Slide
Slide
Slide
previous arrow
next arrow

ಫಾರಂ ನಂ. 3 ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಶಾಸಕ ಭೀಮಣ್ಣ ನಾಯ್ಕ

300x250 AD

ಶಿರಸಿ: ನಮ್ಮ ಆಸ್ತಿಹಕ್ಕು ಪ್ರತಿಪಾದಿಸುವ ಫಾರಂ – 3 ನಮಗೆ ಸಿಗುತ್ತಿಲ್ಲ ನೆಮ್ಮದಿಯಾಗಿ ಬದುಕಲು ಆಗುತ್ತಿಲ್ಲ ಎಂಬುದು ಬಹು ಗಂಭೀರ ಸಮಸ್ಯೆಯಾಗಿದೆ. ನಗರ ಯೋಜನಾ ಕಾಯ್ದೆ ನೀತಿಗಳು ಹೊಸದಾಗಿ ರಚಿತವಾಗುತ್ತಿರುವ ಬಡಾವಣೆಗಳಿಗೆ ಅನ್ವಯವಾಗಲಿ ಆದರೆ ಈಗಾಗಲೇ ದಶಕಗಳ ಹಿಂದೆ ನಿರ್ಮಿತ ವಾಗಿರುವ ಕಟ್ಟಡ ಮನೆಗಳಿಗೆ ನಗರ ಯೋಜನಾ ನಿಯಮ ಅನ್ವಯ ಮಾಡಿ ಮಾಲೀಕರ ಆಸ್ತಿ ಹಕ್ಕು ಮೊಟಕು ಗೊಳಿಸಿರುವುದನ್ನು ನಾನೂ ಒಪ್ಪುವುದಿಲ್ಲ. ಈ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಲು ಪ್ರಯತ್ನಿಸುತ್ತೇನೆ. ಸಮಸ್ಯೆ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆದು ಪರಿಹಾರದ ಕ್ರಮ ಕೈಗೊಳ್ಳುತ್ತೇನೆ ಎಂದು ಶಾಸಕರಾದ ಭೀಮಣ್ಣ ನಾಯ್ಕ ಭರವಸೆ ನೀಡಿದ್ದಾರೆ.

ಜುಲೈ 23ರಂದು ಇ – ಖಾತಾ ಹೋರಾಟ ಸಮಿತಿ ಅಧ್ಯಕ್ಷರನ್ನು ಆಹ್ವಾನಿಸಿ ಅರ್ಧ ಗಂಟೆಗಳ ಕಾಲ ಚರ್ಚಿಸಿ ವಿಷಯವನ್ನು ವಿವರವಾಗಿ ಆಲಿಸಿದ ನಂತರ ಶಾಸಕ ಭೀಮಣ್ಣ ನಾಯ್ಕ್ ಮೇಲಿನಂತೆ ಹೇಳಿದರು. Form No. 3 ಸಿಗದೇ ಇರುವುದರಿಂದ ಈಗಿರುವ ಮನೆಯನ್ನು ಅಭಿವೃದ್ಧಿ ಪಡಿಸಲು, ಬ್ಯಾಂಕ್ ಸಾಲಪಡೆದುಕೊಳ್ಳಲು ಆಗುತ್ತಿಲ್ಲ, ಮನೆಮಾರಬೇಕೆಂದು ಬಯಸುವವರಿಗೆ ಮಾರಲು ಸಾಧ್ಯವಾಗುತ್ತಿಲ್ಲ. ವರ್ಗಾವಣೆ ಸಾಧ್ಯವಾಗುತ್ತಿಲ್ಲ ಆಸ್ತಿ ಇದ್ದರೂ ನೆಮ್ಮದಿಯಿಲ್ಲ ಎಂದಾಗಿರುವುದು ಬೇಸರದ ಸಂಗತಿಯಾಗಿದೆ. ಮನೆ ನಿರ್ಮಾಣಕ್ಕೆ ಇರುವ ಅಡೆತಡೆಯಿಂದಾಗಿ ಕಟ್ಟಡಕಾರ್ಮಿಕರಿಗೆ, ಕಟ್ಟಡ ನಿರ್ಮಾಣದ ಸರಕು ಮಾರುವ ವ್ಯಾಪಾರಸ್ಥರಿಗೆ ತೊಂದರೆಯಾಗಿದೆ. ಆದ್ದರಿಂದ ಆದಷ್ಟೂ ಬೇಗ ಇ ಸಮಸ್ಯೆ ಬಗೆ ಹರಿಸಬೇಕಾಗಿದೆ ಎಂದು ಇ – ಖಾತಾ ಹೋರಾಟ ಸಮಿತಿ ಪರವಾಗಿ ನಿಂತು ಮಾತನಾಡಿದರು. ಕೊಳಚೆ ಮಂಡಳಿಯಿಂದ ಬರುವ ಮನೆ ನಿರ್ಮಾಣದ ಯೋಜನೆ ಚಾಲನೆಗೂ ಇದು ತೊಡಕಾಗಿ ಕಾಡುತ್ತಿದೆ ಎಂದು ಶಾಸಕ ಭೀಮಣ್ಣ ಹೇಳಿದರು.

300x250 AD

ಭೇಟಿಯ ಪ್ರಾರಂಭದಲ್ಲಿ ಮಾತನಾಡಿದ ಇ – ಖಾತಾ ಹೋರಾಟ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಆನವಟ್ಟಿ ಪೌರಾಡಳಿತ ಇಲಾಖೆ ನಿರ್ದೇಶಕರ ಕಚೇರಿಯ ಆದೇಶ ಪತ್ರ ಸಂಖ್ಯೆ DMA29PTIS/2015-16 dated 20-04-2016 ದ ಮಾರ್ಗದರ್ಶಿ ಸೂತ್ರ ಈಗಲೂ ಜಾರಿಯಲ್ಲಿದೆ. ಕರ್ಣಾಟಕ ರಾಜ್ಯ ಪತ್ರ ವಿಶೇಷ ಸಂಚಿಕೆ ದಿ.02-01-2023 ಇದನ್ನು ಸಾದರಪಡಿಸುತ್ತದೆ. ಈ ರಾಜ್ಯ ಪತ್ರದ ಆದೇಶದಂತೆ 2016ರ ಪೂರ್ವ ಆಸ್ತಿ ಸರ್ವೇ ಸಮಯದಲ್ಲಿ ಪೌರಾಡಳಿತ ಸಂಸ್ಥೆಗಳ M AR- ರ ದಾಖಲೆಯಲ್ಲಿ ಲಭ್ಯವಿರುವ ಎಲ್ಲಾ ಆಸ್ತಿಗಳನ್ನು ಯಾವುದೇ ದಾಖಲಾತಿ ಪಡೆಯದೆ ಅಧಿಕೃತ ಆಸ್ತಿ ಎಂದುಪರಿಗಣಿಸಿ ಈ ಆಸ್ತಿ ತಂತ್ರಾoಶದಲ್ಲಿ ಸೇರಿಸಲು ತಿಳಿಸಲಾಗಿದೆ ಎಂಬುದು ಗಮನಿಸಬೇಕಾದ ವಿಚಾರ ಎಂದು ಆನವಟ್ಟಿ ಹೇಳಿದರು. ದಿನಾಂಕ 02-01-2023ರ ರಾಜ್ಯ ಪತ್ರದ ಆದೇಶ ಅನ್ವಯ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಐವರು ಸದಸ್ಯರನ್ನು ಹೊಂದಿರುವ ಸಮಿತಿ ರಚಿಸಲಾಗಿದೆ. ಇವರಿಗೆ ಜಿಲ್ಲೆಯ ಪೌರಾಡಳಿತ ಸಂಸ್ಥೆಗಳಿಗೆ ನಿರ್ದೇಶನ ನೀಡುವ ಅಧಿಕಾರ ನೀಡಲಾಗಿದೆ.
ಈ ಸಮಿತಿ ಶೀಘ್ರ ಸಭೆ ಸೇರಿ ಸರ್ಕಾರದ ಆದೇಶ ಜ್ಯಾರಿಯಾಗುವಂತೆ ಮಾಡಿದರೆ ಶೇಕಡಾ 60 ರಷ್ಟು ಫಾರಂ -3 ಸಮಸ್ಯೆ ಬಗೆ ಹರಿಯುತ್ತದೆ. ಶಾಸಕರಾದ ತಾವು ಪ್ರಯತ್ನಿಸಿ ಜಿಲ್ಲಾ ಉಸ್ತುವಾರಿ ಸಚಿವ ಅಧ್ಯಕ್ಷತೆಯಲ್ಲಿ ಈ ಸಮಿತಿ ಸಭೆ ನಡೆಯುವಂತೆ ಮಾಡಬೇಕು ಎಂದು ಆಗ್ರಹಿಸಲಾಯಿತು. ಈ – ಖಾತಾ ಸಂಬಂಧ ಸರ್ಕಾರ ಹೊರಡಿಸಿದ ಗೆಜೆಟ್ ಪ್ರಕಟಣೆಯ ಪ್ರತಿ, ತತ್ಸಂಬಂದದ ಆದೇಶಗಳ ಪ್ರತಿ, ಹಾಗೂ ಈ – ಖಾತಾ ಯೋಜನೆ ಜ್ಯಾರಿಯಾದ ವಿಧಾನ ಅದರಲ್ಲಿ ಇರುವ ಲೋಪದೋಷಗಳ ವಿವರ ನೀಡುವ ಮಾಹಿತಿಗಳನ್ನು ಗೋಪಾಲಕೃಷ್ಣ ಆನವಟ್ಟಿ ಶಾಸಕರಿಗೆ ನೀಡಿದರು.
ಈ – ಖಾತಾ ಸಮಸ್ಯೆ ಸಂಪೂರ್ಣವಾಗಿ ಪರಿಹಾರವಾಗಬೇಕೆಂದರೆ ನಗರ ಯೋಜನಾ ಪ್ರಾಧಿಕಾರದ ನಿಯಮಗಳನ್ನು ಸರಳೀಕರಣ ಗೊಳಿಸಬೇಕು, ಸಣ್ಣ ಪುಟ್ಟ ಮನೆ ಕಟ್ಟಿಕೊಳ್ಳುವ 3 ಗುಂಟೆ ಒಳಗಿನ ಮಧ್ಯಮವರ್ಗದ ವಾಸದ ಮನೆಗಳಿಗೆ ಸೆಟ್ ಬ್ಯಾಕ್ ನಿಯಮದ ಹೊರತು ಬೇರಾವ ನಿರ್ಬಂಧ ಇರಬಾರದು. ಲೈಸೆನ್ಸ್ ರಾಜ್ಯ ಕೊನೆಯಾಗಬೇಕು. ಸರಕಾರದ ಅಂಗವೇ ಆದ ಗೃಹ ಮಂಡಳಿ ಬಡವರಿಗೆ ನಿರ್ಮಿಸುವ EWS, LIG, ಆಶ್ರಯ, ಯೋಜನೆ ಮನೆ ನಿರ್ಮಾಣದಲ್ಲಿ ಪಾಲನೆಯಾಗದ ನಿಯಮ ಮಧ್ಯಮವರ್ಗದ ಜನತೆ ತಮ್ಮ ಸ್ವಂತ ದುಡ್ಡಿನಲ್ಲಿ ಕಟ್ಟಿ ಕೊಳ್ಳುವ ಮನೆಗೆ ಏಕೆ ಅನ್ವಯ ಮಾಡಬೇಕು ಎಂದು ಆನವಟ್ಟಿ ಪ್ರಶ್ನಿಸಿದರು. ನಮ್ಮದು ಗುಡ್ಡ ಗಾಡು, ಮಲೆನಾಡು ಜಿಲ್ಲೆ ಇಲ್ಲಿ ಸಮತಟ್ಟು ಬಯಲು ಜಾಗ ಸಿಗುವುದಿಲ್ಲ ಹಾಗಾಗಿ ಕಠಿಣ ನಿಯಮ ಸರಿಯಲ್ಲ ಎಂದರು.
ಈ ಸಂದರ್ಭದಲ್ಲಿ ಆನವಟ್ಟಿ ಅವರೊಂದಿಗೆ ಈ – ಖಾತಾ ಸಮಿತಿಯ ಅಶೋಕ ದೇಸಾಯಿ, ಹಾಗು ರಾಜು ಪೈ ಅವರುಗಳು ಇದ್ದು ಸಮಸ್ಯೆಯ ಗಹನತೆಯನ್ನು ಶಾಸಕರಿಗೆ ವಿವರಿಸಿದರು. ಕಾಂಗ್ರೆಸ್ ಧುರೀಣ ಜಗದೀಶ್ ಗೌಡರ ಈ ವೇಳೆ ಹಾಜರಿದ್ದರು.
ಶಾಸಕರು ಇ – ಖಾತಾ ಸಮಿತಿ ಪದಾಧಿಕಾರಿಗಳೊಂದಿಗೆ ಸ್ಪಂದಿಸಿದ ರೀತಿ ಹಾಗೂ ಇದು ತಮ್ಮದೇ ಸಮಸ್ಯೆ ಎನ್ನುವ ಭಾವನೆ ಯೊಂದಿಗೆ ನೀಡಿದ ಭರವಸೆ ಸಮಸ್ಯೆ ಪರಿಹಾರ ಕಾಣಬಹುದು ಎಂಬ ಭರವಸೆಯ ಆಶಾಕಿರಣ ಮೂಡಿಸಿದೆ.

Share This
300x250 AD
300x250 AD
300x250 AD
Back to top