Slide
Slide
Slide
previous arrow
next arrow

ಸೋಮಸಾಗರದಲ್ಲಿ ಶ್ರದ್ಧಾ ಭಕ್ತಿಯಿಂದ ನೆರವೇರಿದ ಮಹಾರುದ್ರಯಾಗ

300x250 AD

ಶಿರಸಿ: ತಾಲೂಕಿನ ಐತಿಹಾಸಿಕ ಹಿನ್ನೆಲೆ ಹೊಂದಿದ ಶ್ರೀ ಕ್ಷೇತ್ರ ಸೋಮಸಾಗರದಲ್ಲಿ ಕಳೆದ ನಾಲ್ಕು ದಿನದಿಂದ ನಡೆಯುತ್ತಿದ್ದ ಅಧಿಕ ಮಾಸದ ಪ್ರಯುಕ್ತ ಸಂಘಟಿಸಲಾಗಿದ್ದ ಮಹಾರುದ್ರಯಾಗ ಅತ್ಯಂತ ಶ್ರದ್ಧಾಭಕ್ತಿಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ಸಂಪನ್ನಗೊಂಡಿತು.

50 ವೈದಿಕರಿಂದ ರುದ್ರ ಪಠಣ ನಿರಂತರವಾಗಿ ನಡೆದು ಮಹಾರುದ್ರಯಾಗದ ಪೂರ್ಣಾಹುತಿಯೊಂದಿಗೆ ನೆರವೇರಿತು. ಪ್ರತಿದಿನವೂ ಗಣಹವನ, ಮಾತೆಯರಿಂದ ಕುಂಕುಮಾರ್ಚನೆಯಂತಹ ವಿವಿಧ ಧಾರ್ಮಿಕ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಪೂರ್ಣಾಹುತಿ ನಂತರ ನಡೆದ ಆಶೀರ್ವಚನದಲ್ಲಿ ವಿ. ಗಣಪತಿ ಭಟ್ಟ ಕಿಬ್ಬಳ್ಳಿ ಮಾತನಾಡಿ, ರುದ್ರಯಾಗ ಮಾಡುವ ಉದ್ದೇಶ ಅದರಿಂದಾಗುವ ಪ್ರಯೋಜನ ಮತ್ತು ಮಹತ್ವವನ್ನು ವಿವರಿಸಿದರು.
ವಿ. ಕುಮಾರ ಭಟ್ಟ ಕೊಳಗಿಬೀಸ್ ಮಾತನಾಡಿ, ಭಗವಂತನಿಗೆ ಹವನದ ಮೂಲಕ ಅರ್ಪಿಸುವ ಹವಿಸ್ಸು ಹಾಗೂ ಮಂತ್ರ ಪಠಣದಿಂದಾಗುವ ಪರಿಣಾಮ ಕುರಿತಾಗಿ ವಿವರಿಸಿದರು. ವಿ. ಅನಂತಮೂರ್ತಿ ಭಟ್ಟ ಯಲುಗಾರ್ ಮಾತನಾಡಿ, ಅನಾದಿಕಾಲದಿಂದಲೂ ನಡೆಯುತ್ತ ಬಂದ ಯಜ್ಞ ಯಾಜಗಾದಿಗಳ ಆಚರಣೆ ಅದರಿಂದ ಬರಬಹುದಾದ ಸಂಸ್ಕಾರ ಕುರಿತು ಮಾಹಿತಿ ನೀಡಿದರು.

300x250 AD

ಆಶೀರ್ವಚನ ಪೂರ್ವದಲ್ಲಿ ದೇವಸ್ಥಾನ ಆಡಳಿತ ಸಮಿತಿಯ ಮಂಜುನಾಥ ಹೆಗಡೆ ಕಬ್ನಳ್ಳಿ ವೈದಿಕರಲ್ಲಿ ಪ್ರಾರ್ಥಿಸಿದರೆ, ಧಾರ್ಮಿಕ ವಿಧಿವಿಧಾನದ ಕೈಂಕರ್ಯವನ್ನು ಆಡಳಿತ ಮಂಡಳಿ ಅಧ್ಯಕ್ಷ ಮಹೇಂದ್ರ ಹೆಗಡೆ ಮುಳಖಂಡ ದಂಪತಿ ನೆರವೇರಿಸಿದರು.
ದೇವಸ್ಥಾನದ ಸೀಮೆಗೆ ಹೊರಭಾಗದಿಂದಲೂ ಅನೇಕ ಭಕ್ತರು ಪಾಲ್ಗೊಂಡು ಮಹಾರುದ್ರ ಹವನ ಯಶಸ್ವಿಯಾಗಿ ನಡೆಯಲು ಸಹಕಾರ ನೀಡಿದ್ದು ಕೊನೆ ದಿನದ ಕಾರ್ಯಕ್ರಮದಲ್ಲಿ ಶಾಸಕ ಭೀಮಣ್ಣ ನಾಯ್ಕ, ಕಾಂಗ್ರೆಸ್ ಮುಖಂಡ ಎಸ್.ಕೆ. ಭಾಗ್ವತ್ ಶಿರಸಿಮಕ್ಕಿ, ಮಾರಿಕಾಂಬಾ ದೇವಸ್ಥಾನದ ಬಾಬುದಾರರಾದ ಜಗದೀಶ ಗೌಡ ಪಾಲ್ಗೊಂಡರು.

Share This
300x250 AD
300x250 AD
300x250 AD
Back to top