ಸಿದ್ದಾಪುರ: ಜಾನಪದ ಡೊಳ್ಳಿನೊಂದಿಗೆ ಪರಿಸರ ಜಾಗೃತಿ ರ‍್ಯಾಲಿ, ಮಕ್ಕಳಿಗೆ ಗಿಡ ವಿತರಣೆ, ಗಿಡ ನೆಡುವಿಕೆ, ಪರಿಸರ ಜಾಗೃತೆ ಸಭೆ ಮುಂತಾದ ವೈವಿಧ್ಯಮಯವಾಗಿ ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನವು ಸೋಮವಾರ ಸಿದ್ದಾಪುರದಲ್ಲಿ ಯಶಸ್ವಿಯಾಗಿ ಚಾಲನೆಗೊಂಡಿತು.
ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಜಿಲ್ಲಾದ್ಯಂತ ಏಕಕಾಲದಲ್ಲಿ ಚಾಲನೆಗೊಂಡ ಲಕ್ಷ ವೃಕ್ಷ ಗಿಡ ನೆಡುವ ಕಾರ್ಯಕ್ರಮವನ್ನು ಸಿದ್ದಾಪುರ ತಾಲೂಕಿನ, ಶಿರಳಗಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಸಾಮಾಜಿಕ ಚಿಂತಕ ಕಾಗೋಡ ತಿಮ್ಮಪ್ಪ ಗಿಡ ನೆಟ್ಟು, ವಿದ್ಯಾರ್ಥಿಗಳಿಗೆ ಗಿಡ ನೆಡುವ ಮೂಲಕ ಚಾಲನೆ ನೀಡಿರುವುದು ವಿಶೇಷವಾಗಿತ್ತು.
ಶಿರಳಗಿ ಪ್ರಾರ್ಥಮಿಕ ಶಾಲೆಯ ಆವರಣದಲ್ಲಿ ಗಿಡ ನೆಟ್ಟ ನಂತರ, ಶಿರಳಗಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಪರಿಸರ ಜಾಗೃತೆ ಫಲಕದೊಂದಿಗೆ ರ‍್ಯಾಲಿ ಜರುಗಿದ್ದು, ಹೊಳೆಆಚಿನ ಕೆರೆಯಲ್ಲಿ ಪರಿಸರ ಜಾಗೃತೆ ಹಮ್ಮಿಕೊಳ್ಳಲಾಯಿತು.
ಅರಣ್ಯ ಉಳಿವು ನಿಮ್ಮೇಲ್ಲರ ಕರ್ತವ್ಯ: ಮಾನವನ ಸಂಸ್ಕೃತಿ ಮತ್ತು ಇಚ್ಛಾಶಕ್ತಿಯ ಮೇಲೆ ಹೋರಾಟದ ಭವಿಷ್ಯ ಅಡಗಿರುತ್ತದೆ. ಅರಣ್ಯ ಭೂಮಿ ಹಕ್ಕಿನೊಂದಿಗೆ, ಪರಿಸರ ಜಾಗೃತೆ ಹಮ್ಮಿಕೊಂಡಿರುವುದು ಹೋರಾಟಗಾರ ವೇದಿಕೆಯ ಶ್ರೇಷ್ಟ ಮಟ್ಟದ ಕಾರ್ಯ. ಮನುಷ್ಯ ತನ್ನ ಅವಶ್ಯಕತೆಗಾಗಿ ಕಾಡು ನಾಶ ಮಾಡಿರುವ ಹಿನ್ನೆಲೆಯಲ್ಲಿ, ಇಂದು ಗಿಡ ನೆಡುವ ಮೂಲಕ ಪರಿಸರ ಪ್ರಜ್ಞೆ ಬೆಳೆಸಿಕೊಂಡಿರುವ ಉತ್ತಮ ಸಂಸ್ಕೃತಿ ಪರಿಸರಕ್ಕೆ ದ್ಯೋತಕವಾಗಿದೆ.
ಪ್ರಶಂಸೆ: ಇಂದಿನ ಸಮಾಜಕ್ಕೆ ಉತ್ತಮ ಸಂದೇಶವನ್ನ ಸಾರಿದ ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನ ಪ್ರಶಂಸೆಗೆ ಅರ್ಹ. ಇಂತಹ ಕಾರ್ಯವು ರಾಜ್ಯಾದ್ಯಂತ ಪ್ರಸರಿಸಲಿ ಎಂದು ಕಾಗೋಡ ತಿಮ್ಮಪ್ಪ ಹೇಳಿದರು.
ಸಭೆಯಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಸ್ವಾಗತಿಸಿ ಪ್ರಾಸ್ತವಿಕ ಮಾತನಾಡಿದರು. ಮಾಭ್ಲೇಶ್ವರ ನಾಯ್ಕ ಬೇಡ್ಕಣಿ, ದಿನೇಶ ನಾಯ್ಕ ಬೇಡ್ಕಣಿ, ಸುನೀಲ್ ನಾಯ್ಕ ಸಂಪಖಂಡ, ರಾಘವೇಂದ್ರ ನಾಯ್ಕ ಕವಂಚೂರು, ನಾಗರಾಜ ಮರಾಠಿ ಕೋಡಿಗದ್ದೆ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವಸಂತ ನಾಯ್ಕ, ರವಿ ನಾಯ್ಕ ಹಂಜಗಿ, ಜಗದೀಶ್ ಬಿಕ್ಕಳಸಿ, ಭಾಸ್ಕರ ಮುಗದೂರು, ಬಿಡಿ ನಾಯ್ಕ, ಜೈವಂತ ಕಾನಗೋಡ, ವಿ ಎನ್ ನಾಯ್ಕ ಬೇಡ್ಕಣಿ, ಮಾದೇವ ಹಿರೇಮಕ್ಕಿ, ಅಣ್ಣಪ್ಪ ನಾಯ್ಕ, ಸುಧಾಕರ ಮಡಿವಾಳ ಬಿಳಗಿ ಮುಂತಾದವರು ನೇತೃತ್ವ ವಹಿಸಿದ್ದರು.