ಶಿರಸಿ: ಐತಿಹಾಸಿಕ ಹಿನ್ನೆಲೆ ಹೊಂದಿದ ಕ್ಷೇತ್ರ ಸೋಮಸಾಗರದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಜು.20ರಿಂದ ಆರಂಭಗೊಂಡ ಮಹಾರುದ್ರ ಹವನ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಅತ್ಯಂತ ಶ್ರದ್ಧಾಭಕ್ತಿಯಿಂದ ಸಾವಿರಾರು ಭಕ್ತರೊಡಗೂಡಿ ನಡೆಯುತ್ತಿದೆ.
ಮಹಾರುದ್ರ ಪಠಣದಲ್ಲಿ 50 ಅನುಭವಿ ವೈದಿಕರನ್ನೊಳಗೊಂಡು ನಿರಂತರ ಮೂರು ದಿನಗಳ ಕಾಲ ಮಂತ್ರಪಠಣ ನಡೆದಿದ್ದು, ಇದೇ ಸಂದರ್ಭದಲ್ಲಿ ಸುಮಾರು 150ಕ್ಕೂ ಹೆಚ್ಚಿನ ಸುಮಂಗಲಿಯರಿಂದ ಲಲಿತಾಸಹಸ್ರನಾಮ, ಕುಂಕುಮಾರ್ಚನೆ ನಿರಂತರವಾಗಿ ನಡೆಯುತ್ತಿದೆ. ಇನ್ನೂ 2 ದಿನಗಳ ಕಾಲ ನಡೆಯುವ ಈ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಪಾಲ್ಗೊಳ್ಳಲು ಅವಕಾಶವಿದ್ದು ಜು. 24 ರಂದು ಪ್ರಸಾದ ವಿತರಣೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಸಮಿತಿ ತಿಳಿಸಿದೆ.