Slide
Slide
Slide
previous arrow
next arrow

ರಸ್ತೆ ಬದಿ ಉರುಳಿಬಿದ್ದ ಕಾರು: ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

300x250 AD

ಅಂಕೋಲಾ: ರಾಷ್ಟ್ರೀಯ ಹೆದ್ದಾರಿ 66 ಗೌರಿಕೆರೆ ಪ್ರದೇಶದಲ್ಲಿ, ಮಂಗಳವಾರ ಮಧ್ಯಾಹ್ನ ನೀಲಿ ಬಣ್ಣದ ಬಲೆನೋ ಕಾರೊಂದು ಪಲ್ಟಿಯಾಗಿದ್ದು, ಜಖಂಗೊಂಡಿದೆ. ಅದೃಷ್ಟವಶಾತ್ ಏರ್ ಬ್ಯಾಗ್ ಓಪನ್ ಆಗಿದ್ದರಿಂದ ಚಾಲಕ ಮತ್ತು ಇನ್ನೋರ್ವ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

KA 31 N 6041 ನೊಂದಣಿ ಸಂಖ್ಯೆಯ ನೀಲಿ ಬಣ್ಣದ ಬಲೇನೋ ಕಾರ್ ಚಾಲಕನ ನಿಯಂತ್ರಣ ತಪ್ಪಿ, ಹೆದ್ದಾರಿ ಅಂಚಿಗೆ ಪಲ್ಟಿಯಾದ ಘಟನೆ ಅಂಕೊಲಾ ತಾಲೂಕಿನ ರಾ.ಹೆ 66 ರ ಬಾಳೆಗುಳಿ – ಹಟ್ಟಿಕೇರಿ ಟೋಲ್ ನಾಕಾ ಮಾರ್ಗಮಧ್ಯೆ ಗೌರಿಕೆರೆ ಪ್ರದೇಶದಲ್ಲಿ ಸಂಭವಿಸಿದೆ. ಅಪಘಾತಕ್ಕೀಡಾಗಿದ್ದು ಯಲ್ಲಾಪುರ ಉಮ್ಮಚಿಗೆ ನಿವಾಸಿಯವರ ಕಾರೆಂದು ತಿಳಿದುಬಂದಿದೆ.

300x250 AD
Share This
300x250 AD
300x250 AD
300x250 AD
Back to top