• Slide
  Slide
  Slide
  previous arrow
  next arrow
 • ದಿ.ಶ್ರೀಪಾದ ಹೆಗಡೆ ಕಡವೆ ಪುಣ್ಯತಿಥಿ: ಮುಂಡಗನಮನೆ ಸಹಕಾರಿ ಸಂಘದಲ್ಲಿ ಪುಷ್ಪನಮನ

  300x250 AD

  ಶಿರಸಿ: ತಾಲೂಕಿನ ಮುಂಡಗನಮನೆ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ದಿ.ಶ್ರೀಪಾದ ಹೆಗಡೆ ಕಡವೆಯವರ ಪುಣ್ಯತಿಥಿಯ ನಿಮಿತ್ತ ಜು.24 ರಂದು ಪುಷ್ಪಾಂಜಲಿ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

  ಸೊಸೈಟಿ ಅಧ್ಯಕ್ಷ ಗೋಪಾಲಕೃಷ್ಣ ವೆಂ. ವೈದ್ಯ ಮಾತನಾಡಿ, ದಿ. ಕಡವೆಯವರು 1925 ರಲ್ಲಿ ಹುಟ್ಟಿ ಇಂದಿಗೆ 98 ವರ್ಷಗಳಾಯಿತು. ಅವರು ತಮ್ಮ 70 ನೇ ವಯಸ್ಸಿನಲ್ಲಿ ದೈವಾಧೀನರಾಗಿದ್ದಾರೆ. ಅವರ ಆಯುಷ್ಯ ಪೂರ್ತಿ ತನಗಾಗಿ ಏನನ್ನೂ ಮಾಡದೇ ಸಹಕಾರಿ ಸೇವೆ ಸಲ್ಲಿಸಿದರು. ಅವರ ಸೇವೆಯ ಫಲವನ್ನು ನಮ್ಮ ಜಿಲ್ಲೆಯವರು ಈಗ ಉಣ್ಣುತ್ತಿದ್ದೇವೆ. ಇವರ ಕಾಯಕ ಆದರ್ಶವಾದದ್ದು. ಈ ಆದರ್ಶವನ್ನು ನಾವೆಲ್ಲ ಅರಿತು ಮುಂದಿನ ಪೀಳಿಗೆಗೆ ಮಾರ್ಗದರ್ಶನ ಮಾಡಬೇಕು. ಇವರ ಘನ ಕಾರ್ಯ ಸದಾ ನೆನಪಿನಲ್ಲಿ ಉಳಿಯಲು ಇಂದಿನ ವಿದ್ಯಾರ್ಥಿಗಳಿಗೆ ಅವರ ಕಥೆ ಪಠ್ಯದಲ್ಲಿ ಸೇರಬೇಕು ಎಂದರು.

  300x250 AD

  ಸಂಘದ ಮುಖ್ಯಕಾರ್ಯನಿರ್ವಾಹಕ ಎನ್.ವಿ.ಭಟ್ಟ ಬೆಳೆಸಿರಿ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಶ್ರೀಪಾದ ಪಾಟೀಲ್ ಅಲ್ಲದೇ ವಿ.ಆರ್. ಹೆಗಡೆ ಮತ್ತಿಘಟ್ಟ ಸಾಂದರ್ಭಿಕವಾಗಿ ಮಾತನಾಡಿದರು. ಸಭೆಯಲ್ಲಿ ಎ.ಪಿ.ಎಂ.ಸಿ.ಯ ಸ್ಥಳೀಯ ನಿರ್ದೇಶಕ ಮಾರುತಿ ನಾಯ್ಕ, ಸೇವಾ ಸಹಕಾರಿ ಸಂಘದ ಸಹಕಾರ್ಯನಿರ್ವಾಹಕ ದತ್ತಾತ್ರೇಯ ಭಟ್ಟ ಹಾಗೂ ಸಿಬ್ಬಂದಿಗಳು, ನಾಗರಿಕರೂ ಹಾಜರಿದ್ದರು. ಅಲ್ಲದೇ ಸಂಘದ ಶಾಖೆಗಳಾದ ದೇವನಳ್ಳಿ ಮತ್ತು ಬೆಣಗಾಂವಗಳಲ್ಲೂ ಪುಷ್ಪನಮನ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

  Share This
  300x250 AD
  300x250 AD
  300x250 AD
  Leaderboard Ad
  Back to top