ಶಿರಸಿ: ತಾಲೂಕಿನ ಕಸಾಪ ಕಾರ್ಯಕಾರಿಣಿ ಸಭೆಯು ಶನಿವಾರ ಶಿರಸಿ ನೆಮ್ಮದಿಯಲ್ಲಿ ಜರುಗಿತು. ಕಸಾಪ ಶಿರಸಿ ತಾಲೂಕಾಧ್ಯಕ್ಷ ಜಿ. ಸುಬ್ರಾಯ ಭಟ್ ಬಕ್ಕಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಸಾಲಿನಲ್ಲಿ ನಡೆಸಬಹುದಾದ ಕಾರ್ಯಕ್ರಮದ ಯಾದಿ ತಯಾರಿಸಲಾಯಿತು. ಎಲ್ಲಾ ಕಾರ್ಯಕಾರಿಣಿ ಸದಸ್ಯರು ಒಂದೊಂದು ಕಾರ್ಯಕ್ರಮದ ಜವಾಬ್ದಾರಿ ಆಮಂತ್ರಿಸಿಸುವ ಕಾರ್ಯ ಮಾಡಬೇಕು ಎಂದು ನಿರ್ಧರಿಸಲಾಯಿತು.
ತಾಲೂಕಾ ಕಸಾಪ ಇತರೆ ಸಂಘಟನೆಯ ಸಹಯೋಗದಲ್ಲಿ ಉತ್ತರ ಕನ್ನಡಕ್ಕೆ ಸಿಮೀತವಾಗಿ ಜನಾಂಗಿಯ ಅಧ್ಯಯನ ಕಾರ್ಯಕ್ರಮ ನಡೆಸಲು ತೀರ್ಮಾನಿಸಿತು. ಜಿಲ್ಲಾ ಸಮಿತಿ ಸಂಘ – ಸಂಸ್ಥೆ ಪ್ರತಿನಿಧಿ ಸದಸ್ಯ ಡಾII ವೆಂಕಟೇಶ್ ನಾಯ್ಕ, ಕಾರ್ಯದರ್ಶಿ ಶ್ರೀನಿವಾಸ ನಾಯ್ಕ, ವಾಸುದೇವ ಶಾನಭಾಗ, ಸದಸ್ಯರಾದ ಮಹದೇವ ಛಲವಾದಿ ‘ಶ್ರೀಕೃಷ್ಣ ಪದಕಿ, ಆರ್. ಡಿ ಹೆಗಡೆ,ಆಲ್ಮನೆ, ರಾಜೇಶ ದೇಶಭಾಗ ಪ್ರೋ ಕೆ.ಎನ್.ಹೊಸಮನಿ, ಸಾವಿತ್ರಿ ಶಾಸ್ತ್ರಿ, ವಿಮಲಾಭಾಗ್ವತ್ ಉಪಸ್ಥಿತರಿದ್ದರು. ಇದೇ ವೇಳೆ ಕೊಂಕಣಿ ಅಧ್ಯಯನ ಪೀಠದ ಸದಸ್ಯರಾಗಿ ಆಯ್ಕೆಯಾದ ತಾಲೂಕಾಕಸಾಪ ಕಾರ್ಯದರ್ಶಿ ವಾಸುದೇವ ಶಾನಭಾಗರನ್ನು ಗೌರವಿಸಲಾಯಿತು.