Slide
Slide
Slide
previous arrow
next arrow

ಭಾರತದಲ್ಲಿ ಮೊದಲ ಬಾರಿಗೆ ‘ವಿಶ್ವ ಕಾಫಿ ಸಮ್ಮೇಳನ’

300x250 AD

ಬೆಂಗಳೂರು:  ‘ವಿಶ್ವ ಕಾಫಿ ಸಮ್ಮೇಳನ’ವನ್ನು (ಡಬ್ಲ್ಯುಸಿಸಿ) ಭಾರತ ಮೊದಲ ಬಾರಿಗೆ ಆಯೋಜಿಸಲು ಸಜ್ಜಾಗುತ್ತಿದೆ. ಬೆಂಗಳೂರಿನಲ್ಲಿ ಸೆಪ್ಟೆಂಬರ್ 25 ರಿಂದ ಸೆಪ್ಟೆಂಬರ್ 28 ರವರೆಗೆ ಐದನೇ ಆವೃತ್ತಿಯ ವಿಶ್ವ ಕಾಫಿ ಸಮ್ಮೇಳನವನ್ನು ಇಂಟರ್‌ನ್ಯಾಷನಲ್ ಕಾಫಿ ಸಂಸ್ಥೆಯು (ಐಸಿಒ) ಆಯೋಜನೆಗೊಳಿಸುತ್ತಿದೆ.

ಇಂಟರ್‌ನ್ಯಾಷನಲ್ ಕಾಫಿ ಸಂಸ್ಥೆ ಕಾಫಿ ವ್ಯಾಪಾರವನ್ನು ಉತ್ತೇಜಿಸಲು ಮತ್ತು ಕಾಫಿ ಉತ್ಪಾದಿಸುವ ಮತ್ತು ಸೇವಿಸುವ ರಾಷ್ಟ್ರಗಳ ನಡುವೆ ಸಹಕಾರವನ್ನು ಉತ್ತೇಜಿಸಲು ಮೀಸಲಾಗಿರುವ ಪ್ರಾಥಮಿಕ ಅಂತರ್ ಸರ್ಕಾರಿ ಸಂಸ್ಥೆಯಾಗಿದೆ. ಬೆಂಗಳೂರಿನಲ್ಲಿ ಇಂದು ನಡೆದ ಡಬ್ಲ್ಯುಸಿಸಿ 2023ರ ಪೂರ್ವವೀಕ್ಷಣೆ ಸಮಾರಂಭದಲ್ಲಿ ಸಮ್ಮೇಳನದ ಲೋಗೋವನ್ನು ಅನಾವರಣಗೊಳಿಸಲಾಯಿತು.

ಟೆನಿಸ್ ಆಟಗಾರ ರೋಹನ್ ಬೋಪಣ್ಣ ಸಮ್ಮೇಳನದ ಬ್ರಾಂಡ್ ಅಂಬಾಸಿಡರ್ ಆಗಿರುತ್ತಾರೆ ಎಂದು ಕಾಫಿ ಬೋರ್ಡ್ ಆಫ್ ಇಂಡಿಯಾ ಸಿಇಒ ಮತ್ತು ಕಾರ್ಯದರ್ಶಿ ಕೆ.ಜಿ.ಜಗದೀಶ್‌ ಘೋಷಿಸಿದ್ದು, ಸಮ್ಮೇಳನದಲ್ಲಿ ಕಾಫಿ ಮತ್ತು ಅದರ ಉತ್ಪಾದನೆಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ವಿಚಾರ ಸಂಕಿರಣ ನಡೆಯಲಿದೆ ಎಂದು ತಿಳಿಸಿದ್ದಾರೆ.

300x250 AD

ಸಮ್ಮೇಳನದ ಮೊದಲ ದಿನ, ಆರ್ಥಿಕತೆ ಮತ್ತು ಪುನರುತ್ಪಾದಕ ಕೃಷಿ, ಹಣಕಾಸು ಕಾರ್ಯವಿಧಾನ ಮತ್ತು ಕಾಫಿ ವಲಯಕ್ಕೆ ಅವಕಾಶಗಳು, ಕಾಫಿ ಗುಣಮಟ್ಟ ಮತ್ತು ವಿಶೇಷ ಕಾಫಿಗಳು, ಸ್ಟಾರ್ಟ್-ಅಪ್‌ಗಳು ಮತ್ತು ಕಾಫಿ ಮೌಲ್ಯ ಸರಪಳಿಯಲ್ಲಿನ ಆವಿಷ್ಕಾರಗಳು ಮುಂತಾದ ವಿಷಯಗಳ ಕುರಿತು ವಿಚಾರಗೋಷ್ಠಿಗಳು ನಡೆಯಲಿವೆ.

Share This
300x250 AD
300x250 AD
300x250 AD
Back to top