ಶಿರಸಿ: ಗಿಡಗಂಟಿಗಳಿ0ದ ತುಂಬಿ ಹೋಗಿದ್ದ ಕೋಟೆಕೆರೆ ಹಾಗೂ ದೇವಿಕೆರೆ ಉದ್ಯಾನವನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ನಗರಸಭೆ ಚಾಲನೆ ನೀಡಿದೆ. ಎರಡು ಕೆರೆಗಳ ಸುತ್ತಮುತ್ತ ಗಿಡಗಂಟಿ ಹಾಗೂ ಪಾಚಿಗಳು ಬೆಳೆದುಕೊಂಡಿದ್ದು, ಕೆರೆಯ ಸೌಂದರ್ಯತೆಗೆ ಧಕ್ಕೆ ತಂದಿತ್ತು. ಇದೇ ರೀತಿಯಾಗಿ ವಾಯುವಿಹಾರಿಗಳಿಗೂ ಇದರಿಂದ ತೊಂದರೆಯಾಗಿತ್ತು. ಎರಡೂ ಕೆರೆಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ವಾಯುವಿಹಾರಿಗಳು ಬರುತ್ತಿದ್ದರು.
ಆದರೆ ಕೆರೆಗಳ ಸುತ್ತಮುತ್ತ ಗಿಡಗಂಟಿಗಳು ಬೆಳೆದಿರುವುದು ತಿರುಗಾಡಲೂ ಆಗದ ಪರಿಸ್ಥಿತಿಯನ್ನ ಸೃಷ್ಟಿಸಿತ್ತು. ನಗರಸಭೆಯ ಪೌರಾಯುಕ್ತ ಕಾಂತರಾಜ ನಿರ್ದೇಶನದಂತೆ ಕಂದಾಯ ಅಧಿಕಾರಿಗಳಾಗಿ ಬಂದಿರುವ ಆರ್.ಎಮ್.ವೆರ್ಣೇಕರ್, ಕೋಟೆಕೆರೆ ಹಾಗೂ ದೇವಿಕೆರೆ ಉದ್ಯಾನವನ್ನು ಪೌರಕಾರ್ಮಿಕರಿಂದ ಸ್ವಚ್ಛಗೊಳಿಸುತ್ತಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.