲಾದ ಪರಿಸರ ಕುರಿತು ನಡೆಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಬಹುಮಾನ ನೀಡಲಾಯಿತು. ಇದೇ ಸಂದರ್ಭದಲ್ಲಿ ಪೂರ್ಣಪ್ರಜ್ಞಾ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಅಕ್ಷರ ದಾಸೋಹ ಕಾರ್ಯಕ್ರಮಕ್ಕೆ ಶ್ರೀ ಮಹಾಲಕ್ಷ್ಮಿ ಕೇರ್ಸ್ ವತಿಯಿಂದ 20 ಕೆ.ಜಿ. ಉಪ್ಪಿನಕಾಯಿ ವಿತರಿಸಲಾಯಿತು.
ಸುಧಾ ಶೆಟ್ಟಿ ಶೆಟ್ಟಿಯವರ ಗಣೇಶ ಸ್ತುತಿಯೊಂದಿಗೆ ಪ್ರಾರಂಭಗೊಂಡ ಈ ಸಮಾರಂಭದಲ್ಲಿ ಭಾಗವಹಿಸಿದ ಸರ್ವರನ್ನು ಕಾಯದರ್ಶಿ ಎಂ.ಜೆ.ಎಫ್. ಪ್ರದೀಪ ರಾಯ್ಕರ ಸ್ವಾಗತಿಸಿದರು. ಖಜಾಂಚಿ ಲಾ. ಉದಯಾನಂದ ನೇರಲಕಟ್ಟೆ ಸರ್ವರ ಉಪಕಾರ ಸ್ಮರಿಸಿದರು. ಲಾ. ಎನ್.ಎಚ್. ನಾಯ್ಕ ಕಾರ್ಯಕ್ರಮ ನಿರ್ವಹಸಿದರು. ಪತಂಜಲಿ ಯೋಗ ಗುರೂಜಿ ವಿನಾಯಕ ಗುಡಿಗಾರ ಮತ್ತು ಅವರ ಸಹಯೋಗಿಗಳು ಕಾಲೇಜಿನ ಮತ್ತು ಪ್ರೌಢಶಾಲಾ ಶಿಕ್ಷಕರು, ಉಪನ್ಯಾಸಕರು ಪಾಲ್ಗೊಂಡಿದ್ದರು. ಸಿಟಿ ಲಯನ್ಸ್ ಕ್ಲಬ್ ಸದಸ್ಯರಾದ ಎಂ.ಜೆ.ಎಫ್. ಶಶಿಧರ ಶೇಣ್ವಿ, ಚಾರ್ಟರ್ ಲ.ಕಮಲಾಕರ ಬೋರಕ, ಲ.ಸುರೇಶ ನಾಯ್ಕ, ಲ.ಮೋಹನ ಶೆಟ್ಟಿ, ಲ. ಕೃಷ್ಣಾನಂದ ಶೆಟ್ಟಿ, ಲ.ಪ್ರಿಯಾ ರಾಯ್ಕರ, ಲಾ ರೋಶ್ನಾ ವಿಜಯದೀಪ, ಲ.ಜಯಲಕ್ಷ್ಮಿ ಶೆಟ್ಟಿ, ಲ.ಮಾಯಾ ಶೆಟ್ಟಿ ಮತ್ತು ಇನ್ನಿತರರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top