• Slide
  Slide
  Slide
  previous arrow
  next arrow
 • ಅರಣ್ಯ ಹಕ್ಕು ಕಾಯಿದೆ ಅರಣ್ಯವಾಸಿಗಳ ಪರವಾಗಿದೆ: ತಿದ್ದುಪಡಿ ಅವಶ್ಯಕತೆ ಬದಲು ಇಚ್ಛಾಶಕ್ತಿ ಅವಶ್ಯ: ರವೀಂದ್ರ ನಾಯ್ಕ

  300x250 AD

  ಶಿರಸಿ: ಅರಣ್ಯವಾಸಿಗಳ ಭೂಮಿ ಹಕ್ಕಿಗೆ ಸಂಬಂಧಿಸಿ ಜಾರಿಗೆ ಬಂದಿರುವ ಅರಣ್ಯ ಹಕ್ಕು ಕಾಯಿದೆ ಅರಣ್ಯವಾಸಿಗಳ ಪರವಾಗಿದ್ದು, ಹಕ್ಕು ಮಂಜೂರಿಗೆ ಕಾನೂನು ತಿದ್ದುಪಡಿ ಅವಶ್ಯಕತೆಯಿಲ್ಲ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

  ಅವರು ಅರಣ್ಯ ಭೂಮಿ ಹಕ್ಕು ಕಾಯಿದೆ ಅಡಿಯಲ್ಲಿ ಉಪವಿಭಾಗ ಮಟ್ಟದ ಅರಣ್ಯ ಹಕ್ಕು ಸಮಿತಿಯಲ್ಲಿ ತಿರಸ್ಕಾರವಾಗಿರುವ ಅರ್ಜಿಗಳಿಗೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾಧ್ಯಕ್ಷರು, ಜಿಲ್ಲಾ ಅರಣ್ಯ ಹಕ್ಕು ಸಮಿತಿ ಡಾ. ಸೆಲ್ವಮನಿ ಆರ್ ಅವರಿಗೆ ಮೇಲ್ಮನವಿ ಸಲ್ಲಿಸಿದ ನಂತರ ಮೇಲಿನಂತೆ ಮಾತನಾಡಿದರು.

   ರಾಜ್ಯದಲ್ಲಿ ಅರಣ್ಯ ಭೂಮಿ ಹಕ್ಕಿಗೆ ಸಂಬoಧಿಸಿದ ಅರ್ಜಿಗಳನ್ನು ಕಾನೂನು ವ್ಯತಿರಿಕ್ತವಾಗಿ, ಕಾನೂನಿನ ವಿಧಿವಿಧಾನ ಅನುಸರಿಸದೇ ಅರ್ಜಿ ತಿರಸ್ಕಾರವಾಗಿರುವುದು ವಿಷಾದಕರ. ಈ ಹಿನ್ನೆಲೆಯಲ್ಲಿ ಸಿದ್ಧರಾಮಯ್ಯ ಸರಕಾರ ಅರಣ್ಯವಾಸಿಗಳಿಗೆ ಹಕ್ಕು ನೀಡುದ ದಿಶೆಯಲ್ಲಿ ಗಂಭೀರವಾಗಿ ಚಿಂತಿಸುತ್ತಿರುವುದು ಸಂತೋಷಕರ.  ಅರಣ್ಯ ಪ್ರದೇಶ ಮತ್ತು ಅರಣ್ಯ ಅವಲಂಭಿತವಾಗಿರುವ ಅರಣ್ಯವಾಸಿಗಳ ಸಂಖ್ಯೆಯಲ್ಲಿ ಕರ್ನಾಟಕ 15ನೇ ಸ್ಥಾನದಲ್ಲಿದ್ದರೇ, ಅರಣ್ಯ ಹಕ್ಕು ಕಾಯಿದೆ ಪ್ರಗತಿಯಲ್ಲಿ ದೇಶದಲ್ಲಿ 16ನೇ ಸ್ಥಾನದಲ್ಲಿರುವುದು ವಿಷಾದಕರ.

  300x250 AD

  ಸುಪ್ರೀಂ ಕೋರ್ಟಿನಲ್ಲಿ ತಿದ್ದುಪಡಿ ಪ್ರಮಾಣ ಪತ್ರ:
  ಸುಪ್ರೀಂ ಕೋರ್ಟಿನಲ್ಲಿ ಏಂಟು ಪರಿಸರವಾದಿ ಸಂಘಟನೆಗಳು ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ತೀರಸ್ಕಾರವಾದ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಬೇಕೆಂಬ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯಲ್ಲಿ ರಾಜ್ಯ ಸರಕಾರ ಈಗಾಗಲೇ, ತಿರಸ್ಕಾರವಾಗಿರುವ ಅರ್ಜಿದಾರರನ್ನ ಹಂತ ಹಂತವಾಗಿ ಒಕ್ಕಲೆಬ್ಬಿಸಲಾಗುವುದೆಂದು ಪ್ರಮಾಣ ಪತ್ರ ಸಲ್ಲಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರವೂ ಅರಣ್ಯವಾಸಿಗಳ ಪರವಾಗಿ ಸುಪ್ರೀಂ ಕೋರ್ಟಿನಲ್ಲಿ ತಿದ್ದುಪಡಿ ಪ್ರಮಾಣ ಪತ್ರ ಸಲ್ಲಿಸಬೇಕೆಂದು ರಾಜ್ಯಾಧ್ಯಕ್ಷ ರವೀಂದ್ರ ನಾಯ್ಕ ಅಗ್ರಹಿಸಿದ್ದಾರೆ.

   ಈ ಸಂದರ್ಭದಲ್ಲಿ ಮಾಭ್ಲೇಶ್ವರ ನಾಯ್ಕ ಬೇಡ್ಕಣಿ, ನಾಗರಾಜ ಮರಾಠಿ, ಜಗದೀಶ್ ಕುಮಾರ ಜೋನ್, ನಾಗರಾಜ ಮರಾಠಿ, ವಿನೋಧ ಕುಮಾರ ಜೋಗ, ಕೇಶವ ಮೂರ್ತಿ, ವೇಲು, ರಮೇಶ, ರಾಮು ಗೌಡ ಮುಂತಾದವರು ಉಪಸ್ಥಿತರಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top