• Slide
    Slide
    Slide
    previous arrow
    next arrow
  • ಹೊನ್ನಾವರದಲ್ಲಿ ಆಟೋ ಚಾಲಕರಿಗೆ ಅನಂತಮೂರ್ತಿ ಟ್ರಸ್ಟ್ ವತಿಯಿಂದ ಸಮವಸ್ತ್ರ ವಿತರಣೆ

    300x250 AD

    ಹೊನ್ನಾವರ: ರಾಜ್ಯದ ಕಾಂಗ್ರೇಸ್ ಸರ್ಕಾರದ ಗ್ಯಾರಂಟಿ ಯೋಜನೆಯಿಂದ ರಿಕ್ಷಾ ಚಾಲಕರು ತೀರಾ ಸಂಕಷ್ಟದಲ್ಲಿದ್ದಾರೆ ಎಂದು ಶಾಸಕ ದಿನಕರ ಶೆಟ್ಟಿ ಆತಂಕ ವ್ಯಕ್ತಪಡಿಸಿದರು.

    ಪಟ್ಟಣದ ಲಯನ್ಸ ಕ್ಲಬ್ ಆವರಣದಲ್ಲಿ ಶಿರಸಿ ಬ್ಯಾಗದ್ದೆಯ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ ಇವರಿಂದ ತಾಲೂಕಿನ ಆಟೋ ರಿಕ್ಷಾ ಚಾಲಕ ಮಾಲಕರಿಗೆ ಉಚಿತ ಸಮವಸ್ತ್ರ ವಿತರಣೆ, ರಿಕ್ಷಾ ಪಾಸಿಂಗ್ ಯೋಜನೆ, ಔತಣಕೂಟ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

    ನಮ್ಮ ಜಿಲ್ಲೆಯಲ್ಲಿ ರಿಕ್ಷಾ ಚಾಲಕರ ಮೇಲೆ ಯಾವುದೇ ಆರೋಪವಿರದ ರೀತಿಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ. ಸರ್ಕಾರ ಗ್ಯಾರಂಟಿ ಯೋಜನಯಿಂದ ರಿಕ್ಷಾ ಚಾಲಕರು ಸಂಕಷ್ಟದಲ್ಲಿದ್ದು, ಇವರಿಗೆ ನೆರವಾಗಬೇಕು ಎಂದು ಮುಂದಿನ ದಿನದಲ್ಲಿ ವಿಧಾನಸೌಧದಲ್ಲಿ ಧ್ವನಿ ಎತ್ತುವೆ. ರಿಕ್ಷಾ ಮಾಲಕ ಚಾಲಕ ಸಂಘದ ಅಧ್ಯಕ್ಷನಾಗಿ ಈ ಹಿಂದೆ ಕಾರ್ಯನಿರ್ವಹಿಸಿರುವುದರಿಂದ ಮೂರು ಬಾರಿ ಶಾಸಕನಾಗಲು ಸಹಾಯವಾಯಿತು. ರಿಕ್ಷಾ ಚಾಲಕರಿಗೆ ಪಾಸಿಂಗ್ ಮಾಡಲು ಯಾವುದೇ ಏಜೆಂಟ್ ಇಲ್ಲದೇ ಕಾರ್ಯನಿರ್ವಹಿಸಬೇಕು ಎಂದು ಆರ್.ಟಿ.ಓ ಆದೇಶ ನೀಡಿದ್ದೇನೆ. ರಿಕ್ಷಾದವರಿಗೆ ಇನ್ಸುರೆನ್ಸ ಸಹಾಯಧನ ಸರ್ಕಾರ ಮಾಡಲು ಮುಂದಾಗಬೇಕು ಎಂದು ಆಗ್ರಹಿಸುವುದಾಗಿ ಭರವಸೆ ನೀಡಿದರು.

    ಮಾಜಿ.ಜಿ.ಪಂ.ಸದಸ್ಯರಾದ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ ಟ್ರಸ್ಟ ಮೂಲಕ ಅನೇಕ ಸಮಾಜಮುಖಿ ಕಾರ್ಯದಲ್ಲಿ ಅನಂತಮೂರ್ತಿ ಹೆಗಡೆಯವರ ಕಾರ್ಯ ಹೆಮ್ಮೆ ಎನಿಸುತ್ತಿದೆ. ದಾನ ಮಾಡುವವರು ಜೊತೆ ದಾನ ತೆಗೆದುಕೊಳ್ಳುವವರು ಅರ್ಹರಾಗಿಬೇಕಾಗಿದ್ದು, ಅಂತಹ ಕಾರ್ಯಕ್ರಮ ಇಂದು ನಡೆಯುತ್ತಿದೆ. ಸರ್ಕಾರ ಸಮಾನ ತಕ್ಕಡಿಯಂತೆ ಕಾರ್ಯ ನಿರ್ವಹಿಸಬೇಕು. ಗ್ಯಾರಂಟಿ ಯೋಜನೆಯಿಂದ ರಿಕ್ಷಾ ಚಾಲಕರ ಕುಟುಂಬ ನಿರ್ವಹಣೆ ಸಂಕಷ್ಟ ತಂದಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಗಮನಹರಿಸುವ ಮೂಲಕ ಇವರಿಗೆ ಅನೂಕೂಲ ಮಾಡುವ ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿದರು.

    ಶ್ರೀಕುಮಾರ ಸಮೂಹ ಸಂಸ್ಥೆಯ ಮಾಲಕರಾದ ವೆಂಕ್ರಟಮಣ ಹೆಗಡೆ ಕವಲಕ್ಕಿ ಮಾತನಾಡಿ ಬಡತನದಿಂದ ಬಂದ ಕುಟುಂಬದಿಂದ ಬಂದು ಜಿಲ್ಲೆಯೆಲ್ಲೆಡೆ ಹಲವು ಕಾರ್ಯಕ್ರಮದ ಮೂಲಕ ಜನಾನುರಾಗಿಯಾಗಿದ್ದಾರೆ. ಹೊನ್ನಾವರ ಆರ್.ಟಿ.ಓ ಕಛೇರಿಯಲ್ಲಿ ಮೂಲಭೂತ ಸೌಕರ್ಯದ ಕೊರತೆ ಇದ್ದು, ಅದನ್ನು ಸರ್ಕಾರ ನಿವಾರಿಸುವ ಮೂಲಕ ಅಲ್ಲಿ ಬರುವ ವಾಹನ ಚಾಲಕರಿಗೆ ನೆರವಾಗುವಂತೆ ಆಗ್ರಹಿಸಿದರು. ಜಿಲ್ಲಾ ಆಟೋ ಯೂನಿಯನ್ ಅಧ್ಯಕ್ಷ ಶಿವರಾಜ ಮೇಸ್ತ ಮಾತನಾಡಿ ಇಂದು ಸರ್ಕಾರದಿಂದ ಆಟೋ ಚಾಲಕರಿಗೆ ಉಪಕಾರಕ್ಕಿಂತ ಅಪಕಾರವೇ ಆಗುತ್ತಿದೆ. ಈ ಹಿಂದಿನಿಂದಲೂ ಆಟೋದವರ ಮೇಲೆ ಒಂದೊಂದೆ ಚಪ್ಪಡಿ ಕಲ್ಲು ಇಡುತ್ತಾ ಬಂದು ಸಂಕಷ್ಟ ನೀಡುತ್ತಿದೆ. ಸರ್ಕಾರ ಮುಂದಿನ ದಿನದಲ್ಲಾದರೂ ಈ ಬಗ್ಗೆ ಗಮನಹರಿಸಬೇಕಿದೆ ಎಂದರು.

    300x250 AD

    ಆರ್ಥಿಕವಾಗಿ ಸಂಕಷ್ಟದಲ್ಲಿರುವ ರಿಕ್ಷಾ ಚಾಲಕ ರಾಮ ಗೌಡ , ಗೌರಿ ಶ್ರೀಧರ ಹೆಗಡೆ ಇರ್ವರಿಗೆ ಆರ್ಥಿಕವಾಗಿ ಧನಸಹಾಯ ಇದೆ ವೇಳೆ ಹಸ್ತಾಂತರಿಸಲಾಯಿತು. ಕಾರ್ಯಕ್ರಮದ ಆಯೋಜಕರಾದ ಅನಂತಮೂರ್ತಿ ಹೆಗಡೆ ಮಾತನಾಡಿ ಖಾಕಿ ಎನ್ನುವುದು ಸೇವೆಯ ಸಂಕೇತ. ಚಾಲಕರು ತಮ್ಮ ಹೊಟ್ಟೆ ಬಟ್ಟೆ ಕಟ್ಟಿಕೊಂಡು ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಕುಟುಂಬದ ಜೀವನ ನಿರ್ವಹಣೆ ಬಗ್ಗೆ ಸದಾ ಕಾಲ ಯೋಚಿಸುತ್ತಾರೆ. ಇಂದು ಪಾಸಿಂಗ್ ಯೋಜನೆ ತಂದಿದ್ದು, ಮುಂದಿನ ದಿನದಲ್ಲಿ ಇನ್ಸುರೆನ್ಸ್,ಮಕ್ಕಳ ಶೈಕ್ಷಣಿಕ ಸಹಾಯ, ಉನ್ನತ ವ್ಯಾಸಂಗಕ್ಕೆ ಸೂಕ್ತ ತರಬೇತಿ ಕಾರ್ಯಕ್ರಮದ ಮೂಲಕ ನೆರವಾಗಲು ತಿರ್ಮಾನಿಸಿದ್ದೇನೆ.

    ವೇದಿಕೆಯಲ್ಲಿ ಲಯನ್ಸ ಅಧ್ಯಕ್ಷ ಎಂ.ಜಿ.ನಾಯ್ಕ ತಾಲೂಕಿನ ಆಟೋ ರಿಕ್ಷಾ ಯೂನಿಯನ್ ಅಧ್ಯಕ್ಷ ಶಿವರಾಜ ಮೇಸ್ತ,ಅನಂತಮೂರ್ತಿ ಹೆಗಡೆ ಕುಟುಂಬದವರಾದ ಮಹಬೇಶ್ವರ ಹೆಗಡೆ, ಶಾರದಾ ಹೆಗಡೆ, ಜಗದೀಶ ಹೆಗಡೆ ರಿಕ್ಷಾ ಯೂನಿಯನ್ ಅಧ್ಯಕ್ಷರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top