Slide
Slide
Slide
previous arrow
next arrow

ಬಾರದ ಜನಪ್ರತಿನಿಧಿಗಳು; ಕಾಳಜಿ ಕೇಂದ್ರಕ್ಕೆ ಹೊರಟ ಸಂತ್ರಸ್ತರು

300x250 AD

ಹೊನ್ನಾವರ: ತಾಲೂಕಿನಲ್ಲೆಡೆ ವರುಣಾರ್ಭಟ ಮುಂದುವರೆದಿದ್ದು, 5 ಕಡೆ ಕಾಳಜಿ ಕೇಂದ್ರ ತೆರೆಯಲಾಗಿದೆ. ಎರಡು ಕ್ಷೇತ್ರ ವ್ಯಾಪ್ತಿಯಲ್ಲಿರುವ ತಾಲೂಕಿನತ್ತ ಯಾವುದೇ ಜನಪ್ರತಿನಿಧಿಗಳು ಆಗಮಿಸದೆ ಇರುವುದರಿಂದ ನಮ್ಮ ಸಂಕಷ್ಟಕ್ಕೆ ಯಾವೊಬ್ಬ ಜನಪ್ರತಿನಿಧಿಗಳು ಬರುವುದಿಲ್ಲ ಎಂದು ಗೊಣಗುತ್ತಾ ಕಾಳಜಿ ಕೇಂದ್ರದತ್ತ ಜನರು ಮುಖ ಮಾಡುತ್ತಿದ್ದಾರೆ.

ತಾಲೂಕಿನಲ್ಲಿ ಗುಂಡಿಬೈಲ್ ಎರಡು ಶಾಲೆ, ಸುರಕಟ್ಟೆ, ಕೂಡ್ಲ, ಹೆಬೈಲ್ ಅಂಗನವಾಡಿ ಕೇಂದ್ರದಲ್ಲಿ ಕಾಳಜಿ ಕೇಂದ್ರ ತೆರೆದಿದ್ದು, 135 ಜನರು ಆಶ್ರಯ ಪಡೆಯುತ್ತಿದ್ದಾರೆ. ಇನ್ನಷ್ಟು ಮಳೆ ತಿವ್ರವಾದರೆ ದೋಣಿಯ ಮೂಲಕ ಜನ,ಜಾನುವಾರು ಸಾಗಾಟಕ್ಕೆ ತಾಲ್ಲೂಕು ಆಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದೆ. ತಾಲೂಕಿನ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿ ಮೊಬೈಲ್ ನೆಟ್‌ವರ್ಕ್ ಸ್ಥಗಿತಗೊಂಡಿತ್ತು. ಇದರಿಂದ ಸಾರ್ವಜನಿಕರು ತಮ್ಮ ಸಂಭದಿಕರ ಯೋಗ ಕ್ಷೇಮ ವಿಚಾರಿಸಲು ಪರದಾಡುವಂತಾಯಿತು. ಗಾಳಿ ಮಳೆಗೆ ಹಲವು ಮರಗಳು ಬಿದ್ದ ಪರಿಣಾಮ ವಿದ್ಯುತ್ ಕಂಬ ತುಂಡಾಗಿದೆ. ಐವತ್ತಕ್ಕೂ ಅಧಿಕ ಕಂಬ ಮುರಿದಿದ್ದು, ಹಗಲು- ರಾತ್ರಿ ಎನ್ನದೆ ಹೆಸ್ಕಾಂ ಸಿಬ್ಬಂದಿಗಳು ಸಾರ್ವಜನಿಕರ ಸಹಕಾರದ ಮೇರೆಗೆ ವಿದ್ಯುತ್ ಸಂಪರ್ಕ ಸರಿಪಡಿಸಲು ಹರಸಾಹಸ ಪಡುತ್ತಿದ್ದಾರೆ.
ತಾಲೂಕಿನ ಕಾಸರಕೋಡ, ಹಳದೀಪುರ, ಸಾಲ್ಕೋಡ್, ಹಡಿನಬಾಳ ಚಿಕ್ಕನಕೋಡ ಭಾಗದಲ್ಲಿ ಮನೆಯ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ. ಮಾಗೋಡ, ಹಡಿನಬಾಳ ಸಮೀಪ ಗುಡ್ಡ ಕುಸಿತದ ಭೀತಿ ಇದ್ದು ಸಾರ್ವಜನಿಕರು ಭಯದಲ್ಲೆ ಜೀವನ ನಡೆಸುತ್ತಿದ್ದಾರೆ.

300x250 AD
Share This
300x250 AD
300x250 AD
300x250 AD
Back to top