ಮುಂಡಗೋಡ: ಅರಣ್ಯವಾಸಿಗಳು ಅರಣ್ಯ ಕಾಪಾಡುವುದು ಅರಣ್ಯವಾಸಿಗಳ ಕರ್ತವ್ಯ. ಅರಣ್ಯ ಪ್ರದೇಶದ ಸಾಂದ್ರತೆ ಹೆಚ್ಚಿಸುವ ಉದ್ದೇಶದಿಂದ ಲಕ್ಷ ವೃಕ್ಷ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ಮುಂಡಗೋಡ ತಾಲೂಕ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ಶಿವಾನಂದ ಜೋಗಿ ಅವರು ಹೇಳಿದರು.
ಅವರು ಮುಂಡಗೋಡ ತಾಲೂಕಿನ ನಂದಿಕಟ್ಟಾ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನಕ್ಕೆ ಚಾಲನೆ ನೀಡಿ ಮೇಲಿನಂತೆ ಮಾತನಾಡುತ್ತಿದ್ದರು.
ತಾಲೂಕಾದ್ಯಂತ ಅಗಸ್ಟ 14 ರವರೆಗೆ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅರಣ್ಯವಾಸಿಗಳು ಹೇಚ್ಚಿನ ಸಂಖ್ಯೆಯಲ್ಲಿ ಸಹಕರಿಸಬೇಕೆಂದು ಅವರು ಕೋರಿದರು.
ತಾಲೂಕಾದ್ಯಂತ ಹುನದುಂದ, ನಂದಿಕಟ್ಟಾ, ಚಿಗಳ್ಳಿ, ಚೌಡಳ್ಳಿ, ಕಾತೂರ, ಗುಂಜಾವತಿ, ಕೋಡಂಬಿ, ಸಾಲಗಾಂವ, ಬೆಡಸಗಾಂವ ಮುಂತಾದ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಲಕ್ಷ ವೃಕ್ಷ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ತಾಲೂಕಿನಾದ್ಯಂತ ಜರುಗಿದ ಕಾರ್ಯಕ್ರಮದಲ್ಲಿ ಶೇಖಯ್ಯ ಹಿರೇಮಠ, ರಾಮಣ್ಣ ಜೋಗಿ ಗ್ರಾಮ ಪಂಚಾಯತ ಸದಸ್ಯರು, ಭೀಮಣ್ಣ ಆಲೂರು, ರಮೇಶ ನೇಮಣ್ಣನವರ, ಕಲಾವತಿ ಕೋಟಣಸಿ, ವಿರಭದ್ರ ಹುನಗುಂದ, ಈರಪ್ಪ ನಂದಿಕಟ್ಟಾ, ಚಿಗಳ್ಳಿ ಮಹೇಶ, ಶಿವಾಜಿ ಚೌಡಳ್ಳಿ, ಶಿವಪ್ಪ ಮುಡಸಾಲಿ ಕಾತೂರ, ಯಲ್ಲಪ್ಪ ನೇಮಣ್ಣನವರ, ದೋಸ್ ತಾಮಸ್ ಹಸನ್ ಸಾಬ, ದುಣಸಿ ಗೌಸ್ ಖಾನ್ ಕಲ್ಲಟಗಿ, ವಾವನ ಕಟಾವಕರ, ನಬಿಬಸಾಬ ಮಿಶ್ರಕೋಟಿ, ಮುಂತಾದವರು ಭಾಗವಹಿಸಿದ್ದರು.