• Slide
    Slide
    Slide
    previous arrow
    next arrow
  • ದಿ.ಶ್ರೀಪಾದ ಹೆಗಡೆ ಕಡವೆ ಸಂಸ್ಮರಣೆ: ‘ಸಹಕಾರಿ ಕಿರಣ’ ಯೂಟ್ಯೂಬ್ ಚಾನೆಲ್ ಲೋಕಾರ್ಪಣೆ

    300x250 AD

    ಶಿರಸಿ: ಜಿಲ್ಲೆಯ ಹಿರಿಯ ಸಹಕಾರಿ ಹಾಗು ಧೀಮಂತ ನಾಯಕರಾಗಿದ್ದ ದಿ.ಶ್ರೀಪಾದ ಹೆಗಡೆ ಕಡವೆಯವರ ಪುಣ್ಯ ಸ್ಮರಣೆಯ ನಿಮಿತ್ತ ಇಂದು ಶಿರಸಿಯ ಸಾಮ್ರಾಟ್ ವಿನಾಯಕ ಹಾಲ್ ನಲ್ಲಿ ಪುಣ್ಯಸ್ಮರಣಾ ಕಾರ್ಯಕ್ರಮ ನಡೆಯಿತು.

    ಈ ವೇಳೆ ಟಿ. ಎಸ್.ಎಸ್ ಅಧ್ಯಕ್ಷರಾದ ಶಾಂತಾರಾಮ ಹೆಗಡೆ ಶೀಗೇಹಳ್ಳಿ, ಶಾಸಕ ಭೀಮಣ್ಣ.ಟಿ.ನಾಯ್ಕ್ ಟಿ.ಎಸ್.ಎಸ್ ಕಾರ್ಯಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ, ಟಿ.ಎಸ್.ಎಸ್ ಪ್ರಧಾನ ವ್ಯವಸ್ಥಾಪಕ ರವೀಶ್ ಹೆಗಡೆ ಹಾಗೂ ಅನೇಕ ಹಿರಿಯ ಸಹಕಾರಿಗಳು, ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಗೌರವನಮನ ಸಲ್ಲಿಸಿದರು.

    ಈ ವೇಳೆ ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ಸಹಕಾರಿ ಎಸ್. ಕೆ. ಭಾಗವತ್, ಶ್ರೀಪಾದ್ ಹೆಗಡೆ ಕಡವೆಯವರ ಸಹಕಾರಿ ತತ್ವ ರೈತರಿಗೆ ಹಾಗೂ ತೋಟಗಾರರಿಗೆ ಸದಾ ಸ್ಮರಣೀಯವಾದದ್ದು. ರಾಜ್ಯದಲ್ಲಿಯೇ ಉತ್ತರಕನ್ನಡ ಜಿಲ್ಲೆ ಸಹಕಾರಿ ತತ್ವ ಅನುಷ್ಠಾನಗೊಳಿಸುವಲ್ಲಿ ಮಾದರಿಯಾಗಿದೆ. 2024ರಲ್ಲಿ ಶ್ರೀಪಾದ್ ಹೆಗಡೆ ಕಡವೆಯವರ ಜನ್ಮಶತಾಬ್ದಿ ವರ್ಷವಾಗಿದ್ದು ಇದರ ಅಂಗವಾಗಿ ತೋಟಗಾರರ ಸ್ವಯಂ ಸಹಕಾರಿ ಅಭಿಯಾನವನ್ನು ಕೈಗೊಂಡಿದ್ದೇವೆ. ಎಲ್ಲಾ ಗಣ್ಯರು ಇದರಲ್ಲಿ ಭಾಗವಹಿಸಿ ಎಂದು ವಿನಂತಿಸಿದರು.

    ಇದೆ ವೇಳೆ ಟಿ.ಎಸ್.ಎಸ್. ಆಂಡ್ರಾಯ್ಡ್ ಅಪ್ಲಿಕೇಷನ್ ಅನ್ನು ಟಿ.ಎಸ್.ಎಸ್. ಅಧ್ಯಕ್ಷ ಶಾಂತರಾಮ ಹೆಗಡೆ ಶೀಗೇಹಳ್ಳಿ ಬಿಡುಗಡೆಗೊಳಿಸಿದರು. ಶಿರಸಿ ಸಿದ್ದಾಪುರ ಕ್ಷೇತ್ರದ ಶಾಸಕ ಶಾಸಕ ಭೀಮಣ್ಣ ನಾಯ್ಕ್ ‘ಸಹಕಾರಿ ಕಿರಣ’ ಯೂಟ್ಯೂಬ್ ಚಾನೆಲ್ ಲೋಕಾರ್ಪಣೆ ಮಾಡಿದರು.

    300x250 AD

    ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಭೀಮಣ್ಣ ನಾಯ್ಕ, ಸಹಕಾರಿ ರಂಗದಲ್ಲಿ ಅಪರಿಮಿತ ಸೇವೆ ಸಲ್ಲಿಸಿದ ಕಡವೆ ಹೆಗಡೆಯವರು ಸದಾ ಸ್ಮರಣೀಯರು. ಸಮಾಜಕ್ಕಾಗಿ, ಸಮಾಜದ ಏಳಿಗೆಗೆ ಸಹಕಾರವನ್ನು ನೀಡಿದ ಶ್ರೇಯಸ್ಸು ಕಡವೆಯವರಿಗೆ ಸಲ್ಲುತ್ತದೆ. ಸಣ್ಣ ಪ್ರಮಾಣದಲ್ಲಿ ಹುಟ್ಟಿದ ಟಿ.ಎಸ್.ಎಸ್ ಇಂದು ಬೃಹತ್ ಮರವಾಗಿ ಬೆಳೆದಿದೆ. ಸಹಕಾರಿ ಧುರೀಣರ ಶ್ರಮ ಮತ್ತು ತ್ಯಾಗ ಶ್ರೇಷ್ಠವಾದದ್ದು. ಸಹಕಾರಿ ರಂಗವನ್ನು ಎಲ್ಲರೂ ಕೂಡಿ ಶ್ರಮಿಸಿ ಇನ್ನೂ ಎತ್ತರಕ್ಕೆ ಕೊಂಡೊಯ್ಯುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ಸಹಕಾರಿ ರಂಗದ ಬೆಂಬಲಕ್ಕೆ ಸದಾ ನಾನು ಕಠಿಬದ್ಧನಾಗಿರುತ್ತೇನೆ ಎಂದರು.

    ಈ ವೇಳೆ ಅಗ್ರಿಕಲ್ಚರಲ್ ಡೆವಲಪ್ಮೆಂಟ್ ಸೊಸೈಟಿ ಅಧ್ಯಕ್ಷ ಭಾಸ್ಕರ ಹೆಗಡೆ ಕಾಗೇರಿ, ಡೆವಲಪ್ಮೆಂಟ್ ಸೊಸೈಟಿ ನಿರ್ದೇಶಕ ಶ್ರೀಪಾದ ಹೆಗಡೆ ಕಡವೆ, ಟಿಎಸ್ಎಸ್ ನಿರ್ದೇಶಕ ಬಾಲಚಂದ್ರ ಹೆಗಡೆ ಕೊಡಮೂಡು, ಶಶಾಂಕ ಹೆಗಡೆ ಶೀಗೇಹಳ್ಳಿ, ಟಿಆರ್ಸಿ ಉಪಾಧ್ಯಕ್ಷ ವಿಶ್ವಾಸ ಬಲ್ಸೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top